CRIMENEWS

ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಕೆಂಪಯ್ಯನಹುಂಡಿ ಗ್ರಾಮದ ನಿವಾಸಿಗಳಾದ ಶಿವಣ್ಣ, ನಾಗರತ್ನ ಹಾಗೂ ಪುತ್ರಿ ರಕ್ಷಿತಾ ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವರು

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ತಾಲೂಕಿನ ಕೆಂಪಯ್ಯನಹುಂಡಿಯಲ್ಲಿ ಇನ್ನು ಮೂರು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಸೇರಿ ಆಕೆಯ ಪಾಲಕರು ಯುವಕನೊಬ್ಬನ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಕೆಂಪಯ್ಯನಹುಂಡಿ ಗ್ರಾಮದ ನಿವಾಸಿಗಳಾದ ಶಿವಣ್ಣ, ನಾಗರತ್ನ ಹಾಗೂ ಪುತ್ರಿ ರಕ್ಷಿತಾ ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ.

ಮದುವೆ ನಿಗದಿಯಾಗಿದ್ದ ಯುವತಿ ರಕ್ಷಿತಾಳಿಗೆ ಇದೇ ಗ್ರಾಮದ ಉಲ್ಲಾಸ್ ಗೌಡ ಎಂಬಾತ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದ್ದು, ಮರ್ಯಾದೆಗೆ ಅಂಜಿ ಮತ್ತು ಆರೋಪಿಯ ಕಿರುಕುಳವನ್ನು ತಡೆಯಲಾರದೆ ಈ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮದುವೆ ಸಂಭ್ರಮ ಕುಟುಂಬದಲ್ಲಿ ಮನೆ ಮಾಡಿತ್ತು. ಜತೆಗೆ ಬಂಧು-ಬಳಗ ಎಲ್ಲರೂ ಖುಷಿಯಿಂದ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದರು. ಆದರೆ ಈ ಆರೋಪಿ ಯುವಕ ಬೆದರಿಕೆಗೆ ಇಡೀ ಕುಟುಂಬ ಆತಹತ್ಯೆ ಮಾಡಿಕೊಂಡಿದ್ದು ಮದುವೆ ಮನೆ ಈಗ ಸೂತಕದ  ಮನೆಯಾಗಿದೆ.

ಘಟನೆ ಕಾರಣ ಏನು?: ರಕ್ಷತಾಗೆ ಮದುವೆ ನಿಶ್ಚಯವಾಗಿದ್ದು ಗುರುವಾರ -ಶುಕ್ರವಾರ ಹಸೆಮಣೆ ಏರಬೇಕಾಗಿತ್ತು. ಆದರೆ ಅದೇ ಗ್ರಾಮದ ಯುವಕನೊಬ್ಬ ಯುವತಿಯನ್ನು ಇಷ್ಟಪಡುತ್ತಿದ್ದ ಎನ್ನಲಾಗಿದ್ದು, ಒಂದು ವೇಳೆ ನೀನು ಬೇರೆ ಯುವಕನೊಂದಿಗೆ ಮದುವೆಯಾದರೆ ಕಲ್ಯಾಣ ಮಂಟಪದ ಬಳಿ ಬಂದು ಗಲಾಟೆ ಮಾಡುತ್ತೇನೆಂದು ಬೆದರಿಕೆ ಸಂದೇಶ ಕಳುಹಿಸಿದ್ದಾನೆ.

ವರನಿಗೂ ಮೆಸ್ಸೇಜ್​ ಮಾಡಿದ್ದ ಆರೋಪಿ: ರಕ್ಷಿತಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನಿಗೆ ಉಲ್ಲಾಸ್​ ಗೌಡ ಮೆಸೇಜ್ ಮಾಡಿದ್ದು ಡೆತ್​​ನೋಟ್​ನಲ್ಲಿ ಆರೋಪಿಸಲಾಗಿದ್ದು ಈ ಕುರಿತಂತೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವರುಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಘಟನೆ ಸಂಬಂಧ ಮಾಹಿತಿ ಪಡೆದರು. ಡೆತ್ ನೋಟ್​ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆ ಕೈಕೊಳ್ಳಲಾಗಿದೆ ಎಂದು ತಿಳಿಸಿದರು.

ಮದುವೆಗೆ ಸಿದ್ಧತೆ  ಮನೇಲಿ ಶೋಕ: ಎರಡು ದಿನಗಳಲ್ಲಿ ಯುವತಿಯ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ಈ ನಡುವೆ ವಧು ರಕ್ಷಿತಾಳನ್ನು ಗ್ರಾಮದ ಉಲ್ಲಾಸ್ ಗೌಡ ಪ್ರೀತಿಸಿದ್ದು, ಮದುವೆ ಆಗುತ್ತೇನೆ ಎಂದು ಕುಟುಂಬದವರಿಗೆ ಹೇಳಿದ್ದ. ಆದ್ರೆ ಆತನ ಪ್ರಸ್ತಾಪವನ್ನು ರಕ್ಷಿತಾ, ಮತ್ತು ಆಕೆಯ ಅಪ್ಪ – ಅಮ್ಮ ವಿರೋಧಿಸಿದ್ದರು.

ಅಲ್ಲದೆ, ರಕ್ಷಿತಾಳಿಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿಶ್ಚಿತಾರ್ಥ ಆಗಿದೆ ಈಗ ನೀನು ಈರೀತಿ ಹೇಳಿದರೆ ಹೇಗೆ ಎಂದು ಬುದ್ಧಿವಾದ ಹೇಳಿದ್ದರಂತೆ. ಅಲ್ಲದೆ ಈಕೆಗೆ ಮದುವೆಗೆ ಬೇಕಾದ ಎಲ್ಲ ಸಿದ್ಧತೆಯನ್ನಿ ಈತನೆ ಮನೆಮಗನ ರೀತಿ ಮಾಡುತ್ತಿದ್ದ. ಆದರೆ ಇನ್ನು ನಾಲ್ಕು ದಿನ ಇರುವಾಗ ಕಿರುಕುಳ ನೀಡುತ್ತಿದ್ದ ಸಕಲ ತಯಾರಿ ಮಾಡಿಕೊಂಡಿದ್ದರು ಎಂದು ಸ್ಥಳೀಯರ ತಿಳಿಸಿದ್ದಾರೆ.

ಇನ್ನು ಕುಟುಂಬದವರು ಈ ರೀತಿ ದುರಂತ ಅಂತ್ಯ ಕಂಡಿರುವುದು ಮದುವೆ ಸಂಭ್ರಮವಿರಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಇದಕ್ಕೆ ಕಾರಣವಾಗಿರುವ ಉಲ್ಲಾಸ್‌ ಗೌಡನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಾಡಿಗಳನ್ನು ಮರಣೋತ್ತರ ಪರೀಕ್ಷೆಗೆ ಕೊಡದೆ ಪಟ್ಟುಹಿಡಿದು ಪ್ರತಿಭಟಿಸಿದರು. ಬಳಿಕ ಪೊಲೀಸರು ಮನವೊಲಿಸಿ ಶವಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು ಸ್ಥಳೀಯರು.

Deva
the authorDeva

Leave a Reply

error: Content is protected !!
Latest news
ತಿ.ನರಸೀಪುರ: ಯುವಕನ ಕಿರುಕುಳದಿಂದ ಮದುವೆ ನಿಶ್ಚಯವಾಗಿದ್ದ ಯುವತಿ ಜತೆಗೆ ಅಪ್ಪಅಮ್ಮ ಆತ್ಮಹತ್ಯೆ ತಿ.ನರಸೀಪುರ: ವಿದ್ಯುತ್‌ ಖಾಸಗೀಕರಣ ವಿರೋಧಿಸಿ ರೈತರ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಚಾಲನೆಯಲ್ಲಿದ್ದ ಬಸ್‌ನ ಸ್ಟೇರಿಂಗ್‌ ಹಿಡಿದ ಕುಡುಕ- ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್‌ ಡಿಕ್ಕಿ, 11 ಮಂದಿಗೆ ಗಂಭೀರ... KSRTC: ಶೇ.44 ರಷ್ಟು ಬಸ್‌ ಪ್ರಯಾಣ ದರ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಗೃಹಜ್ಯೋತಿಯಿಂದ ಸರ್ಕಾರಿ ನೌಕರರ ಹೊರಗಿಡಲು ಸರ್ಕಾರದ ಚಿಂತನೆ ಸರ್ಕಾರಿ ನೌಕರಿ ಮಹಿಳೆಯರಿಗೆ ಇನ್ನು ಮುಂದೆ ಸಿಗಲ್ವ ಶಕ್ತಿ ಯೋಜನೆಯ ಉಚಿತ ಪ್ರಯಾಣ? KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು ವಾಯವ್ಯ ಸಾರಿಗೆ ಬಸ್‌- ಬೈಕ್‌ ನಡುವೆ ಡಿಕ್ಕಿ ಹೊತ್ತಿ ಉರಿದ ಬೈಕ್‌- ಸವಾರ ಸಜೀವ ದಹನ ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು