BMTC ಘಟಕ 29: ಡಿಪೋ ಆವರಣದಲ್ಲಿ ಎಲೆಕ್ಟ್ರಿಕ್ ಬಸ್ ಡಿಕ್ಕಿ- ಚಾಲಕನಿಗೆ ತೀವ್ರ ಗಾಯ
ಘಟಕದ ಆವರಣದಲ್ಲಿ ಬರುತ್ತಿದ್ದ ಚಾಲಕನಿಗೆ ಅತೀ ವೇಗವಾಗಿ ಬಂದ ಬಸ್ ಚಾಲಕನಿಗೆ ನಿಯಂತ್ರಣ ತಪ್ಪಿ ಜೋರಾಗಿ ಡಿಕ್ಕಿ ಹೊಡೆದಿದೆ. ಪರಣಾಮ ಮತ್ತೊಬ್ಬ ಚಾಲಕನ ಬಲಗೈ ಮೊಳಸಂದು ಕಿತ್ತು ಬಂದಿದ್ದು, ಭಾರಿ ರಕ್ತಸ್ರಾವವಾಗಿ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಘಟಕ-29ರಲ್ಲಿ ನಿನ್ನೆ ರಾತ್ರಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಾಲಕರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಘಟಕದ ಆವರಣದಲ್ಲಿ ಬರುತ್ತಿದ್ದ ಚಾಲಕನಿಗೆ ಅತೀ ವೇಗವಾಗಿ ಬಂದ ಬಸ್ ನಿಯಂತ್ರಣ ತಪ್ಪಿ ಜೋರಾಗಿ ಡಿಕ್ಕಿ ಹೊಡೆದಿದೆ. ಪರಣಾಮ ನಡೆದುಕೊಂಡು ಬರುತ್ತಿದ್ದ ಚಾಲಕನ ಬಲಗೈ ಮೊಳಸಂದು ಕಿತ್ತು ಬಂದಿದ್ದು, ಭಾರಿ ರಕ್ತಸ್ರಾವವಾಗಿ.
ಅಪಘಾತದ ತೀವ್ರತೆಗೆ ಚಾಲಕನ ಬಲಗೈ ಮೊಳಸಂದಿಗೆ ಗಂಭೀರ ಪೆಟ್ಟಾಗಿದ್ದು, ಮೂಳೆ ಮುರಿತ ಸಂಭವಿಸಿದೆ. ಘಟನೆಯ ಬೆನ್ನಲ್ಲೇ ತೀವ್ರ ರಕ್ತಸ್ರಾವ ಉಂಟಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ.
ರಾತ್ರಿ ಪಾಳಿಯ ಕರ್ತವ್ಯದ ವೇಳೆ ಈ ದುರ್ಘಟನೆ ನಡೆದಿದ್ದು, ಬಸ್ ಚಾಲನೆ ಮಾಡುವಾಗ ನಿರ್ಲಕ್ಷ್ಯ ವಹಿಸಲಾಗಿದೆಯೇ ಅಥವಾ ಬ್ರೇಕ್ ವೈಫಲ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ.
ಇತ್ತ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಘಟಕದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದಾರೆ.







