
ಬೆಂಗಳೂರು: ಈವರೆಗೂ ಸಾಮಾನ್ಯ ಪ್ರಕ್ರೀಯೆವಾಗಿದ್ದ DA ಹಾಗೂ BDA ಗಳನ್ನೂ ಸಹ ಇನ್ನು ಮುಂದೆ ಹೋರಾಟ ಮಾಡಿ ಪಡೆಯಬೇಕಾಗುತ್ತೋ ಏನೋ ಎಂಬ ಆತಂಕದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಇದ್ದಾರೆ.
ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಪ್ರಮುಖವಾಗಿ ಅವರು ಪಡೆಯಬೇಕಿರುವ ವೇತನ ಸೌಲಭ್ಯವನ್ನು ಸಕಾಲಕ್ಕೆ ಸರ್ಕಾರ ಅಥವಾ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಕೊಡದೆ ಭಾರಿ ಸಮಸ್ಯೆಗೆ ಸಿಲುಕಿಸುತ್ತಿದೆ. ಅಂದರೆ ಈ ವ್ಯವಸ್ಥೆ DA ಹಾಗೂ BDA ಗಳನ್ನೂ ಸಹ 7 ತಿಂಗಳು ಕಳೆಯುತ್ತಾ ಬಂದರೂ ಈ ವರೆಗೂ ನೀಡಿಲ್ಲ ಎಂದರೆ ವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ ಎಂಬುದರ ಬಗ್ಗೆ ಯೋಚಿಸಬೇಕಿದೆ.
ಹೌದು! ಈ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರಿಗೆ ನೌಕರರ ಮೂಲಭೂತ ಹಕ್ಕುಗಳ ವಿಚಾರವೇದಿಕೆ ಮನವಿ ಸಲ್ಲಿಸಿದ್ದು ಕೂಡಲೇ ಬಿಡಿಎ ಹಾಗೂ ಡಿಎ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.
ಪೂರ್ಣ ಮಾಹಿತಿ: ತುಟ್ಟಿಭತ್ಯೆ ವಿಲಿನಗೊಳಿಸಿದ (ಮರ್ಜ್) ಒಂದು ತಿಂಗಳಲ್ಲಿ ಸಾರಿಗೆ ನೌಕರರಿಗೆ ಬಿಡಿಎ ಅಳವಡಿಸಿರುವುದನ್ನು ನಾವು ಕಾಣುತ್ತ ಬಂದಿದ್ದೇವೆ. ಆದರೆ ಈ ಬಾರಿ ತುಟ್ಟಿಭತ್ಯೆ ವಿಲೀನಗೊಂಡು ಏಳು ತಿಂಗಳು ಗತಿಸುತ್ತ ಬಂದರೂ ಸಾರಿಗೆ ನೌಕರರಿಗೆ ಬಿ.ಡಿ.ಎ. ಆದೇಶ ಈವರೆಗೂ ಹೊರಬಿದ್ದಿಲ್ಲ. ಅಲ್ಲದೇ ಜುಲೈ-2024 ರ ಶೇ.2.25 ಡಿಎ ಯನ್ನು ಸಹ ನೀಡಿಲ್ಲ. ಬಹುಶಃ ಈ ರೀತಿ ವಿಳಂಬ ಇತಿಹಾಸದಲ್ಲಿ ಇದೇ ಪ್ರಥಮವಾಗಿದೆ.
ಬಿಡಿಎ ಮತ್ತು ಡಿಎ ವಿಚಾರದಲ್ಲಿ ಯಾವುದೇ ಹೊಸ ನೀತಿ ನಿಯಮಗಳನ್ನೇನು ರಚಿಸಬೇಕಿಲ್ಲ. ಇದೊಂದು ಸಾಮಾನ್ಯ ಮತ್ತು ಬಹು ಕಾಲದಿಂದ ನಡೆದುಕೊಂಡು ಬಂದ ಪದ್ಧತಿ ಯಾಗಿದ್ದು ಸರಕಾರ ಡಿ.ಎ. ಮರ್ಜ್ ಮಾಡಿದ ತಕ್ಷಣವೇ ಸಾರಿಗೆ ನೌಕರರಿಗೆ ಬಿ.ಡಿ.ಎ. ಅಳವಡಿಸಲಾಗುತ್ತದೆ. ಸರಕಾರ ಡಿಎ ಘೋಷಿಸಿದ ಕೂಡಲೇ ಸಾರಿಗೆ ನೌಕರರಿಗೆ ಡಿಎ ಅಳವಡಿಸಲಾಗುತ್ತದೆ. ಆದರೆ ನಾಲ್ಕೂ ನಿಗಮಗಳ ನೌಕರರಿಗೆ ಬಿಡಿಎ ಹಾಗೂ ಡಿಎ ಅಳವಡಿಸಲು ಕೆಎಸ್‌ಆರ್‌ಟಿಸಿ ಎಂಡಿ ಆದೇಶ ಹೊರಡಿಸಬೇಕಾಗುತ್ತದೆ. ಆ ಕೆಲಸ ಈವರೆಗೂ ನಡೆದಿಲ್ಲ.
ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಹಲವು ಇಲಾಖಾ ಮುಖ್ಯಸ್ಥರನ್ನು ನಮ್ಮ ಸಂಘದಿಂದ ಸಂಪರ್ಕಿಸಿಸಾಗ ಯಾರಿಂದಲೂ ಧನಾತ್ಮಕ ಪ್ರತಿಕ್ರೀಯೆ ಸಿಕ್ಕಿಲ್ಲ. ಎಲ್ಲರೂ ಮೇಲಿನನವರ ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಬಿ.ಡಿ.ಎ. ಹಾಗೂ ಡಿ.ಎ. ಆದೇಶ ಹೊರಡಿಸುವಲ್ಲಿ ಯಾರಿಂದ, ಯಾವ ಹಂತದಲ್ಲಿ ಅಡತಡೆ ಉಂಟಾಗಿದೆ ಎನ್ನುವುದೇ ನಮಗೆ ಸ್ಪಷ್ಟವಾಗಿ ತಿಳಿಯುತ್ತಿಲ್ಲ.
ಆದ್ದರಿಂದ ತಾವು ಅತ್ಯಂತ ಮುತುವರ್ಜಿವಹಿಸಿ ಆದಷ್ಟು ಬೇಗನೇ ಸಾರಿಗೆ ನೌಕರರಿಗೆ ಬಿ.ಡಿ.ಎ ಹಾಗೂ ಡಿ.ಎ. ಸಾಧ್ಯವಾಗಿಸಿಕೊಡಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿರೆಂದು ಈ ಮೂಲಕ ವಿನಂತಿಸಿಕೊಂಡಿರುತ್ತೇವೆ, ಜತೆಗೆ ಎಂದೂ ವಿಳಂಬವಾಗದ ಬಿಡಿಎ, ಡಿಎ ಗಳಿಗೆ ತಮ್ಮ ಕಾಲಾವಧಿಯಲ್ಲಿ ಅಡತಡೆ ಅಥವಾ ವಿಳಂಬವಾಗಬಾರದು ಎನ್ನುವುದು ನಮ್ಮ ಅಭಿಪ್ರಾಯ ಹಾಗೂ ನಮ್ಮ ನಮ್ರ ವಿನಂತಿ ಎಂದು ವಿಚಾರವೇದಿಕೆ ಮನವಿ ಮಾಡಿದೆ.
ವಿಚಾರವೇದಿಕೆ ರಾಜ್ಯಾಧ್ಯಕ್ಷ ವೈ.ಎಂ.ಶಿವರೆಡ್ಡಿ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ, ಉಪಾಧ್ಯಕ್ಷ ರಫೀಕ್ ಹಮದ್ ನಾಗನೂರ ಮತ್ತಿತರರು ಕೆಎಸ್‌ಆರ್‌ಟಿಸಿ ಎಂಡಿ ಜತೆಗೆ ಮುಖ್ಯ ಮಂತ್ರಿಗಳು, ಸಾರಿಗೆ ಹಾಗೂ ಮುಜುರಾಯಿ ಸಚಿವರು, ಕಾರ್ಮಿಕ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಮನವಿ ಪ್ರತಿಗಳನ್ನು ಸಲ್ಲಿಸಿದ್ದಾರೆ.