ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರಿಗೂ ಸರ್ಕಾರಿ ನೌಕರರ ಸರಿಸಮಾನ ವೇತನ ವಾದ 6ನೇ ವೇತನ ಆಯೋಗದಂತೆ ವೇತನ ನೀಡಲು ಕಳೆದ 20-01-2021ರಂದು ವೇತನ ಪರಿಷ್ಕರಣೆ ಪಟ್ಟಿ ಸಿದ್ಧಪಡಿಸಲಾಗಿತ್ತು.
ಆಗಲೇ ಎಲ್ಲ ಸಾರಿಗೆ ನೌಕರರ ಸಂಘಟನೆಗಳ ಮುಖಂಡರು ಒಗ್ಗಟ್ಟಾಗಿ ಈ ಶಿಫಾರಸ್ಸಿಗೆ ಆಗ್ರಹಿಸಿ 6ನೇ ವೇತನ ಆಯೋಗದ ವೇತನ ಕೊಡಿಸಿದ್ದಿದ್ದರೆ. ಈಗ ತನ್ನಿಂತಾನೇ ಎಲ್ಲ ಸಾರಿಗೆ ನೌಕರರು ಕೂಡ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆಯುತ್ತಿದ್ದರು.
ಅದೂ ಕೂಡ ಅನುಬಂಧ -1ರ ಕೋಷ್ಟಕದಂತೆ ಈಗ 4ನೇ ದರ್ಜೆ ನೌಕರರ ವೇತನ 17000 ರೂ.ಗಳಿಂದ 27000 ರೂ.ಗಳು, 3ನೇ ದರ್ಜೆ ನೌಕರರ ವೇತನ 21400 ರೂ.ಗಳಿಂದ 34100 ರೂ.ಗಳಿಗೂ ಅಧಿಕ.
ಇನ್ನು 2ನೇ ದರ್ಜೆ ನೌಕರರ ವೇತನ 36,000 ರೂ,ಗಳಿಂದ 58300 ರೂ.ಗಳಿಗೂ ಹೆಚ್ಚು ಮತ್ತು 1ನೇ ದರ್ಜೆ ನೌಕರರ ಅಥವಾ ಅಧಿಕಾರಿಗಳ ವೇತನ 50150 ರೂ.ಗಳಿಂದ 76000 ರೂ.ಗಳ ವರೆಗಿನ ವೇತನ ಪಡೆಯುವುದಕ್ಕೆ ಅರ್ಹರಾಗುತ್ತಿದ್ದರು.
ಆದರೆ, ಯಾರು ಏನು ಮಾಡಿದರೂ ಗೊತ್ತಿಲ್ಲ. ಅಧಿಕಾರಿಗಳು ಮತ್ತು ನೌಕರರು ಪಡೆಯಬೇಕಿದ್ದ ವೇತನ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹೀಗಾಗಿ ಈಗಲಾದರೂ ಎಲ್ಲ ಸಾರಿಗೆ ಅಧಿಕಾರಿಗಳು/ ನೌಕರರ ಪರವಾಗಿ ಎಲ್ಲ ನೌಕರರ ಸಂಘಟನೆಗಳ ಮುಖಂಡರು ಒಂದಾಗದಿದ್ದರೂ, ಏಕ ನಿರ್ಧಾರ ತೆಗೆದುಕೊಂಡು 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಾರಿಗೆ ನೌಕರರಿಗೆ ನೀಡಲು ತಯಾರಿಸಿರುವ ವರದಿಗಳಂತೆ ವೇತನ ಕೊಡಿಸಬೇಕು ಎಂದು ಅಧಿಕಾರಿಗಳು/ ನೌಕರರು ಮನವಿ ಮಾಡಿದ್ದಾರೆ.
ಇನ್ನು ಅಧಿಕಾರಿಗಳು ಮತ್ತು ನೌಕರರು ನಾವು ಬೇರೆ ಬೆರೆ ಎಂಬುದನ್ನು ಬಿಟ್ಟು ನಾವೆಲ್ಲ ಸಾರಿಗೆ ಅಧಿಕಾರಿಗಳು/ ನೌಕರರು, ನಾವು ಸಾರ್ವಜನಿಕ ಸೇವಕರು ಎಂದು ಭಾವನೆಯೊಂದಿಗೆ ಒಗ್ಗಟ್ಟಾಗಿ ಸಂಘಟನೆಗಳೊಂದಿಗೆ ಹೋರಾಟಕ್ಕೆ ದುಮುಕಿದರೆ ಸರ್ಕಾರ ಈಗಾಗಲೇ ಸಿದ್ಧಪಡಿಸಿರುವಂತೆ ವೇತನ ನೀಡುವುದಕ್ಕೆ ಹಿಂದೆ ಸರಿಯುವುದಿಲ್ಲ ಎಂಬ ನಂಬಿಕೆ ಇದೆ ಎನ್ನುತ್ತಾರೆ ಚಾಲಕ ಮಹೇಶ್.
ಹೌದು! ಚಾಲಕರು ಹೇಳಿರುವಂತೆ ಅಧಿಕಾರಿಗಳಾದ ನಾವು ಕೂಡ ವರ್ಗಾವಣೆ, ಅಮಾನತು ಮತ್ತು ಸರ್ಕಾರ, ನಿಗಮಗಳ ಆಡಳಿತ ಮಂಡಳಿಯ ಕೆಂಗಣ್ಣಿಗೆ ಎಲ್ಲಿ ಗುರಿಯಾಗುತ್ತೇವೊ ಎಂಬ ಭಯವನ್ನು ಬಿಟ್ಟು ನಮ್ಮ ವೇತನ ಹಕ್ಕುಗಳನ್ನು ಪಡೆಯಲು ಒಗ್ಗಟ್ಟಾಗುವ ಅವಶ್ಯಕತೆ ಈಗ ಇದೆ. ಇದು ಒಬ್ಬ ಅಧಿಕಾರಿಯಿಂದ ಸಾಧ್ಯವಿಲ್ಲ. ವಿಭಾಗ ಮತ್ತು ಡಿಪೋಗಳ ಮಟ್ಟದಲ್ಲಿರುವ ಎಲ್ಲ ಅಧಿಕಾರಿಗಳು ಒಂದಾಗಬೇಕು ಆಗ ಮಾತ್ರ ಇದು ಸಾಧ್ಯ ಎನ್ನುತ್ತಾರೆ ವಿಭಾಗೀಯ ನಿಯಂತ್ರಣಾಧಿಕಾರಿಯೊಬ್ಬರು.
ಇದಕ್ಕೆ ಪರಿಹಾರ ಎಂಬುಂತೆ ಸಾರಿಗೆ ನೌಕರರ ಸಂಘಟನೆಗಳು ಕೂಡ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಯ ಗಮನ ಸೆಳೆಯ ಬೇಕಿದ್ದು, ಇದು ಸಾಧ್ಯವಿಲ್ಲ, ಅದು ಸಾಧ್ಯವಿಲ್ಲ ಎಂಬುದನ್ನು ಬಿಟ್ಟು ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ, ಅದರಲ್ಲೂ ನ್ಯಾಯಯುತವಾಗಿ ಕೊಡಿಸುವ ನಿಟ್ಟಿನಲ್ಲೂ ಹೋರಾಟ ಮಾಡಬೇಕು ಎಂಬುವುದು ನೌಕರರ ಮನವಿ.