NEWSನಮ್ಮಜಿಲ್ಲೆನಮ್ಮರಾಜ್ಯ

ಪ್ರಣಾಳಿಕೆ ಭರವಸೆ ಈಡೇರಿಸಿ ಅಂತ ಎಲ್ಲ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿ: ಸಾರಿಗೆ ನೌಕರರ ಆಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳಲಿ ಅಥವಾ ಬಿಡಲಿ.‌ ಆದರೆ, ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ, ನೀವು ಕೊಟ್ಟಿರುವ ಭರವಸೆ ಈಡೇರಿಸಿ ಎಂದು ಎಲ್ಲ ಸಂಘಟನೆಗಳು ಒತ್ತಾಯ ಮಾಡಿ ಎಂದು ನೌಕರರು ಆಗ್ರಹಿಸುತ್ತಿದ್ದಾರೆ.

ಇದನ್ನು ಬಿಟ್ಟು ಮತ್ತೆ ಬೇರೇನು ಮಾಡಬೇಡಿ. ಇದನ್ನು ಕೇಳಲಿಕ್ಕೆ ಜಂಟಿ ಕ್ರಿಯಾ ಸಮಿತಿಯವರಿಗೆ ಏನು ತೊಂದರೆ ಆಗುತ್ತಿದೆ ಎಂಬುವುದನ್ನು ಅವರು ಸ್ಪಷ್ಟವಾಗಿ ಹೇಳಬೇಕು ಎಂದು ಸಮಸ್ತ ಅಧಿಕಾರಿಗಳು/ನೌಕರರು ಆಗ್ರಹಿಸುತಿದ್ದಾರೆ.

ಸಮಸ್ತ ಅಧಿಕಾರಿಗಳು/ ನೌಕರರ ಪರವಾಗಿರುವರು ಮೊದಲು ನೌಕರರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲು ಏನು ಮಾಡಬೇಕೋ ಅದನ್ನು ಮಾಡಿ. ಆ ನಂತರ ಸಂಸ್ಥೆಯ ಆರ್ಥಿಕ ಸ್ಥಿತಿ ಬಗ್ಗೆ ವಿಚಾರ ಮಾಡುವಿರಂತೆ. ಅದಕ್ಕಾಗಿ ಉಚಿತ ಬಸ್‌ ಪಾಸ್‌ಗಳನ್ನು, ಶಕ್ತಿ ಯೋಜನೆ, ಇತರ ಸಾರ್ವಜನಿಕ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ ಕ್ರಮ ತಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ನೀವು ಮತ್ತು ನಿಮ್ಮ ಸಂಘಟನೆಗಳು ಸರ್ಕಾರದ ಪ್ರತಿನಿಧಿಗಳೋ ಅಥವಾ ಸಾರಿಗೆ ನೌಕರರ ಪ್ರತಿನಿಧಿಗಳೋ? ಅದನ್ನು ಹೇಳಿ.‌ ಸರ್ಕಾರದ ಎಲ್ಲ ಇಲಾಖೆ, ಇತರ ನಿಗಮ ಮಂಡಳಿ ನೌಕರರ ವೇತನದಂತೆ ವೇತನ ಆಯೋಗದಂತೆ ವೇತನ ಹಾಗೂ ಅವರಂತೆ ಸಮಾನ ಪಿಂಚಣಿ ಯೋಜನೆ ಸೌಲಭ್ಯ ಕಲ್ಪಿಸಿ ಎಂದು ಒತ್ತಾಯಿಸುತ್ತಿದ್ದಾರೆ.

2020 ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳು ಬಾಕಿ ಇರುವ ವೇತನ ಕೊಡುವುದಕ್ಕೆ ಬೇಡಿಕೆ ಇಡಿ. ಇದಕ್ಕೆ ಒಕ್ಕೂಟದ ಸಂಘಟನೆಗಳ ಜತೆ ಜಂಟಿ ಸಂಘಟನೆಗಳು ಚರ್ಚಿಸಿ ಯೋಗ್ಯವಾದ ನಿರ್ಧಾರಕ್ಕೆ ಬನ್ನಿ.

ನಿಮಗೆ ಒಕ್ಕೂಟ ಈ ಬೇಡಿಕೆಗೆ ಬೇಷರತ್ ಬೆಂಬಲ ಕೊಡುತ್ತದೆ. ಈಗ ನಿರ್ಧಾರ ನಿಮ್ಮ ಅಂಗಳದಲ್ಲಿ ಇದೆ. ತಾವು ಒಳ್ಳೆಯ ನಿರ್ಧಾರಕ್ಕೆ ಬನ್ನಿ. ಸಾರಿಗೆ ನೌಕರರಿಗೆ ಒಳ್ಳೆಯದು ಮಾಡಿ ಎಂದು ನೌಕರರು ಒತ್ತಾಯ ಮಾಡುತ್ತಿದ್ದಾರೆ.

Megha
the authorMegha

Leave a Reply

error: Content is protected !!