CRIMENEWSಬೆಂಗಳೂರು

BMTC: ಸ್ಕೂಟರ್‌ ಸ್ಕಿಡ್‌ಆಗಿ ಬಿದ್ದ ಬಾಲಕಿ ಬಸ್ ಹಿಂದಿನ ಚಕ್ರಕ್ಕೆ ಸಿಲುಕಿ ಸಾವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್‌ 10 ವರ್ಷದ ಬಾಲಕಿ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ಬಳಿ ಇಂದು ಬೆಳಗ್ಗೆ ನಡೆದಿದೆ.

ನಿನ್ನೆ ಜಯನಗರದ 4ನೇ ಹಂತದಲ್ಲಿ ಬಸ್‌ ಹತ್ತುವ ವೇಳೆ ಬಾಗಿಲು ಹಾಕಿದ್ದರಿಂದ ಕೈ ಬಾಗಿಲಿಗೆ ಸಿಲುಕಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು ವೃದ್ಧ ಸಂಪಂಗಿ (64) ಎಂಬುವರು ಬಸ್‌ ಚಕ್ರಕ್ಕೆ ಸಲುಕಿ ಸಾವನ್ನಪ್ಪಿದ್ದರು.

ಇಂದು ಶಾಲೆಗೆ ತಾಯಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ತನ್ವಿ (10) ಎಂಬ ಬಾಲಕಿ ಆಯತಪ್ಪಿ ಬೈಕ್‌ನಿಂದ ಬಿದ್ದು ಬಸ್‌ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾಳೆ.

ತನ್ವಿ ಮಿಲಿಯನಿಯಂ ಸ್ಕೂಲ್‌ನಲ್ಲಿ 5 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತಾಯಿ ಹರ್ಷಿತಾ ಅವರು ಮಗಳನ್ನು ಸ್ಕೂಲ್‌ಗೆ ಬಿಡಲು ಹೋದಾಗ ದುರ್ಘಟನೆ ನಡೆದಿದೆ.

ಹರ್ಷಿತಾ ಅವರು ಮಗಳನ್ನು ಹೋಂಡಾ ಆಕ್ಟಿವಾದಲ್ಲಿ ಸ್ಕೂಲ್‌ಗೆ ಬಿಡಲು ತೆರಳಿದ್ದ ವೇಳೆ ಸ್ಕೂಟರ್ ಯಲಹಂಕದ ಕೋಗಿಲು ಮುಖ್ಯ ರಸ್ತೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹತ್ತಿರ ಸ್ಕಿಡ್ ಆಗಿತ್ತು.

ಈ ವೇಳೆ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ತನ್ವಿ ಕೆಳಕ್ಕೆ ಬಿದ್ದು, ಬಸ್‌ನ ಚಕ್ರದಡಿ ಸಿಲುಕಿದ್ದಳು. ಆಕೆಯ ಮೇಲೆಯೇ ಬಿಎಂಟಿಸಿ ಬಸ್‌ನ ಚಕ್ರ ಹರಿದಿದ್ದರಿಂದ ತನ್ವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಈ ಸಂಬಂಧ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಿಎಂಟಿಸಿ ಬಸ್ ಅನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!