Please assign a menu to the primary menu location under menu

NEWSಕೃಷಿನಮ್ಮರಾಜ್ಯ

ನನ್ನ ರಾಜ್ಯದ ಬರಗಾಲದ ಬವಣೆ, ರೈತರ ಸಂಕಷ್ಟ ತಪ್ಪಿಸಿ: ಸಿಎಸ್‌ಒಗೆ ರೈತ ಮುಖಂಡರ ನಿಯೋಗ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನನ್ನ ರಾಜ್ಯದಲ್ಲಿ ಬರಗಾಲದ ಬವಣೆ ಸಂಕಷ್ಟ ತಪ್ಪಿಸಿ. ರೈತರ ಗಾಯದ ಮೇಲೆ ಬರೆ ಹಾಕುವುದು ಬೇಡ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕುರುಬೂರ್ ಶಾಂತಕುಮಾರ್ ನೇತೃತ್ವದ ರೈತ ಮುಖಂಡರ ನಿಯೋಗದಲ್ಲಿ ಒತ್ತಾಯಿಸಿತು.

ಇಂದು ಮಧ್ಯಾಹ್ನ ವಿಧಾನಸೌಧಕ್ಕೆ ಆಗಮಿಸಿದ ರೈತ ಮುಖಂಡರ ನಿಯೋಗ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ಭೇಟಿ ಮಾಡಿ ರಾಜ್ಯದ ಬರಗಾಲ ಮತ್ತು ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು ಎಂದು ಸುದ್ದಿಗಾರರಿಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.

ಇನ್ನು ಭೇಟಿ ವೇಳೆ ಮುಖ್ಯ ಕಾರ್ಯದರ್ಶಿಗಳು ಕಂದಾಯ, ವ್ಯವಸಾಯ, ನೀರಾವರಿ, ವಿದ್ಯುತ್, ಕಬ್ಬು ಅಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳ ಸಭೆಯನ್ನು ಶೀಘ್ರದಲ್ಲೇ ಏರ್ಪಾಟು ಮಾಡುವಂತೆ ಆಪ್ತ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಅವರಿಗೆ ಸೂಚನೆ ನೀಡಿದರು ಎಂದು ಹೇಳಿದರು.

ಇನ್ನು ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ದನ ಕರುಗಳಿಗೆ ಮೇವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ ಕೃಷ್ಣಾ ನದಿ ಭಾಗದಿಂದ ಹಾಗೂ ರಾಜ್ಯದ ಎಲ್ಲಾ ಜಲಾಶಯಗಳಿಂದ ನಾಲೆಗಳ ಮೂಲಕ ಕೆರೆ ಕಟ್ಟೆಗಳಿಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ ಈ ಬಗ್ಗೆ ಕೂಡಲೇ ಮಹಾರಾಷ್ಟ್ರ ಸರ್ಕಾರದ ಗಮನ ಸೆಳೆದು ರೈತರ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದೇವೆ ಎಂದರು.

ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಕಾರಣ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗುತ್ತಿದೆ. ದನ ಕರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಅಧಿಕಾರಿಗಳು ಚುನಾವಣೆಯ ಕಾರಣ ಹೇಳುತ್ತಾ ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಗಾಲದ ಸಂಕಷ್ಟದಿಂದ ರೈತರು ನರಳುತ್ತಿದ್ದಾರೆ. ಆದರೆ ರಾಜ್ಯದ ಸಕ್ಕರೆ ಕಾರ್ಖಾನೆಗಳು ಆರು ತಿಂಗಳಿಂದಲೂ ಕಬ್ಬಿನ ಹಣ ರೂ.2600 ಕೋಟಿ ರೈತರಿಗೆ ಪಾವತಿಸಿಲ್ಲ ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಯನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿರುವ ಕಾರಣ ಯಾವುದೇ ಕ್ರಮ ಜಾರಿಯಾಗಿಲ್ಲ ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷತನ ತೋರುತ್ತಿವೆ ಈ ಬಗ್ಗೆ ತಕ್ಷಣವೇ ಕ್ರಮ ಜಾರಿಯಾಗಬೇಕು ಎಂದು ಒತ್ತಾಯಿಸಿರುವುದಾಗಿ ಹೇಳಿದರು.

ಸಕ್ಕರೆ ಕಾರ್ಖಾನೆಗಳು ಕಬ್ಬು ಕಟಾವು ಯಂತ್ರದಲ್ಲಿ ಕಟಾವು ಮಾಡಿದ ಕಬ್ಬಿನಲ್ಲಿ ಶೇಕಡ 8ರಷ್ಟು ವೇಸ್ಟೇಜ್ ಎಂದು ತೂಕದಲ್ಲಿ ಕಡಿತ ಮಾಡಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 224 ತಾಲೂಕು ಬರಗಾಲ ಎಂದು ಘೋಷಣೆ ಮಾಡಿ ಬರಗಾಲದ ನಷ್ಟಕ್ಕಾಗಿ ರೈತರ ಖಾತೆಗಳಿಗೆ 2000 ಹಣ ನೀಡಲಾಗಿದೆ, ಇದರಿಂದ ರೈತರಿಗೆ ಯಾವುದೇ ಅನುಕೂಲವಾಗಿಲ್ಲ ಎಂದರು

ಇನ್ನು ಕೂಡಲೇ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾನದಂಡದಂತೆ ಹಣ ಬಿಡುಗಡೆಗೊಳಿಸಿ ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸಿ ದೇಶದ ಜನರಿಗೆ ಆಹಾರ ಬೆಳೆಯುವ ರೈತರ ಬದುಕು ನಾಶವಾದರೆ ಎಲ್ಲ ಜನರ ಬದುಕು ನಾಸವಾಗುತ್ತದೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು.

ರಾಜ್ಯದಲ್ಲಿ 40 ಲಕ್ಷ ಕೃಷಿ ಕೊಳವೆ ಬಾವಿಗಳಿವೆ, ಅವುಗಳಲ್ಲಿ ಪ್ರಸ್ತುತ 10 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಬರದ ಕಾರಣ ನೀರು ಹಿಂಗಿ ಹೋಗಿದೆ. ಲಕ್ಷಾಂತರ ತೆಂಗಿನ ಗಿಡಗಳು ಹಾಗೂ ಕಬ್ಬು ಇತರೆ ಬೆಳೆ ಒಣಗೆ ಹೋಗುತ್ತಿವೆ. ಕಾಡಂಚಿನ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಪ್ರಾಣಿಗಳು ಆನೆ, ಕಾಡುಹಂದಿ, ನವಿಲು, ಕೋತಿ ಇನ್ನಿತರ ಪ್ರಾಣಿಗಳು ಹಳ್ಳಿಗಳಿಗೆ ಬಂದು ನೀರು ಕುಡಿದು ಬೆಳೆಗಳನ್ನು ತಿಂದು ನಾಶ ಮಾಡುತ್ತಿವೆ.

ರಾಜ್ಯಾದ್ಯಂತ ಬೆಳೆವಿಮೆ ನೋಂದಾಯಿಸಿಕೊಂಡಿರುವ ರೈತರಿಗೆ ಪರಿಹಾರ ಹಣ ಬಂದಿಲ್ಲ. ಇದಕ್ಕೆ ಯಾವುದೇ ಕಂಪನಿಗಳು ಸಮರ್ಪಕ ಉತ್ತರ ನೀಡುತ್ತಿಲ್ಲ. ಇದು ರೈತರಿಗೆ ನುಂಗ್ಗಲಾರದ ತುತ್ತಾಗಿದೆ. ಭೀಕರ ಬರಗಾಲ ಕಾರಣ ಮುಂದಿನ ಕೃಷಿ ಚಟುವಟಿಕೆ ನಡೆಸಲು ಎಲ್ಲ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡಲು ಸೂಕ್ತ ನಿರ್ದೇಶನ ನೀಡಬೇಕು. ರೈತರ ಕೃಷಿ ಸಾಲಕ್ಕೆ ಎಲ್ಲ ಬ್ಯಾಂಕುಗಳಲ್ಲಿ ಸಿಬಿಲ್ ಸ್ಕೋರ್ ಕೆಳುವುದನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿರುವುದಾಗಿ ತಿಳಿಸಿದರು.

ಈ ಎಲ್ಲ ವಿಷಯಗಳ ಬಗ್ಗೆ ತುರ್ತು ಕ್ರಮ ಕೈಗೊಂಡು ಎಲ್ಲ ಜಿಲ್ಲೆಗಳಲ್ಲಿ ಬರಗಾಲದ ಸಂಕಷ್ಟ ನಿವಾರಣೆಗೆ ಪ್ರತ್ಯೇಕ ಅಧಿಕಾರಿಗಳ ತಂಡ ರಚಿಸಿ ರೈತರ ಬವಣೆಗಳನ್ನು ತಪ್ಪಿಸಿ. ಚುನಾವಣೆ ಕಾರ್ಯಕ್ಕೆ ನೀಡಿರುವ ಮಹತ್ವವನ್ನೇ ಈ ಸಮಸ್ಯೆಗಳಿಗೂ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದರು.

ನಿಯೋಗದಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್, ಗುಂಡ್ಲುಪೇಟೆ ನಾಗಾರ್ಜುನ್, ಬರಡನಪುರ ನಾಗರಾಜ್, ಧರ್ಮರಾಜ್, ಮಾದಪ್ಪ ಇತರರು ಇದ್ದರು.

Leave a Reply

error: Content is protected !!
LATEST
ಪತ್ನಿ ಅಕ್ರಮ ಸಂಬಂಧದಿಂದ ಪತಿ ಆತ್ಮಹತ್ಯೆ ಪ್ರಕರಣ: ಹೆಂಡತಿಗೆ ಶಿಕ್ಷಿಸಲಾಗದು - ಹೈ ಕೋರ್ಟ್ ತೀರ್ಪು ತುಮಕೂರು: ಗೋವಾಗೆ ಹೋಗುತ್ತಿದ್ದ ಬಸ್ ಪಲ್ಟಿ: ಮೂವರು ಮಹಿಳೆಯರು ಮೃತ ಮೈಸೂರು-ಮಂಡ್ಯ: ಮಳೆ ಹೆಚ್ಚಾಗಿರುವ ಹಿನ್ನೆಲೆ ಶಾಲೆಗಳಿಗೆ ರಜೆ- ಡಿಸಿಗಳ ಆದೇಶ ದೆಹಲಿ: ರೈತರು ಉಪವಾಸ ಸತ್ಯಾಗ್ರಹ ಬೆಂಬಲಿಸಿ ಡಿ.6ರಿಂದ ಬೆಂಗಳೂರಿನಲ್ಲೂ ಸತ್ಯಾಗ್ರಹ: ಕುರುಬೂರು ಶಾಂತಕುಮಾರ್ ರಾಜ್ಯದಲ್ಲಿ ವರುಣನ ಅಬ್ಬರ: ಹಲವು ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ನಾಳೆ ರಜೆ ಕನ್ನಡ ಕಿರುತೆರೆಯ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಶೋಭಿತಾ ಶಿವಣ್ಣ ಆತ್ಮಹತ್ಯೆ KSRTC: 1308 ನೌಕರರ ವರ್ಗಾವಣೆ- ಆಕ್ಷೇಪಣೆ ಸಲ್ಲಿಸಲು ಡಿ.4ರವರೆಗೂ ಅವಕಾಶ ಸಾರಿಗೆ ನೌಕರರ ಬೇಡಿಕೆ ಅರ್ಥ ಮಾಡಿಕೊಳ್ಳಿ: ಜಂಟಿ ಕ್ರಿಯಾ ಸಮಿತಿಗೆ ನೌಕರನ ಒತ್ತಾಯ ಬಿಬಿಎಂಪಿ: 13 ಕೆರೆಗಳ ಒತ್ತುವರಿ ತೆರವು- ₹242.5 ಕೋಟಿ ಮೌಲ್ಯದ 7 ಎಕರೆ ಪ್ರದೇಶ ವಶ -ಪ್ರೀತಿ ಗೆಹ್ಲೋಟ್ ಫೆಂಗಲ್ ಚಂಡಮಾರುತದ ಪರಿಣಾಮ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ: ತುಷಾರ್ ಗಿರಿನಾಥ್