NEWSನಮ್ಮಜಿಲ್ಲೆನಮ್ಮರಾಜ್ಯ

KSRTC: ನಿವೃತ್ತರಾದ 25ದಿನದೊಳಗೆ ಭವಿಷ್ಯ ನಿಧಿ ಪಾವತಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ವಿಳಂಬದ ಬಡ್ಡಿ ಬರಿಸಬೇಕು- ಪಿಎಫ್‌ ಕಾರ್ಯದರ್ಶಿ ಆದೇಶ

ಇನ್ನು ಮುಂದೆ ಪ್ರತಿ ಮಾಹೆಯ 15ನೇ ತಾರೀಖಿನೊಳಗೆ ಭ.ನಿ./ ಐ.ಭ.ನಿ ಅಂತಿಮ ಅಭ್ಯರ್ಥನಗಳನ್ನು ಮಂಜೂರಾತಿಗಾಗಿ ನ್ಯಾನ ಮಂಡಳಿಗೆ ಸಲ್ಲಿಸಬೇಕು. ಅಲ್ಲದೆ 25ನೇ ತಾರೀಖಿನೊಳಗೆ ಅಭ್ಯರ್ಥನಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಾಕೀತು ಮಾಡಿದ್ದಾರೆ.

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿಗಳು/ ನೌಕರರಿಗೆ ತ್ವರಿತವಾಗಿ ಭವಿಷ್ಯ ನಿಧಿ/ ಐಚ್ಛಿಕ ಭವಿಷ್ಯ ನಿಧಿಯ ಅಂತಿಮ ಅಭ್ಯರ್ಥನಗಳನ್ನು ತ್ವರಿತವಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಭವಿಷ್ಯ ನಿಧಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, ಇನ್ನು ಮುಂದೆ ಪ್ರತಿ ಮಾಹೆಯ 15ನೇ ತಾರೀಖಿನೊಳಗೆ ಭ.ನಿ./ ಐ.ಭ.ನಿ ಅಂತಿಮ ಅಭ್ಯರ್ಥನಗಳನ್ನು ಮಂಜೂರಾತಿಗಾಗಿ ನ್ಯಾನ ಮಂಡಳಿಗೆ ಸಲ್ಲಿಸಬೇಕು. ಅಲ್ಲದೆ 25ನೇ ತಾರೀಖಿನೊಳಗೆ ಅಭ್ಯರ್ಥನಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳುವುದು ಎಂದು ತಾಕೀತು ಮಾಡಿದ್ದಾರೆ.

ಇನ್ನು ಒಂದು ವೇಳೆ ಸಾರಿಗೆ ಸಂಸ್ಥೆಗಳ ವಿಭಾಗಗಳಿಂದ ಅನಗತ್ಯವಾಗಿ ವಿಳಂಬ ಉಂಟಾದಲ್ಲಿ ನಿವೃತ್ತ ನೌಕರರು/ ನಾಮಿನಿದಾರರಿಂದ ಬರುವ ದೂರುಗಳಿಗೆ ಹಾಗೂ ಅದರಿಂದ ನ್ಯಾಸ ಮಂಡಳಿಗೆ ಉಂಟಾಗುವ ಆರ್ಥಿಕ ನಷ್ಟಗಳಿಗೆ ಸಂಬಂಧಪಟ್ಟವರನ್ನು ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಕಾರ್ಯದರ್ಶಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ. ಭ.ನಿ ನಿಯಮಾವಳಿ ಅನುಸಾರ ಭ/ ಐ.ಭ ನಿಧಿ ಅಂತಿಮ ಅಭ್ಯರ್ಥನಗಳನ್ನು ನಿವೃತ್ತಿ ನಂತರದ ಮಾಹೆಯ 20ನೇ ತಾರೀಖಿನೊಳಗಾಗಿ ಪಾವತಿಸಬೇಕಿದೆ. ತಪ್ಪಿದಲ್ಲಿ ಪಾವತಿ ಮಾಡುವವರೆಗೆ ವಿಳಂಬ ಬಡ್ಡಿ ಸೇರಿಸಿ ಅಭ್ಯರ್ಥನವನ್ನು ಪಾವತಿ ಮಾಡಬೇಕಾಗಿದೆ.

ಹೀಗಾಗಿ ನಿವೃತ್ತಿ/ ವಜಾ/ ಸ್ವ-ನಿವೃತ್ತಿ/ ನಿಧನ ಹೊಂದಿರುವ ನೌಕರರುಗಳ ಭವಿಷ್ಯ ನಿಧಿ ಅಂತಿಮ ಅಭ್ಯರ್ಥನಗಳನ್ನು ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಮಂಜೂರಾತಿಗಾಗಿ ಸಲ್ಲಿಸುವಂತೆ ಹಲವಾರು ಬಾರಿ ಪತ್ರಗಳ ಮುಖೇನ ಸೂಚನೆ ನೀಡಲಾಗಿದೆ. ಆದರೆ, ಈ ಅಭ್ಯರ್ಥನಗಳನ್ನು ನೌಕರರಿಗೆ / ನಾಮಿನಿದಾರರಿಗೆ ಪಾವತಿಸಲು ವಿಳಂಬವಾಗುವುದಲ್ಲದೇ, ಭ.ನಿ ನಿಯಮಾನುಸಾರ ವಿಳಂಬ ಬಡ್ಡಿ ಪಾವತಿಸಬೇಕಿರುವುದರಿಂದ ನ್ಯಾಸ ಮಂಡಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯ ಕೆಲವು ವಿಭಾಗಗಳಿಂದ ನಿವೃತ್ತ ನೌಕರರು ಅಂತಿಮ ಅಭ್ಯರ್ಥನ ಪಾವತಿಗಳಲ್ಲಿ ವಿಳಂಬವಾಗಿರುವುದರಿಂದ ಹೆಚ್ಚುವರಿಯಾಗಿ ವಿಳಂಬಿತ ಅವಧಿಗೆ ಬಡ್ಡಿ ಪಾವತಿಸುವಂತೆ ನ್ಯಾಸ ಮಂಡಳಿಗೆ ಮನವಿ ಸಲ್ಲಿಸುತ್ತಿದ್ದಾರೆ. ಅಲ್ಲದೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಹೀಗಾಗಿ ಈ ವಿಷಯದ ಬಗ್ಗೆ ಮಂಡಳಿ ಕಾರ್ಮಿಕ ಧರ್ಮದರ್ಶಿಗಳು ಭ.ನಿ. ನ್ಯಾಸ ಮಂಡಳಿಯ 274 ನೇ ಸಭೆಯಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ನಿವೃತ್ತಿ ಹೊಂದಿದ ನಂತರದ ಮಾಹೆಯ 25ನೇ ತಾರೀಖಿನ ನಂತರ ಇತ್ಯರ್ಥವಾಗುವ ಅಭ್ಯರ್ಥನಗಳಿಗೆ ಬಡ್ಡಿ ಪಾವತಿಸಲಾಗುತ್ತಿಲ್ಲವೆಂದು ಅಧ್ಯಕ್ಷರ ಗಮನಕ್ಕೆ ತಂದಿದ್ದು, ಅದಕ್ಕೆ KSRTC ವ್ಯವಸ್ಥಾಪಕ ನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಗದಿತ ಅವಧಿಯೊಳಗೆ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

ಆದ್ದರಿಂದ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ಮಾಹೆಯ 15 ನೇ ತಾರೀಖಿನೊಳಗೆ ಭ.ನಿ./ ಐ.ಭ.ನಿ ಅಂತಿಮ ಅಭ್ಯರ್ಥನಗಳನ್ನು ಮಂಜೂರಾತಿಗಾಗಿ ನ್ಯಾನ ಮಂಡಳಿಗೆ ಸಲ್ಲಿಸುವಂತೆ, ಹಾಗೂ 25ನೇ ತಾರೀಖಿನೊಳಗೆ ಅಭ್ಯರ್ಥನಗಳನ್ನು ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಭಾಗಗಳಿಂದ ಅನಗತ್ಯವಾಗಿ ವಿಳಂಬ ಉಂಟಾದಲ್ಲಿ ನಿವೃತ್ತ ನೌಕರರು/ ನಾಮಿನಿದಾರರಿಂದ ಬರುವ ದೂರುಗಳಿಗೆ ಹಾಗೂ ಅದರಿಂದ ನ್ಯಾಸ ಮಂಡಳಿಗೆ ಉಂಟಾಗುವ ಆರ್ಥಿಕ ನಷ್ಟಗಳಿಗೆ ಸಂಬಂಧಪಟ್ಟವರನ್ನು ನೇರ ಹೊಣೆಗಾರರನ್ನಾಗಿಸಲಾಗುವುದೆಂದು ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಇಂದು ರಾತ್ರಿ 8.30ರಿಂದ 9.30ರವರೆಗೆ KSRTC ಎಂಡಿ ಅಕ್ರಮ್‌ ಪಾಷರ ಭೇಟಿ ಮಾಡಿ ಗೌಪ್ಯ ಸಭೆ ನಡೆಸಿದ ಜಂಟಿ ಮುಖಂಡರು! ಸಾರಿಗೆ ಕಾರ್ಮಿಕರ ಜಂಟಿ ಕ್ರಿಯಾ ಸಮಿತಿ ಕರೆ ಕೊಟ್ಟಿದ್ದ ಮುಷ್ಕರದಿಂದ ಹಿಂದೆ ಸರಿದ KSRTC ಪ.ಜಾ.-ಪ.ಪಂ ನೌಕರರ ಸಂಘ ಗುಡುಗು ಸಿಡಿಲಿನ ಆರ್ಭಟ: ಮನೆ ಮುಂದೆ ನಿಂತಿದ್ದ ಶಿಕ್ಷಕ ಹೃದಯಾಘಾತಕ್ಕೆ ಬಲಿ ಕೇರಳದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ವಿ.ಡಿ.ಸತೀಶನ್ ಇಂದು ಕೇರಳದ ನೂತನ ಸಿಎಂಆಗಿ ವಿ.ಡಿ. ಸತೀಶನ್‌ ಪ್ರಮಾಣ ವಚನ ಸ್ವೀಕಾರ KSRTC ಜಂಟಿ ಸಮಿತಿ ಒಳೊಪ್ಪಂದ ಬಯಲು; 2.5 ಕೋಟಿ ರೂ.ಗೆ ಸೇಲಾದರ ನೀಚರು, ನೌಕರರ ದಾರಿತಪ್ಪಿಸುತ್ತಿರುವುದರ ಹಿಂದಿನ ಮರ್ಮ... ವಿಜಯಪಥ ವರದಿ ಪರಿಣಾಮ: ಎಚ್ಚೆತ್ತ BMTC ಅಧಿಕಾರಿಗಳು- ಆದೇಶದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿಯೇ ನೌಕರರಿಗೆ 11 ತ... ಸಾರಿಗೆ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ತಂತ್ರ: ಬಸ್ ಸಂಚಾರ ನಿಲ್ಲಿಸಿ ಮುಷ್ಕರಕ್ಕೆ ಮುಂದಾಗಿರುವ ನೌಕರರಿಗೆ ಶಾಕ್ ... KSRTC: ಸರ್ಕಾರದ ಸಾಧನ ಸಮಾವೇಶದಲ್ಲಿ ಕಪ್ಪು ಬಾವುಟ, ಕಪ್ಪು ಪಟ್ಟಿ ಧರಿಸಿ ಸಾರಿಗೆ ನೌಕರರ ಪ್ರತಿಭಟನೆ !? BMTC ನೌಕರರಿಗೆ ಮೇ 19ರಂದು 11 ತಿಂಗಳ ಹಿಂಬಾಕಿ ಪಾವತಿಗೆ ಕ್ರಮ- ಎಂಡಿ ಆದೇಶಕ್ಕೂ ಕಿಮ್ಮತ್ತಿಲ್ಲದರ ಪರಿಣಾಮ ಈ ವಿಳಂಬ!