NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ಮೇ 11ರಂದು ಹಾಲಿ ನೌಕರರಿಗೆ, ಮೇ 15ರಂದು ನಿವೃತ್ತರಿಗೆ ಮೇ18ರಂದು ವರ್ಗಾವಣೆಗೊಂಡ ನೌಕರರಿಗೆ 11 ತಿಂಗಳುಗಳ ವೇತನ ಹಿಂಬಾಕಿ ಪಾವತಿಸಲು ಆದೇಶ

ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ ನೌಕರರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 18 ರಂದು ಆಯಾ ನಿಗಮ/ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದು.

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಾಲಿ ಸೇವೆಯಲ್ಲಿರುವ ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿಯನ್ನು ಮೇ 11ರಂದು ಪಾವತಿಸಲು ಹಾಗೂ ನಿವೃತ್ತ ನೌಕರರಿಗೆ ಮೇ 15ರಂದು ಪಾವತಿಸಲು ನಿಗಮದ ಮುಖ್ಯಲೆಕ್ಕಾಧಿಕಾರಿ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪ್ರಿಯಾಂಗಾ ಅವರು ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಿಗಮದ ಮುಖ್ಯಲೆಕ್ಕಾಧಿಕಾರಿ ಇಂದು ಮಧ್ಯಾಹ್ನ ಈ ಸಂಬಂಧ ಅಧಿಕೃತವಾಗಿ ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಕರ್ನಾಟಕ ಸರ್ಕಾರವು ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರಿಗೆ 01.01.2021 ರಿಂದ 26.02.2023ರವರೆಗೆ ಒಟ್ಟು 26 ತಿಂಗಳ 2020ರ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ.

ಮುಂದುವರೆದು, ಕರ್ನಾಟಕ ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿ/ ನೌಕರರ (ಪೂರ್ವ ಕಿಂಕೂ ನೌಕರರು ಸೇರಿದಂತೆ) 01.01.2021 ರಿಂದ 28.02.2023 ರವರೆಗೆ ಒಟ್ಟು 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳಲ್ಲಿ ಪ್ರಸ್ತುತ 450 ಕೋಟಿ ರೂ.ಗಳನ್ನು (ನಾಲ್ಕು ನೂರಾ ಐವತ್ತು ಕೋಟಿಗಳು ಮಾತ್ರ) ಷರತ್ತುಗಳಿಗೊಳಪಟ್ಟು ನಿಗಮವಾರು ಬಿಡುಗಡೆಗೊಳಿಸಿ ಆದೇಶಿಸಿದೆ.

ಅದರಂತೆ ಹಂಚಿಕೆಯಲ್ಲಿ NWKRTC ಸಂಸ್ಥೆಗೆ ಒಟ್ಟು 87 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಈ ಬಿಡುಗಡೆಗೊಳಿಸಿರುವ ಮೊತ್ತದಲ್ಲಿ 01.01.2021 ರಿಂದ 30.11.2021 ರವರೆಗೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಸುವ ವಿಷಯವಾಗಿ ಈ ಕೆಳಗಿನಂತೆ ಕ್ರಮ ವಹಿಸಲು ಸೂಕ್ತಾಧಿಕಾರಿಗಳು ಆದೇಶಿಸ ಹೊರಡಿಸಿದ್ದಾರೆ ಎಂದು ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.

1) ಸಂಸ್ಥೆಯ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಗೆ 01.01.2021ರಿಂದ 30.11.2021 ರವರೆಗಿನ ಅಂದರೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 11ರಂದು ಪಾವತಿಸುವುದು.

2) 01.01.2021 ರಿಂದ 30.11.2021 ರವರೆಗಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ವಿಮುಕ್ತರಾದ (ನಿವೃತ್ತಿ/ ಸ್ವಯಂ ನಿವೃತ್ತಿ/ ವಜಾ/ ಮರಣ/ ರಾಜೀನಾಮೆ ಸೇರಿದಂತೆ) ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತವನ್ನು ಮೇ 15 ರಂದು ಪಾವತಿಸುವುದು.

3) ಇನ್ನು 01.01.2021 ರಿಂದ 30.11.2021ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ ನೌಕರರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 18 ರಂದು ಆಯಾ ನಿಗಮ/ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದು.

4) ಹಾಲಿ ಕರ್ತವ್ಯ ನಿರ್ವಹಿಸುತ್ತಿತುವ ಅಧಿಕಾರಿ/ ನೌಕರರ ಹಿಂಬಾಕಿ ಪಾವತಿಗಾಗಿ ನಿಧಿ ವರ್ಗಾವಣೆ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಮೇ 10 ರಂದು ಈ ಕೆಳಗಿನಂತೆ ಮಾಹಿತಿ ನೀಡುವುದು. ಈ ಸಂಬಂಧ 11/05/2026 ರಂದು ನಿಧಿ ವರ್ಗಾವಣೆ ಮಾಡಲಾಗುವುದು. ಈ ನಿಧಿಯನ್ನು ಬಳಿಸಿಕೊಂಡು ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ ಈ ಮೇಲೆ ತಿಳಿಸಿರುವಂತೆ ಕ್ರಮವಹಿಸಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.

5) 01.01.2021 ರಿಂದ 30.11.2021 ರವರೆಗಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ವಿಮುಕ್ತರಾದ (ನಿವೃತ್ತಿ/ ಸ್ವಯಂ ನಿವೃತ್ತಿ/ ವಜಾ/ ಮರಣ/ ರಾಜೀನಾಮೆ ಸೇರಿದಂತೆ) ಅಧಿಕಾರಿ/ನೌಕರರ ಹಾಗೂ .01.01.2021 ರಿಂದ 30.11.2021 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ ನೌಕರರ ಹಿಂಬಾಕಿ ಪಾವತಿಗಾಗಿ ನಿಧಿ ವರ್ಗಾವಣೆ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಅನುಕ್ರಮವಾಗಿ 13/05/2026 ಹಾಗೂ 15/05/2026 ರಂದು ಮಾಹಿತಿ ನೀಡುವುದು. ಈ ಸಂಬಂಧ ನಿಧಿ ವರ್ಗಾವಣೆ ಮಾಡಲಾಗುವುದು. ಈ ನಿಧಿಯನ್ನು ಬಳಿಸಿಕೊಂಡು ಎಲ್ಲ ಅರ್ಹ ಅಧಿಕಾರಿ/ನೌಕರರಿಗೆ ಈ ಮೇಲೆ ತಿಳಿಸಿರುವಂತೆ ಕ್ರಮವಹಿಸಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

admin
the authoradmin

Leave a Reply

error: Content is protected !!
Latest news
NWKRTC: ಮೇ 11ರಂದು ಹಾಲಿ ನೌಕರರಿಗೆ, ಮೇ 15ರಂದು ನಿವೃತ್ತರಿಗೆ ಮೇ18ರಂದು ವರ್ಗಾವಣೆಗೊಂಡ ನೌಕರರಿಗೆ 11 ತಿಂಗಳುಗಳ ವೇ... ಮೇ 11ರಂದು KSRTC ನೌಕರರಿಗೆ 11 ತಿಂಗಳು- KKRTC ನೌಕರರಿಗೆ 12 ತಿಂಗಳುಗಳ ವೇತನ ಹಿಂಬಾಕಿ ಪಾವತಿಗೆ ಆದೇಶ ಸಾರಿಗೆ ನೌಕರರಿಗೆ ಬಿಡುಗಡೆಯಾಗಿರುವ 450 ಕೋಟಿ ರೂ.ನಲ್ಲಿ KSRTC ನೌಕರರಿಗೆ ಮೇ 11ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ... ಮೇ 20ರ ಪೂರ್ವ ನಿರ್ಧಾರಿತ ಮುಷ್ಕರ ಮಾಡಿ ಪೌರುಷ ತೋರಿಸಿ: ಜಂಟಿ ಸಮಿತಿಗೆ ಒಕ್ಕೂಟದ ಜಯರಾಮ್‌ ರಾಥೋಡ್‌ ಸವಾಲ್‌ KSRTC ನೌಕರರ ಕೂಟ- ಜಂಟಿ ಸಮಿತಿ ಸಭೆ ಸೇರುವ ಬಗ್ಗೆ ಎರಡು ದಿನದಲ್ಲಿ ನಿರ್ಣಯ: ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಟಿವಿಕೆ ಸರ್ಕಾರ ರಚನೆಗೆ ಸಂಖ್ಯಾಬಲದ ಅಡ್ಡಿ: ರಾಜ್ಯಪಾಲರ ಪವರ್ ಏನು, ಸುಪ್ರೀಂಕೋರ್ಟ್ ವಕೀಲರಾದ ಶಿವರಾಜು ಏನು ಹೇಳುತ್ತಾ... ರಾಜೀನಾಮೆ ನೀಡದೇ ಹೈಡ್ರಾಮಾ ಮಾಡಿದ್ದ ಮಮತಾ ಬ್ಯಾನರ್ಜಿ- ಸರ್ಕಾರ ವಜಾಗೊಳಿಸಿದ ರಾಜ್ಯಪಾಲ KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪ... ಅನ್ನದಾತರಿಗೆ ಸಾಲ ಕೊಡಲು ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿ ಕೈಬಿಡಬೇಕು: ಆರ್‌ಬಿಐ ಅಧಿಕಾರಿಗಳಿಗೆ ಕುರುಬೂರು ಶಾಂತಕ... ಬಸ್–ತೈಲ ಟ್ಯಾಂಕರ್ ನಡುವೆ ಡಿಕ್ಕಿ: 16 ಮಂದಿ ಸಜೀವ ದಹನ, ಕ್ಷಣಾರ್ಧದಲ್ಲಿ ಹೊತ್ತಿ ಉರಿದ ವಾಹನಗಳು