
ಬೆಂಗಳೂರು: ಸಮಸ್ತ ನಾಲ್ಕೂ ನಿಗಮಗಳ ಸಾರಿಗೆ ನೌಕರರು ಅದರಲ್ಲೂ ಚಾಲನಾ ಸಿಬ್ಬಂದಿಗಳಾದ ಚಾಲಕ ಮತ್ತು ನಿರ್ವಾಹಕರು ಬಸ್‌ನಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರೊಂದಿಗೆ ಸೌಜನ್ಯ ಮತ್ತು ತಾಳ್ಮೆಯಿಂದ ವರ್ತಿಸಬೇಕು.
ಕಾರಣ ನಮ್ಮ ನಡೆ ಸೌಜನ್ಯದಿಂದ ಕೂಡಿದ್ದರೆ ಸಾರ್ವಜನಿಕರು ಕೂಡ ಅಷ್ಟೇ ಸೌಜನ್ಯದಿಂದ ನಡೆದುಕೊಳ್ಳುತ್ತಾರೆ. ಇನ್ನು ನಾವು ಒತ್ತಡಕ್ಕೆ ಸಿಲುಕಿ ತಾಳ್ಮೆ ಕಳೆದುಕೊಂಡರೆ ಅದೇ ರೀತಿಯ ಪ್ರತಿಕ್ರಿಯೆ ಜನರಿಂದಲೂ ಬರುತ್ತದೆ. ಹಾಗಾಗಿ ಯಾವಾಗಲು ತಾಳ್ಮೆ ಕಳೆದುಕೊಳ್ಳಬಾರದು.
ಇನ್ನು ಸಾರಿಗೆ ಸೇವೆ ಇರುವುದು ಸಾರ್ವಜನಿಕರಿಗೋಸ್ಕರ ಹಾಗಾಗಿ ಪ್ರತಿಯೊಬ್ಬ ನೌಕರರು ಪ್ರಯಾಣಿಕರ ಜತೆ ಚಿಲ್ಲರೆ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳಬಾರದು. ಇನ್ನು ಪ್ರಮುಖವಾಗಿ ವಿದ್ಯಾರ್ಥಿ ಮತ್ತು ಮಾಸಿಕ ಪಾಸುಗಳು, ಹಿರಿಯ ನಾಗರಿಕರ ಬಗ್ಗೆ ಮತ್ತು ಇನ್ನು ಹಲವಾರು ವಿಚಾರಗಳ ಬಗ್ಗೆ ನಾವು ಮಾತನಾಡಬೇಕಾದರೆ ಎಚ್ಚರದಿಂದ ಪದ ಬಳಕೆ ಮಾಡಬೇಕು.
ಅಲ್ಲದೆ ನಮ್ಮ ನಡವಳಿಕೆ ಸೌಮ್ಯವಾಗಿದ್ದರೆ ಜನರು ಅದೇರೀತಿ ನಡೆದುಕೊಳ್ಳುತ್ತಾರೆ ಎಂಬುವುದನ್ನು ಮನದಟ್ಟುಮಾಡಿಕೊಳ್ಳಬೇಕು. ನಮ್ಮ ವರ್ತನೆಯೂ ಕೂಡ ದುರ್ನಡತೆಯಾಗಿರಬಾರದು ಇದು ನಮ್ಮ ಜವಾಬ್ದಾರಿಯ ಕೆಲಸ ಆಗಿರಬೇಕು.
ಸಾರಿಗೆ ಸಂಸ್ಥೆಯಲ್ಲಿ ಅಳವಡಿಕೆ ಆಗಿರುವಂತಹ ಕಾನೂನು ತತ್ವದಡಿಯೇ ಆದಷ್ಟು ಕರ್ತವ್ಯಗಳನ್ನು ಮಾಡಿಬೇಕಿದೆ. ಇಲ್ಲವಾದರೆ ಇಂತಹ ಘಟನೆಗಳಿಗೆ ನಾವೇ ನೇರ ಹೊಣೆಗಾರರಾಗುತ್ತೇವೆ. ಬಳಿಕ ಸರ್ಕಾರವಾಗಲಿ ಸಾರಿಗೆ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳ ವರ್ಗವಾಗಲಿ ಯಾರು ನಮ್ಮನ್ನು ಬೆಂಬಲಿಸುವುದಿಲ್ಲ.
ಆಕಸ್ಮಿಕವಾಗಿ ಬಸ್ಸಿನಲ್ಲಿ ಪ್ರಯಾಣಿಕರ ದುರ್ನಡತೆ ಇದ್ದರೆ ಕಾನೂನಾತ್ಮಕವಾಗಿ ಮೊಬೈಲ್ ವಿಡಿಯೋಗಳ ಮುಖಾಂತರ ಸಹ ಪ್ರಯಾಣಿಕರ ಹೇಳಿಕೆಯ ಮುಖಾಂತರ ಆರಕ್ಷಕ ಠಾಣೆಗೆ ದೂರನ್ನು ಕೊಡಿ. ಇದು ಒಬ್ಬರ ಅನಿಸಿಕೆಯಲ್ಲ ಸಂಸ್ಥೆಯ ಬೈಲಾ ಗ್ರಂಥದಲ್ಲಿ ಇರುವಂತ ಮುಖಪುಟದ ನಿಯಮವೇ ಹೇಳುತ್ತದೆ.

ಇನ್ನು ಇತ್ತೀಚಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುವುದು ನೌಕರರಿಗೆ ತುಂಬಾ ಕಷ್ಟವಾಗುತ್ತಿದೆ. ಒತ್ತಡದಲ್ಲೇ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟು ಕಷ್ಟದ ನಡುವೆಯೂ ನಾವು ಜನರಿಗೆ ಸೇವೆ ನೀಡುತ್ತಿರುವುದಕ್ಕೆ ಜನರು ನಮ್ಮೊಂದಿಗೆ ಸೌಜನ್ಯದದಿಂದ ವರ್ತಿಸಬೇಕಿದೆ. ಅಧಿಕಾರಿಗಳು ಕೂಡ ಬಸ್‌ಗಳ ಒಳಗೆ ಜನರಿಗೆ ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಹಾಕಿದರೆ ಜನರಿಗೂ ನೌಕರರ ಕಷ್ಟ ತಿಳಿಯಲಿದೆ ಎಂಬುವುದು ನಮ್ಮ ಮನವಿಯಾಗಿದೆ ಎಂದು ಪ್ರಜ್ಞಾವಂತ ನೌಕರರು ಅಭಿಪ್ರಾಯ ತಿಳಿಸಿದ್ದಾರೆ.
Related
