NEWSನಮ್ಮರಾಜ್ಯ

KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು

ವೇತನ ಪರಿಷ್ಕರಣೆ ಹಿಂಬಾಕಿ ವೇತನದ ಬಿಲ್ಲುಗಳನ್ನು ಸಲ್ಲಿಸಲು ಜೂ.20ರವರೆಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಬಿಲ್ಲುಗಳನ್ನು ತಯಾರಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಬಹುತೇಕ ಎಲ್ಲ ಡಿಪೋಗಳು ಮಂಡಿಸಿವೆ.

ವಿಜಯಪಥ ಸಮಗ್ರ ಸುದ್ದಿ

ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ 14 ತಿಂಗಳುಗಳ ಹಿಂಬಾಕಿ ವೇತನ ಪಾವತಿಸಲು ಕೇಂದ್ರ ಕಚೇಯಿಂದ ಯಾವುದೇ ಸಮಯದಲ್ಲಾದರೂ ಆದೇಶ ಬರುವ ಸಂಭಂವವಿದೆ ಎಂದು ಯಾದಗಿರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಇನ್ನು ಈ ಸಂಬಂಧ 14 ತಿಂಗಳ ಬಿಲ್ಲುಗಳನ್ನು ತಯಾರಿಸಿ ಜೂನ್‌ 20 ರೊಳಗಾಗಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಮಂಡಿಸಬೇಕು ಎಂದು ಇದೇ ಜೂನ್‌ 11ರಂದು ಎಲ್ಲ ಘಟಕಗಳಿಗೂ ಆದೇಶ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಲ್ಲುಗಳನ್ನು ತಯಾರಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಬಹುತೇಕ ಎಲ್ಲ ಡಿಪೋಗಳು ಮಂಡಿಸಿವೆ.

ಬಿಲ್ಲುಗಳನ್ನು ತಯಾರಿಸಿ ವಿಳಂಬಕ್ಕೆ ಆಸ್ಪದ ನೀಡದಂತೆ ಮೇಲೆ ಸೂಚಿಸಿದ ದಿನಾಂಕ ರೊಳಗಾಗಿ ಹಿಂಬಾಕಿ ವೇತನದ ಬಿಲ್ಲುಗಳನ್ನು ತಯಾರಿಸಿ ಲೆಕ್ಕಪತ್ರ ಶಾಖೆಗೆ ಸಲ್ಲಿಸಬೇಕು, ತಪ್ಪಿದ್ದಲ್ಲಿ ವಿಳಂಬಕ್ಕೆ ಕಾರಣರಾದ ಆಡಳಿತ/ ಲೆಕ್ಕಪತ್ರ ಶಾಖೆಯ ಸಿಬ್ಬಂದಿಗಳನ್ನು ನೇರ ಹೊಣೆಗಾರರನ್ನಾಗಿಸಿ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದರು.

ಯಾದಗಿರಿ, ಶಹಾಪೂರ, ಸುರಪೂರ, ಗುರಮಠಕಲ್ ಘಟಕ ಹಾಗೂ ವಿಭಾಗೀಯ ಕಾರ್ಯಾಗಾರದ ಲೆಕ್ಕಪತ್ರ ಶಾಖೆಯಗೆ ಸೂಚನೆ ನೀಡಲಾಗಿತ್ತು. ಇವುಗಳಲ್ಲಿ ಇನು ಕೆಲವರು ಬಿಲ್ಲುಗಳನ್ನು ತಯಾರಿಸಿಲ್ಲ ಎಂದು ತಿಳಿದು ಬಂದಿದ್ದು ಕೂಡಲೇ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು.

ಆದಾಗ್ಯೂ ಬಿಲ್ಲುಗಳನ್ನು ತಯಾರಿಸಿ ಲೆಕ್ಕಪತ್ರ ಶಾಖೆಗೆ   ಮಂಡಿಸದೆ ಇರುವ  ಡಿಪೋಗಳು ಸೂಕ್ತ ಕಾರಣ ನೀಡಿ ಕೂಡಲೇ ಮಂಡಿಸಬೇಕು ಎಂದು ತಿಳಿಸಿದ್ದಾರೆ.

ಹಿಂದೆ ಸಂಸ್ಥೆಯ ಆದೇಶ: 01.01.2021 ರಿಂದ 28.02.2023 ರವರೆಗೆ ವೇತನ ಪರಷ್ಕರಣೆಯ 26 ತಿಂಗಳ ಹಿಂದಾಕಿ ಮೊತ್ತದಲ್ಲಿ ಮೊದಲ 12 ತಿಂಗಳ ಹಿಂಬಾಕಿ ಮೊತ್ತವನ್ನು ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು ಅನುಮೋದನೆ ನೀಡಿದ್ದು ಅದರನ್ವಯ ಆದೇಶ ಹೊರಡಿಸಿ ಮೇ ತಿಂಗಳಿನಲ್ಲಿ 12 ತಿಂಗಳ ವೇತನ ಹಿಂಬಾಕಿಯನ್ನು ನೌಕರರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ.

ಸರ್ಕಾರವು ಮೊದಲ ಕಂತಿನಲ್ಲಿ ಕೆಕೆಆರ್‌ಟಿಸಿ ನಿಗಮಕ್ಕೆ 81.91 ಕೋಟಿ ರೂ. ಬಿಡುಗಡೆ ಮಾಡಿ ಆದೇಶಿಸಿದ್ದು ಅದರನ್ವಯ ನಿಗಮದಲ್ಲಿ 01.01.2021 ರಿಂದ 31.12.2021 ವರೆಗೆ ಒಟ್ಟು 12 ತಿಂಗಳ ಹಿಂಬಾಕಿ ಮೊತ್ತವನ್ನು ಮೇ 11ರಂದು ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ (ನಿವೃತ್ತ ಅಧಿಕಾರಿ/ನೌಕರರು ಒಳಗೊಂಡಂತೆ) ಪಾವತಿಸಲಾಗಿತ್ತು.

ಇನ್ನೂಳಿದ ಮಾಹೆ 01.01.2022 ರಿಂದ 28.02.2023 ರವರೆಗೆ 14 ತಿಂಗಳುಗಳ ಹಿಂಬಾಕಿ ವೇತನ ಪಾವತಿಸಲು ಕೇಂದ್ರ ಕಚೇಯಿಂದ ಈಗ ಯಾವುದೇ ಸಮಯದಲ್ಲಾದರೂ ಆದೇಶ ಬರುವ ಸಂಭಂವವಿದೆ. ಆದ ಕಾರಣ ಈ ಬಿಲ್ಲುಗಳನ್ನು ತಯಾರಿಸಿ ವಿಭಾಗೀಯ ಲೆಕ್ಕಪತ್ರ ಶಾಖೆಗೆ ಪರಿಶೀಲನೆಗಾಗಿ ಮಂಡಿಸಬೇಕು ಎಂದು ಡಿಸಿ ಆದೇಶ ಹೊರಡಿಸಿದ್ದಾರೆ.

Deva
the authorDeva

Leave a Reply

error: Content is protected !!
Latest news
KKRTC ನೌಕರರ 14 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಆದೇಶ ಯಾವುದೇ ಸಮಯದಲ್ಲಾದರೂ  ಹೊರಬೀಳಬಹುದು ಜೀವನದಲ್ಲಿ ದಿನಂಪ್ರತಿ ಯೋಗಾಭ್ಯಾಸ ಅಳವಡಿಸಿಕೊಳ್ಳಿ: ಡಿಸಿ ಡಾ. ಅನುರಾಧ ಕರೆ ಕೆರೆಗೆ ವೈದ್ಯಕೀಯ ತ್ಯಾಜ್ಯ ಹಾಕಿದ ಆರೋಪ: ಡಾಕ್ಟರ್ ವಿರುದ್ಧ ಎಫ್‌ಐಆರ್ ದಾಖಲು ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್‌ ಬೃಹತ್‌ ಪಾದಯಾತ್ರೆ- ಇದು ಕೇವಲ ಭಾಷಣಕ್ಕಷ್ಟೇ ಅಲ್ಲ: ನಿಖಿಲ್ ಕುಮಾರಸ್ವಾಮಿ ಎಚ್... ನಿಂತಿರುವ ಕಾಲೇಜು ವಿದ್ಯಾರ್ಥಿ ಚುನಾವಣೆ ಇದೇ ವರ್ಷದಿಂದ ಮತ್ತೆ ಆರಂಭ: ಸಿಎಂ ಡಿಕೆಶಿ ಅಪ್ಪ ಅಂದ್ರೆ ಭಯ- ಧೈರ್ಯ ಅಪ್ಪ ಅಂದ್ರೆ ಭವಿಷ್ಯದ ಗುರು ಅಪ್ಪ ಅಂದ್ರೆ ಆಲದ ಮರ ಇದಾವುದು ಅಲ್ಲ ಪದಗಳಿಗೆ ನಿಲುಕದ ದೈವ ಗ್ರಾಚ್ಯುಟಿ ಸೇರಿ 10 ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸಲ್ಲ KSRTC: ಅತೀ ಶೀಘ್ರದಲ್ಲೇ ಶೇ.15ರಿಂದ 20ರಷ್ಟು ಬಸ್‌ ಪ್ರಯಾಣ ದರ ಏರಿಕೆ- ಸುಳಿವುಕೊಟ್ಟ ಮುಖ್ಯಮಂತ್ರಿ ಡಿಕೆಶಿ ವಿದ್ಯುತ್‌ ಖಾಸಗೀಕರಣ ನಿಲ್ಲಿಸಲು ಆಗ್ರಹಿಸಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಪ್ರತಿಭಟನೆ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸ...