CrimeNEWSನಮ್ಮರಾಜ್ಯಸಿನಿಪಥ

ಸೀತಾ ರಾಮ ಧಾರಾವಾಹಿಯಲ್ಲಿ ಹೆಲ್ಮೆಟ್‌ ರಹಿತ ಸ್ಕೂಟರ್‌ ಸವಾರಿ: ನಟಿ ವೈಷ್ಣವಿ ಗೌಡಗೆ ಫೈನ್‌ ಹಾಕಿದ ಟ್ರಾಫಿಕ್‌ ಪೊಲೀಸ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಧಾರಾವಾಹಿಗಳು ಮತ್ತು ಸಿನಿಮಾಗಳು, ಒಟಿಟಿ ಸರಣಿಗಳನ್ನು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ವೀಕ್ಷಿಸುತ್ತಾರೆ. ಈ ಸಿನಿಮಾ, ಸೀರಿಯಲ್‌, ಸರಣಿಗಳಲ್ಲಿ ನಟಿಸುವ ಕೆಲವು ಕಲಾವಿದರು ಬೈಕ್‌ ಅಥವಾ ಸ್ಕೂಟರ್‌ ರೈಡ್‌ ಮಾಡುವಾಗ “ತಮ್ಮ ಮುಖ ಕಾಣಲಿ” ಎಂಬ ಉದ್ದೇಶದಿಂದ ಹೆಲ್ಮೆಟ್‌ ಧರಿಸಿರುವುದಿಲ್ಲ.

ಅದೇ ರೀತಿ ಕಾರಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸೀಟ್‌ ಬೆಲ್ಟ್‌ ಧರಿಸುವುದಿಲ್ಲ. ಕೆಲವು ನಟಿಯರು ಮೇಕಪ್‌ ಹಾಳಾಗುತ್ತದೆ ಎಂದು ಹೆಲ್ಮೆಟ್‌ ಧರಿಸುವುದಿಲ್ಲ. ಈ ರೀತಿಯ ಕಂಟೆಂಟ್‌ಗಳನ್ನು ಸಹಸ್ರಾರು ಮಂದಿ ನೋಡುವುದರಿಂದ ಆ ವೀಕ್ಷಕರಿಗೆ ತಪ್ಪು ಸಂದೇಶ ರವಾನಿಸಿದಂತೆ ಆಗುತ್ತದೆ. ಈ ಕಾರಣಕ್ಕೆ ಹಲವು ಸೀರಿಯಲ್‌, ಸಿನಿಮಾ ನಟಿ ನಟರ ಮೇಲೆ ಟ್ರಾಫಿಕ್‌ ಪೊಲೀಸರು ಕೇಸ್‌/ಫೈನ್‌ ಹಾಕಿದ್ದಾರೆ.

ನಟಿ ವೈಷ್ಣವಿ ಗೌಡ ಅವರಿಗೆ ದಂಡ: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಸೀತಾ ರಾಮದ ನಟಿ ವೈಷ್ಣವಿ ಗೌಡ ಅವರಿಗೆ ಟ್ರಾಫಿಕ್‌ ಪೊಲೀಸರು ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ. ಸೀರಿಯಲ್‌ನಲ್ಲಿ ಸ್ನೇಹಿತೆ ಜತೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಇವರು ಫೈನ್‌ ಕಟ್ಟಬೇಕಿದೆ.

ಜಯಪ್ರಕಾಶ್‌ ಎಕ್ಕೂರು ಎಂಬ ಸಾಮಾಜಿಕ ಹೋರಾಟಗಾರ ಸೀರಿಯಲ್‌ ನೋಡಿ ಮಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬಳಿಕ ಈ ದೂರನ್ನು ಮಂಗಳೂರು ಪೂರ್ವ ಸಂಚಾರ ಠಾಣೆಗೆ ವರ್ಗಾಯಿಸಲಾಗಿತ್ತು. ಝೀ ಕನ್ನಡ ವಾಹಿನಿ ಮತ್ತು ನಟಿ ವೈಷ್ಣವಿ ಗೌಡರಿಗೆ ಮಂಗಳೂರು ಪೂರ್ವ ಸಂಚಾರ ಠಾಣೆ ಪೊಲೀಸರು ನೋಟಿಸ್‌ ನೋಡಿದ್ದರು.

ಶೂಟಿಂಗ್‌ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ನಡೆದಿರುವುದರಿಂದ ರಾಜಾಜಿನಗರ ಪೊಲೀಸ್‌ ಠಾಣೆಗೆ ಆ ಪ್ರಕರಣ ವರ್ಗಾಯಿಸಲಾಯಿತು. ನಟಿ ವೈಷ್ಣವಿ ಗೌಡ ಅವರಿಗೆ ಹೆಲ್ಮೆಟ್‌ ರಹಿತವಾಗಿ ಹಿಂಬದಿ ಸವಾರಿ ಮಾಡಿರುವ ಕಾರಣ 500 ರೂಪಾಯಿ ದಂಡ ವಿಧಿಸಲಾಗಿದ್ದು, ಸ್ಕೂಟರ್‌ ಮಾಲಕಿ ಸವಿತಾ ಎಂಬುವರಿಗೂ 500 ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸೀರಿಯಲ್‌ಗಳಲ್ಲಿ ಹೆಲ್ಮೆಟ್‌ ಇಲ್ಲದೆ ಚಾಲನೆ: ಝೀ ಕನ್ನಡ ಅಥವಾ ಇತರೆ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್‌ಗಳಲ್ಲಿ ಈ ರೀತಿ ಹೆಲ್ಮೆಟ್‌ ರಹಿತ ಚಾಲನೆ ಮಾಡುವ ಕಲಾವಿದರನ್ನು ಕಾಣಬಹುದು. ಸೀರಿಯಲ್‌ ಪ್ರೇಕ್ಷಕರಿಗೆ ಕಲಾವಿದರ ಮುಖ ದರ್ಶನವಾಗಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡುತ್ತಿರಬಹುದು.

ಅಮೃತಧಾರೆ ಧಾರಾವಾಹಿಯಲ್ಲಿ ಬಹುತೇಕ ಸಂದರ್ಭಗಳಲ್ಲಿ ಪಾರ್ಥ ಹೆಲ್ಮೆಟ್‌ ಧರಿಸಿರುತ್ತಾರೆ. ಇದೇ ಸೀರಿಯಲ್‌ನಲ್ಲಿ ಇತ್ತೀಚೆಗೆ ಉದ್ಯೋಗ ಕಳೆದುಕೊಂಡ ಜೀವನ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿದ್ದು, ಅವರು ದ್ವಿಚಕ್ರವಾಹನದಲ್ಲಿ ಹೆಲ್ಮೆಟ್‌ ಬದಲು ಟೋಪಿ ಹಾಕಿಕೊಂಡು ರೈಡ್‌ ಮಾಡಿದ್ದರು. ಇದೇ ರೀತಿ ಕನ್ನಡದ ಹಲವು ಸೀರಿಯಲ್‌ಗಳಲ್ಲಿ ನಟ-ನಟಿಯರು ಹೆಲ್ಮೆಟ್‌ ರಹಿತ ಚಾಲನೆ ಮಾಡಿದ್ದಾರೆ. ಯಾರಾದರೂ ದೂರು ನೀಡಿದರೆ ಇವರೆಲ್ಲರೂ ಫೈನ್‌ ಕಟ್ಟಬೇಕಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

error: Content is protected !!
LATEST
KSRTC : ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಡಿಪೋ ಮುಂದೆ ಚಾಲಕ ರವಿ ಪಾರ್ಥಿವ ಶರೀರ ಇಡಲಾತ್ತು, ಪ್ರಮಾದವಾಗಿಲ್ಲ- ಡಿಎಂ ಸಮ... 10 ವರ್ಷದ ಆಧಾರ್‌ ನವೀಕರಣಕ್ಕೆ ಡೆಡ್‌ಲೈನ್‌ ಫಿಕ್ಸ್‌: ನಾಳೆ ಅಂತಿಮ ಗಡುವು- ಬಳಿಕ ದಂಡ ನಾಗಮಂಗಲ ಕೋಮುಗಲಭೆ ಪ್ರಕರಣ: ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅಮಾನತು KSRTC ಸಿಬ್ಬಂದಿಯಿಂದಲೇ ಡಿಸಿಗೆ ಇರಿಯಲು ಯತ್ನ- ಕೈ ಅಡ್ಡಹಾಕಿ ಪ್ರಾಣಾಪಾಯದಿಂದ ಪಾರಾದ ಜಗದೀಶ್ ಕುಮಾರ್‌ "ARM" ಸಿನಿಮಾ ಇಂದು ಪ್ರಪಂಚದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆ ಸೆ.14ರಂದು ಸಾರಿಗೆ ಸಿಬ್ಬಂದಿಗಳಿಗೆ ಔಷಧೀಯ ಸಸ್ಯಗಳ  ಉಚಿತ ವಿತರಣೆ: ಅಧಿಕಾರಿಗಳು ಭಾಗಿ ಟೊವಿನೋ ಥಾಮಸ್ ಸಿನಿಮಾ ವಿತರಿಸಲಿದೆ ಹೊಂಬಾಳೆ ಫಿಲ್ಮ್! ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಬಂಧನ ಅವಧಿ ಮತ್ತೆ ಒಂದು ದಿನ ವಿಸ್ತರಣೆ KSRTC ಚಿಕ್ಕಮಗಳೂರು: ಘಟಕದ ಗೇಟ್‌ ಬಳಿ ತ್ಯಾಜ್ಯಗಳ ನಡುವೆ ಚಾಲಕನ ಪಾರ್ಥಿವ ಶರೀರವಿಟ್ಟು ಅಂತಿಮ ದರ್ಶನಕ್ಕೆ ವ್ಯವಸ್ಥೆ-... ವಾಲ್ಮೀಕಿ ಹಗರಣ: ಬಳ್ಳಾರಿಯಿಂದ ಬಿಜೆಪಿ ಪಾದಯಾತ್ರೆ - ಛಲವಾದಿ ನಾರಾಯಣಸ್ವಾಮಿ