ಎಂಎಸ್ಪಿ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟದಿಂದ ಪಾರು ಮಾಡಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್‌ಗೆ ಮನವಿ

Megha29.08.2025

ಮೈಸೂರು: ಸುತ್ತೂರಿನಿಂದ ವರುಣ ಮೂಲಕ ಮೈಸೂರಿಗೆ ಬರುತ್ತಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ವರುಣ ಬಳಿ ನಿಲ್ಲಿಸಿ ಎಂಎಸ್ಪಿ ಬೆಂಬಲ ಬೆಲೆ ಘೋಷಣೆ ಮಾಡಿ ಎಂದು ರೈತರು ಒತ್ತಾಯ ಪತ್ರ ಸಲ್ಲಿಸಿದರು.
ಮಾರ್ಗಮಧ್ಯೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾ ಘಟಕದ ವತಿಯಿಂದ ಇಂದು ಎಂಎಸ್ಪಿ ಮುಖಾಂತರ ಬೆಂಬಲ ಬೆಲೆ ಘೋಷಣೆ ಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕೆಂದು ಮನವಿ ಮಾಡಿದರು.
ರೈತರ ಮನವಿ ಸ್ವೀಕರಿಸಿದ ಕೇಂದ್ರ ಸಚಿವರು ಸಂಸತ್‌ನಲ್ಲಿ ಚರ್ಚಿಸಿ ರೈತರ ಪರವಾಗಿ ತಿದ್ದುಪಡಿ ಮಾಡಲು ಆಲೋಚಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವರಕೋಡು ನಾಗೇಶ್, ವಾಜಮಂಗಲ ಮಾದೇವು, ಪುಟ್ಟೇಗೌಡ ಹುಂಡಿ ರಾಜು, ಕೃಷ್ಣೇಗೌಡ, ಸ್ವಾಮಿ ಮುಂತಾದ ರೈತ ಮುಖಂಡರು ಇದ್ದರು.
Related

Megha