ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾನೂನು ವಿಭಾಗ ಇರುವುದು ಚಾಲನಾ ಸಿಬ್ಬಂದಿಗಳ ರಕ್ಷಣೆಗೆ. ಆದರೆ ಇಲ್ಲಿ ಅದರ ಬದಲಿಗೆ ಚಾಕಲರಿಗೆ ಶಿಕ್ಷೆಕೊಡಿಸುವುದಕ್ಕೆ, ಅವರ ವಿರುದ್ಧವೇ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಕ್ಕೆ ಇದೆ ಎಂಬ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವುದು ಭಾರಿ ನೋವಿನ ಸಂಗತಿ.
ಹೌದು! ನಡೆಯುವವರು ಎಡವಿಬೀಳದೆ ಕುಳಿತಿರುವವರು ಬೀಳುತ್ತಾರೆಯೇ ಎಂಬ ಗಾದೆಯಂತೆ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿವೆ ಎಂದರೆ ಅಲ್ಲಿ ಆಕಸ್ಮಿಕವಾಗಿ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಅಂದಮಾತ್ರಕ್ಕೆ 10-20 ವರ್ಷಗಳ ಚಾಲನಾ ಅನುಭವವಿರುವ ನೌಕರರು ತಪ್ಪು ಮಾಡಿದ್ದಾರೆ ಎಂದು ತೀರ್ಮಾನ ಮಾಡುವುದು ಸಾಧ್ಯವೇ ಇಲ್ಲ, ಅವರ ಪರ ನಿಂತು ಅವರ ರಕ್ಷಣೆ ಮಾಡಬೇಕು.
ಆದರೆ, ಅದನ್ನು ಸಾರಿಗೆ ನಿಗಮಗಳ ಕಾನೂನು ಅಧಿಕಾರಿಗಳು ಸಂಸ್ಥೆಯ ಹುಟ್ಟಿದಾಗಿನಿಂದ ಈವರೆಗೂ ಮಾಡಿಲ್ಲ, ಬದಲಿಗೆ ಅಪಘಾತವಾದ ಬಸ್ ಬಿಡಿಸಿಕೊಂಡು ನೌಕರರನ್ನು ಕಾಲ್ ಕಸಕ್ಕಿಂತ ಕೀಳಾಗಿ ನೋಡಿಕೊಂಡೆ ಬರುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಬಳಲುತ್ತಿರುವ ನೌಕರರು ಆತ್ಮಹತ್ಯೆ ಮಾರ್ಗ ಅನುಸರಿಸುತ್ತಿದ್ದಾರೆ. ಇದು ಬದಲಾಗಬೇಕಿದೆ.
ಆಕಸ್ಮಿಕವಾಗಿ ವಾಹನಗಳ ನಡುವೆ ಅಪಘಾತವಾದ ಕೂಡಲೇ ಸಂಬಂಧಪಟ್ಟ ಸಂಸ್ಥೆಯ ವಕೀಲರು ಚಾಲಕನ ಪರವಾಗಿ ಕಾನೂನು ಹೋರಾಟ ಮಾಡುವುದಕ್ಕೆ ಸಿದ್ಧರಾಗಬೇಕು. ಜತೆಗೆ ಚಾಲಕನಿಗೆ ಯಾವುದೇ ರೀತಿಯ ಶಿಕ್ಷೆ ಆಗದ ರೀತಿಯಲ್ಲಿ ಕಾನೂನು ಹೋರಾಟ ಮಾಡಬೇಕು.
ಕಾರಣ ರಸ್ತೆ ಅಪಘಾತಗಳು ಆಕಸ್ಮಿಕವಾಗಿ ಸಂಭವಿಸುತ್ತವೆ ಎಂದೆ ಅಪಘಾತ ವಿಮಾ ಕಂಪನಿಗಳು ಇರುವುದು ಹಾಗೂ ಚಾಲಕನಿಗೆ ಸರಿಯಾಗಿ ಚಾಲನೆ ಬರುತ್ತದೆಯೇ ಇಲ್ಲವೇ ಎಂದು ತಿಳಿದ ಬಳಿಕವೇ ಚಾಲನಾ ಪರವಾನಗಿಯನ್ನು ಆರ್‌ಟಿಒದಲ್ಲಿ ಕೊಡುವುದು. ಇಷ್ಟೆಲ್ಲ ಇದ್ದರೂ ಕೂಡ ತನ್ನ ಸಂಸ್ಥೆಯ ಚಾಲಕರ ಪರವಾಗಿ ಕಾನೂನು ಹೋರಾಟ ಮಾಡುವುದಿಲ್ಲ ಎಂದರೆ ಇದರ ಅರ್ಥವೇನು?
ಸಾರಿಗೆ ನಿಗಮಗಳಲ್ಲಿ ಇರುವ ಕಾನೂನು ವಿಭಾಗ ಹಾಗೂ ವಕೀಲರು ಕೇವಲ ಬಸ್‌ಗಳನ್ನು ಬಿಡಿಸಿಕೊಂಡು ಬರುವುದಕ್ಕೆ ಇರೋದ? ಹಾಗಾದರೆ ಸಂಸ್ಥೆಯಲ್ಲಿದ್ದುಕೊಂಡು ಸಾರ್ವಜನಿಕ ಸೇವೆ ಮಾಡುತ್ತಿರುವ ಚಾಲಕರು ಸಂಸ್ಥೆಗೆ ಏನೇನು ಅಲ್ಲವೆ? ಅಪಘಾತವಾದರೆ ಅವರು ಖಾಸಗಿ ವಕೀಲರ ಮೂಲಕ ಕಾನೂನು ಹೋರಾಟ ಮಾಡಬೇಕು ಎಂದರೆ ಇದರ ಅರ್ಥವೇನು?

ಸಂಸ್ಥೆಯಲ್ಲಿ ಸಾರ್ವಜನಿಕ ಸೇವೆ ಮಾಡುತ್ತಿರುವ ಚಾಲಕರು ಅವರ ಸ್ವಂತಕ್ಕಾಗಿ ಬಸ್‌ಗಳನ್ನು ತೆಗೆದುಕೊಂಡು ಹೋಗಿ ಅಪಘಾತ ಮಾಡಿದ್ದಾರೆ ಎಂದು ಸಂಸ್ಥೆಯ ವಕೀಲರು ನೌಕರರ ವಿರುದ್ಧವಾಗಿ ನಿಲ್ಲುತ್ತಿದ್ದಾರೆಯೇ? ಈ ಚಾಲಕರು ಬಸ್ ಓಡಿಸುತ್ತಿರುವುದರಿಂದಲೇ ವಕೀಲರಾಗಿರುವ ನಿಮಗೂ ಸಂಸ್ಥೆ ವೇತನ ಕೊಡುತ್ತಿದೆ ಎಂಬುದನ್ನು ತಾವು ಮರೆತಿದ್ದೀರಾ?
ಚಾಲಕರೆ ಇಲ್ಲ ಎಂದಮೇಲೆ ಸಾರಿಗೆ ಸಂಸ್ಥೆ ಎಲ್ಲಿರುತ್ತದೆ. ಸಂಸ್ಥೆಯೆ ಇಲ್ಲ ಎಂದ ಮೇಲೆ ನಿಮ್ಮ ಅವಶ್ಯಕತೆ ಯಾರಿಗೆ ಇರುತ್ತದೆ. ಇಲ್ಲಿ ಸಾರಿಗೆ ನಿಗಮಗಳು ಇವೆ ಎಂದರೆ ಅದಕ್ಕೆ ಚಾಲಕರೆ ಮೊದಲು. ಆನಂತರ ಎಂಡಿ, ಸಿಟಿಎಂ, ಡಿಸಿ, ಡಿಎಂ ಇತ್ಯಾದಿ ಹುದ್ದೆಗಳು ಬರುವುದು. ಆದರೆ ಇಲ್ಲಿ ಚಾಲನಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಬೇಕಾದ ಸಂಸ್ಥೆಯ ಕಾನೂನು ವಿಭಾಗ ಅಪಘಾತವಾದ ಕೂಡಲೇ ಚಾಲಕರನ್ನು ಶತ್ರುಗಳ ರೀತಿ ನಡೆಸಿಕೊಳ್ಳುತ್ತಿರುವುದು ಏಕೆ ಎಂಬುವದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಖಾಸಗಿ ಸಾರಿಗೆ ಕಂಪನಿಗಳ ಬಸ್‌ಗಳು ಅಪಘಾತವಾದರೆ ತಮ್ಮ ಚಾಲಕರ ರಕ್ಷಣೆಗೆ ವಕೀಲರನ್ನು ನೇಮಕ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಚಾಲಕರಿಗೆ ಶಿಕ್ಷೆ ಕೊಡಿಸುವುದಕ್ಕೆ ವಕೀಲರನ್ನು ನೇಮಕ ಮಾಡಿಕೊಂಡಿದೆ ಎಂಬ ರೀತಿ ಸಂಸ್ಥೆಯ ಕಾನೂನು ವಿಭಾಗ ನಡೆದುಕೊಳ್ಳುತ್ತಿದೆ. ಇದು ಸರಿಯೇ?
ಚಾಲಕರು ಇರುವುದರಿಂದಲೇ ಇಡಿ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರ ಕುಟುಂಬದವರಿಗೂ ಅನ್ನ ಸಿಗುತ್ತಿರುವುದು. ಅಂದಮೇಲೆ ನಿಮ್ಮ ಪಾಲಿಗೆ ಚಾಲಕರು ಅನ್ನಕೊಡುತ್ತಿರುವ ದೇವರಲ್ಲವೇ? ಆದರೆ ಅಂಥ ದೇವರುಗಳನ್ನೇ ನೀವು ಕೀಳಾಗಿ ಕಾಣುವ ಮೂಲಕ ಅವರಿಗೆ ಕೋರ್ಟ್‌ನಲ್ಲಿ ನ್ಯಾಯಕೊಡಿಸುವ ಬದಲು ಶಿಕ್ಷೆ ಆಗುವಂತೆ ನೋಡಿಕೊಳ್ಳುವುದಕ್ಕೇ ಹೆಚ್ಚಾಗಿ ಅವಸರ ಪಡುತ್ತೀರಿ ಎಂದರೆ ನಿಮ್ಮನ್ನು ಏನೆಂದು ಕರೆಯಬೇಕು ಹೇಳಿ?
ಇನ್ನು ಮುಂದಾದರೂ ಆಕಸ್ಮಿಕವಾಗಿ ಸಂಭವಿಸುವ ಅಪಘಾತದ ವೇಳೆ ಚಾಲಕರ ರಕ್ಷಣೆಗೆ ಸಂಸ್ಥೆಯ ಕಾನೂನು ವಿಭಾಗದ ಮುಂದಾಗಬೇಕು. ಜತೆಗೆ ಚಾಲಕರು ಯಾವುದೇ ಖಾಸಗಿ ವಕೀಲರ ಮೂಲಕ ಅಪಘಾತ ಪ್ರಕರಣವನ್ನು ಹಾಕದಂತೆ ನೋಡಿಕೊಳ್ಳಬೇಕು. ಆಗ ನೌಕರರು ಕೂಡ ಸಂಸ್ಥೆಗೆ ಇನ್ನಷ್ಟು ಪ್ರಾಮಾಣಿಕರಾಗಿ ಹಾಗೂ ನಿಷ್ಠಾವಂತರಾಗಿ ಇರುತ್ತಾರೆ.
ಈ ಬಗ್ಗೆ ಇನ್ನಾದರೂ ಸಂಬಂಧಪಟ್ಟ ಎಂಡಿಗಳು ಎಚ್ಚೆತ್ತುಕೊಂಡು ಕಾನೂನು ವಿಭಾಗದ ಅಧಿಕಾರಿಗಳಿಗೆ ತಿಳಿಹೇಳಿ ನೌಕರರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು ಎಂಬುವುದು ವಿಜಯಪಥ ಮೀಡಿಯಾ ಕಳಕಳಿ.
Related


You Might Also Like
ಡೆಹ್ರಾಡೂನ್ನಲ್ಲಿ ಮೇಘಸ್ಫೋಟ ಮುಳುಗಿದ ಹಲವು ಮನೆಗಳು- ಇಬ್ಬರು ನಾಪತ್ತೆ
ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ನಲ್ಲಿ ಮಹಾಮೇಘಸ್ಫೋಟ ಸಂಭವಿಸಿದ್ದು, ಮನೆಗಳು ಮತ್ತು ಐಟಿ ಪಾರ್ಕ್ ಪ್ರದೇಶ ಜಲಾವೃತಗೊಂಡಿದೆ. ತಪೋವನ್ನಲ್ಲಿ ಹಲವಾರು ಮನೆಗಳು ಮುಳುಗಿದ್ದು, ಇಬ್ಬರು ಕಾಣೆಯಾಗಿದ್ದಾರೆ. ಕಾರ್ಲಿಗಾಡ್ ನದಿಯಲ್ಲಿ...
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಕಾರ ಸಂಘದ ವಾರ್ಷಿಕೋತ್ಸವ
ಬೀದರ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘವು ತನ್ನ 30ನೇ ಸಾಮಾನ್ಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಂಗಮಂದಿರದಲ್ಲಿ ಭವ್ಯವಾಗಿ ಆಚರಿಸಿತು....
ಇತ್ತೀಚಿಗೆ ಆಹಾರ ಉತ್ಪಾದನಾ ಪ್ರಮಾಣ ಕಡಿಮೆ ಆಗಿದೆ: ಸಿಎಂ ಸಿದ್ದರಾಮಯ್ಯ ಆತಂಕ
ಧಾರವಾಡ: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಆಹಾರ ಉತ್ಪಾದನೆಯಲ್ಲಿ ಹಿಂದೆ ಇದ್ದೆವು. ಬಳಿಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಬೆಳೆಸಿಕೊಂಡು ರಫ್ತು ಮಾಡುವುದರಲ್ಲೂ ಮುಂದೆ ಬಂದೆವು. ಆದರೆ, ಇತ್ತೀಚಿಗೆ ಫಲವತ್ತತೆ ಕಡಿಮೆ...
ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ: 1,65,000 ರೂ. ಎಗರಿಸಿದ ಹ್ಯಾಕರ್
ಬೆಂಗಳೂರು: ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ದಂಪತಿಗೆ ಸೈಬರ್ ವಂಚಕರಿಂದ ಸಂಕಷ್ಟ ಎದುರಾಗಿದೆ. ಪ್ರಿಯಾಂಕ ಉಪೇಂದ್ರ ಅವರು ಆನ್ಲೈನ್ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದನ್ನೇ...
ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ ಈ ಕರ್ತವ್ಯ ತಪ್ಪದೇ ಎಲ್ಲರೂ ನಿರ್ವಹಿಸಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೇ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ದೇಶದಲ್ಲಿ ವಿವಿಧ ಜಾತಿ,...
ಅವನನ್ನ ಮೂರ್ಖ ಅಂತ ಕರೆಯಬೇಕು: ಪ್ರತಾಪ್ ಸಿಂಹ ಹೆಸರು ಹೇಳದೆ ಸಿಎಂ ವಾಗ್ದಾಳಿ
ಬೆಂಗಳೂರು: ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಮಾಡಬಾರದು ಎಂಬ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ....
KSRTC: ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಕೂಡ 38 ತಿಂಗಳ ಹಿಂಬಾಕಿ ಸರ್ಕಾರ ಕೊಟ್ಟರೆ ನೌಕರರು ಖುಷಿಯಾಗುತ್ತಾರೆ ಎಂದೇ ಶಿಫಾರಸು ಮಾಡಿದೆ
ಬೆಂಗಳೂರು: ಸಾರಿಗೆ ನೌಕರರಿಗೆ 2020 ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಕೊಡುವುದಕ್ಕೆ ತಾವು ಈಗಾಗಲೇ 14 ತಿಂಗಳ ಹಿಂಬಾಕಿಯಷ್ಟೇ...
ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲೇ ಧಗಧಗಿಸಿದ ಬಿಎಂಟಿಸಿ ಬಸ್- ಸದ್ಯ 75 ಪ್ರಯಾಣಿಕರು ಸೇಫ್
ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲೆ ಹೊತ್ತು ಉರಿದು ಸಂರ್ಪೂಣ ಸುಟ್ಟು ಕರಕಲಾದ ಘಟನೆ ನಗರದ ಎಚ್ಎಎಲ್ ಮುಖ್ಯದ್ವಾರದ...
ಬೆಳ್ಳಂಬೆಳಗ್ಗೆ ಅನಿರೀಕ್ಷಿತ ಭೇಟಿ ನೀಡಿ ಹಾಜರಾತಿ ಪರಿಶೀಲಿಸಿದ ಆಯುಕ್ತರು: ಪೌರ ಕಾರ್ಮಿಕರ ಮೇಲ್ವಿಚಾರಕರಿಬ್ಬರ ಮೇಲೆ ಕ್ರಮ
ಬೆಂಗಳೂರು: ಸರ್ವಜ್ಞನಗರ ಕ್ಷೇತ್ರದ ಬಾಣಸವಾಡಿಯ ಬಿಎಸ್ಎನ್ಎಲ್ ಮಸ್ಟರಿಂಗ್ ಪಾಯಿಂಟ್ (ಭುವನಗಿರಿ ಪಾರ್ಕ್) ನಲ್ಲಿ ಇಂದು ಮುಂಜಾನೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್...