NEWSನಮ್ಮರಾಜ್ಯಸಂಸ್ಕೃತಿ

ಚಾಮುಂಡಿ ಬೆಟ್ಟದಲ್ಲಿ ಮೊಬೈಲ್‌ ಕಸಿದ ವಾನರನಿಗೆ ಬಾಳೆಹಣ್ಣಿನ ಆಮಿಷ!

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮೊಬೈಲ್ ಕಸಿದ ವಾನರವೊಂದು ಮರವೇರಿ ಭಕ್ತರೊಬ್ಬರಿಗೆ ಕೆಲಕಾಲ ಆಟವಾಡಿಸಿದ ಘಟನೆ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ.

ಹಾಸನದಿಂದ ಬಂದ ಕುಟುಂಬ ನಾಡದೇವಿ ಚಾಮುಂಡಿಯ ದರ್ಶನ ಪಡೆಯಲು ಮೆಟ್ಟಿಲು ಮಾರ್ಗದಲ್ಲಿ ಸಾಗಲು ಸಜ್ಜಾಗಿದ್ದರು. ಪಾದದ ಬಳಿ ಇರುವ ಚಾಮುಂಡಿ ವಿಗ್ರಹಕ್ಕೆ ಪೂಜೆ ಸಲ್ಲಿಸುವ ವೇಳೆ ಮಹಿಳೆಯ ಕೈಯಲ್ಲಿದ್ದ ಪರ್ಸ್ ಕಸಿದ ಕೋತಿ ಮರವೇರಿ ಕುಳಿತಿದೆ.

ಆ ಬಳಿಕ ಪರ್ಸ್ ನಲ್ಲಿದ್ದ ಒಂದೊಂದೇ ವಸ್ತುಗಳನ್ನು ಬಿಸಾಡಿದ ಮಂಗ ಕೊನೆಗೆ ಮೊಬೈಲ್ ಬಿಡದೆ ಕೊಂಬೆಯಿಂದ ಕೊಂಬೆಗೆ ಜಿಗಿಯುತ್ತ ಭಕ್ತರನ್ನು ಪರದಾಡುವಂತೆ ಮಾಡಿದೆ.

ಈ ವೇಳೆ ಮೊಬೈಲ್‌ ಪಡೆದುಕೊಳ್ಳುವುದುಕ್ಕೆ ವಾನರನಿಗೆ ಬಾಳೆಹಣ್ಣೀನ ಆಮಿಷ ಒಡ್ಡಿದ್ದಾರೆ. ಆದರೆ ಮಂಗಮಾತ್ರ ಮೊಬೈಲ್ ಬಿಡದೆ. ತನ್ನ ಚೇಷ್ಟೆಯನ್ನು ಮುಂದುವರಿಇದೆ. ಹೀಗೆ ವಾನರ ಸುಮಾರು ಅರ್ಧಗಂಟೆ ಕಾಲ ತನ್ನ ಕುಚೇಷ್ಟೆ ಮುಂದುವರಿಸಿ ಕೊನೆಗೆ ತುಪುಕ್‌ ಎಂದುಮೊಬೈಲ್‌ ಬಿಸಾಡಿತು.

ಸದ್ಯ ಕೊನೆಗೂ ಮೊಬೈಲ್ ಚಿಕ್ಕಿತಲ್ಲ ಎಂದು ಭಕ್ತರು ನೆಮ್ಮದಿಯಿಂದ ನಾಡದೇವಿಯ ದರ್ಶನಕ್ಕೆ ತೆರಳಿದರು. ಈ ವಿಡಿಯೋ ಜಾಲತಾಣದಲ್ಲಿ ಈಗ ಫುಲ್ ವೈರಲ್ ಆಗುತ್ತದ್ದು ವಾರನರ ಆಟವನ್ನು ತಾಮಾಸೆಯಿಂದಲೇ ನೋಡಿ ಖುಷಿಪಡುತ್ತಿದ್ದಾರೆ.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ