NEWSನಮ್ಮರಾಜ್ಯ

ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ

ಮರುಪರಿಶೀಲನೆ ಪ್ರಕ್ರಿಯೆ ಯೋಜನೆಗಳನ್ನು ನಿಲ್ಲಿಸುವ ಕ್ರಮವಲ್ಲ, ಬದಲಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಮಾಡುವ ಕ್ರಮವಾಗಿದೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನಮ್ಮ ಸರ್ಕಾರ ಜಾರಿಗೆ ಮಾಡಿರುವ ಗ್ಯಾರಂಟಿ ಇದ್ದೆ ಇರುತ್ತದೆ, ಯಾವುದೇ ಕಾರಣಕ್ಕೂ ಈ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ, ಆತಂಕಬೇಡ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಸರ್ಕಾರ ಗ್ಯಾರಂಟಿ ಯೋಜನೆಯ ಪರಿಷ್ಕರಣೆಗೆ ಕೈ ಹಾಕಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಪೋಸ್ಟ್‌ ಪ್ರಕಟಿಸಿ ಸ್ಪಷ್ಟನೆ ನೀಡಿದ್ದು, ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ವಿಪಕ್ಷಗಳ ಸುಳ್ಳು ಪ್ರಚಾರ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸಿಎಂ ಮನವಿ ಮಾಡಿದ್ದಾರೆ.

ಕೆಲವರು ಮೃತಪಟ್ಟವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಗಳ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಿಜವಾದ ಫಲಾನುಭವಿಗಳ ಹೆಸರು, ವಿಳಾಸ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ದೃಢೀಕರಿಸಲು ಮರುಪರಿಶೀಲನೆ ಪ್ರಕ್ರಿಯೆ ಕೈಗೊಳ್ಳಲಾಗಿದೆಯಷ್ಟೇ ಎಂದು ತಿಳಿಸಿದ್ದಾರೆ.

ಇನ್ನು ಈ ಮರುಪರಿಶೀಲನೆ ಪ್ರಕ್ರಿಯೆ ಯೋಜನೆಗಳನ್ನು ನಿಲ್ಲಿಸುವ ಕ್ರಮವಲ್ಲ, ಬದಲಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಮಾಡುವ ಕ್ರಮವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯೋಜನೆಯ ಫಲಾನುಭವಿಗಳು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ, ಎಲ್ಲ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಹೇಳಿದ್ದಾರೆ.

Megha
the authorMegha

Leave a Reply

error: Content is protected !!
Latest news
ಬೇಕಾಬಿಟ್ಟಿ ಗ್ಯಾರಂಟಿಗಳ ಕೊಡುವುದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ: ಸರ್ಕಾರಗಳಿಗೆ ಎಚ್ಚರಿಕೆ ನೀಡಿ ವಿತ್ತ... ಲಾರಿ ಓವರ್‌ಟೇಕ್‌ ಮಾಡುವ ವೇಳೆ ಚಾಲಕನ ನಿಯಂತ್ರ ಕಳೆದುಕೊಂಡ ಕಾರು ಪಲ್ಟಿ: ದಂಪತಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ, ಆತಂಕಬೇಡ: ಸಿಎಂ ಶಿವಕುಮಾರ್‌ ಭರವಸೆ KSRTC ಕನಕಪುರ ಘಟಕದಲ್ಲಿ ಚಾಲಕನ ಮೇಲೆ ಹಲ್ಲೆ ಮಾಡಿದ ನಾಲ್ವರ ಅಮಾನತು ಸಿಎಂ ತವರಲ್ಲೇ KSRTC ಚಾಲನಕನ ಮೇಲೆ ಹಲ್ಲೆ, ಗೂಂಡಾ ವರ್ತನೆ: ಡಿಎಂ ಎದುರೇ ಘಟಕದಲ್ಲಿ ರೌಡಿಸಂ ನೌಕರನ ವಿರುದ್ಧ ಸಾಬೀತಾಗಿರುವ ದುರ್ನಡತೆಗೆ ಹೋಲಿಸಿದರೆ ಆತನ ವಜಾ ಮಾಡಿರುವುದು ಕಾನೂನುಬಾಹಿರ,ಅತ್ಯಂತ ಕಠಿಣ ಶಿಕ್ಷೆ: ಸು... ತಜ್ಞರ ಸಲಹೆ ಪಡೆದು ಪಾಲಿಕೆ ಆಯವ್ಯಯ ಅನುದಾನ ಬಳಕೆ : GBA ದಕ್ಷಿಣ ಆಯುಕ್ತ BMTC: ಜೂನ್‌ 18ರೊಳಗೆ ನಿವೃತ್ತ ನೌಕರರು ಏ-2018 ರಿಂದ ಜು-2018ರವರೆಗಿನ ತುಟ್ಟಿಭತ್ಯೆ ಪಡೆಯಲು ಬ್ಯಾಂಕ್‌ ಖಾತೆ ವಿವರ ... ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ: ಸಚಿವ ಖಂಡ್ರೆ ಎಚ್ಚರಿಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಶಿಕ್ಷಣವೊಂದೇ ಆಯುಧ: ನ್ಯಾ. ಶ್ರೀಶೈಲ್ ಭೀಮಸೇನ ಬಾಗಡಿ