NEWSನಮ್ಮಜಿಲ್ಲೆನಮ್ಮರಾಜ್ಯ

ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌

ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಜಂಟಿ ಅ*ಗ್ಯರು ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಕೂಟ ಹಾಗೂ ಒಕ್ಕೂಟದ ಪದಾಧಿಕಾರಿ ಜಯರಾಮ್‌ ರಾಥೋಡ್‌ ಸವಾಲ್‌ ಹಾಕಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು,  ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿಯ ನೀವು ಈ ಹೋರಾಟದಿಂದ ಹಿಂದೆ ಸರಿಯುತ್ತೀರೆಂಬ ನಿಮ್ಮ ಸಂಘಟನೆಯ ಮುಖಂಡರುಗಳ ಆಂತರಿಕ ವರದಿ ನನ್ನ ಬಳಿ ಇದೆ… ಎಚ್ಚರ ಎಂದು  ಹೇಳಿದ್ದಾರೆ.

ಸಾರಿಗೆ ನೌಕರರಿಗೆ ಒಳಿತಾಗೋ ಹಾಗಿದ್ದರೆ ಕೂಟ ಮತ್ತು ಒಕ್ಕೂಟ ಯಾವ ತ್ಯಾಗಕ್ಕೂ ಸಿದ್ಧ ಎಂದು ವಾಗ್ದಾನ ಮಾಡಿದ್ವಿ ನುಡಿದಂತೆ ನಡೆಯುತ್ತಿದ್ದೇವೆ. ಆದರೆ ಜಂಟಿ ಕ್ರಿಯಾ ಸಮಿತಿ ನೌಕರರಿಗೆ ಒಳ್ಳೆಯದನ್ನ ಮಾಡುವ ಇಚ್ಛಾಶಕ್ತಿ ಇದ್ದರೆ ನಿನ್ನೆ ದಿನ ಒಬ್ಬ ಹಿಂಬಾಲಕನನ್ನು ಬಿಟ್ಟು ಆಡಿಯೋ ಮಾಡಿ ನೌಕರರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿರಲಿಲ್ಲ.

ಇನ್ನು ಜಂಟಿ ಗಂಡು ಮಕ್ಕಳು ಇದ್ದರೆ ನೌಕರರನ್ನು ವಿರೋಧ ಕಟ್ಟಿಕೊಂಡು ಹೋರಾಟ ಮಾಡಿಯೇ ತೀರಬೇಕು, ಇಲ್ಲದಿದ್ದರೆ ಬಳೆ ತೊಟ್ಟುಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸಾರಿಗೆ ನೌಕರರ ಏಳಿಗೆಗಾಗಿ ಮತ್ತು ಭವಿಷ್ಯದ ಬೆಳವಣಿಗೆಗಾಗಿ ಒಂದು ಹೆಜ್ಜೆ ಹಿಂದೆ ಇಟ್ಟು ಕೂಟ ಮತ್ತು ಒಕ್ಕೂಟ ಒಕ್ಕೋರಲಿನ ಹೋರಾಟಕ್ಕೆ ಮುಂದಾಗಿದೆ. ನಿಮಗೆ ನೌಕರರ ಹಿತಾಶಕ್ತಿ ಬೇಕಾಗಿದ್ದರೆ ಒಂದೇ ವೇದಿಕೆಯಿಂದ ಹೋರಾಟಕ್ಕೆ ಮುಂದಾಗಿ, ಇಲ್ಲವಾದರೆ ನೈತಿಕ ಹೊಣೆ ಹೊತ್ತು ಸಂಘಟನೆಯನ್ನು ವಿಸರ್ಜನೆ ಮಾಡಿ ಬಳೆ ತೊಟ್ಟು ಮನೆಗೆ ಹೋಗಿ ಎಂದು ಹೇಳಿದ್ದಾರೆ.

ಅಲ್ಲದೆ ಒಳ ಒಪ್ಪಂದದ ಪಿತಾಮಹರು ಹೋರಾಟದ ಮುಖವಾಡ ಧರಿಸಿ ನೌಕರರ ಸಮಾಧಿ ಮೇಲೆ ಸವಾರಿ ಮಾಡುವ ಜಂಟಿ ಅಯೋಗ್ಯರು. ನಿಮಗೆ ನಿಜಕ್ಕೂ ದಮ್ಮು ತಾಕತ್ತು ಅನ್ನೋದಿದ್ರೆ ಇದೇ ಮೇ 20 ರಂದು ಪೂರ್ವ ನಿರ್ಧಾರಿತ ಸಾರಿಗೆ ನೌಕರರ ಮುಷ್ಕರ ಮಾಡಿಯೇ ನಿಮ್ಮ ಪೌರುಷ ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ