NEWSನಮ್ಮಜಿಲ್ಲೆನಮ್ಮರಾಜ್ಯ

ಬನ್ನೂರು: ಬೀಡನಹಳ್ಳಿಯಲ್ಲಿ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬ ಆಚರಣೆ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಹೋಬಳಿ ಸಮೀಪವಿರುವ ಬೀಡನಹಳ್ಳಿ ಗ್ರಾಮದಲ್ಲೂ ಪ್ರತಿವರ್ಷದಂತೆ ಈ ವರ್ಷವೂ ರಾಸುಗಳ ಕಿಚ್ಚು ಹಾಯಿಸಲಾಯಿತು. ಗ್ರಾಮದ ಹೊರ ಭಾಗದಲ್ಲಿರುವ ಶ್ರೀ ಶನೇಶ್ವರ ದೇಗುಲದ ಬಳಿ ಕಿಚ್ಚು ಹಾಯಿಸುವ ಮೂಲಕ ಊರಿನ ಹೃದಯ ಭಾಗದಲ್ಲಿರುವ ಶ್ರೀ ನಂದಿ ಬಸವೇಶ್ವರ ದೇಗುಲದ ವರೆಗೂ ಯುವ ಸಮೂಹ ಅಲಂಕರಿಸಿಕೊಂಡು ಕರೆತಂದಿದ್ದ ಎತ್ತುಗಳು, ಹಸುಗಳು, ಕುರಿಗಳು ಸೇರಿ ಎಲ್ಲ ರಾಸುಗಳನ್ನು ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸಿದರು.

ಗ್ರಾಮದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ಮೊದಲು ನಂದಿ ಬಸವೇಶ್ವರ ಸ್ವಾಮಿಯ ಬಸವನನ್ನು ಮೊದಲು ಕಿಚ್ಚುಹಾಯಿಸಲಾಯಿತು. ನಂತರ ಗ್ರಾಮಸ್ಥರು ಕರೆತಂದಿದ್ದ ಎಲ್ಲಾ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು.

ಇನ್ನು ಹೋಬಳಿಯ ಅತ್ತಹಳ್ಳಿ, ಚಾಮನಹಳ್ಳಿ, ಬಸವನಹಳ್ಳಿ, ಹನುಮನಾಳು, ಮಾದಿಗಹಳ್ಳಿ, ಮಾಕನಹಳ್ಳಿ ಸೇರಿದಂತೆ ಎಲ್ಲಾ ಗ್ರಾಮಹಳಲ್ಲೂ ರಾಸುಗಳ ಕಿಚ್ಚು ಹಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಇನ್ನು ನಗರ ಪ್ರದೇಶಗಳ ಜೊತೆಗೆ ಹಳ್ಳಿಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗುರುವಾರ ಮುಂಜಾನೆಯೂ ಹಬ್ಬದ ಖರೀದಿ ಮುಂದುವರಿದಿತ್ತು. ಜನರು ಕಬ್ಬು, ಎಳ್ಳು–ಬೆಲ್ಲ, ಅವರೆ–ಗೆಣಸು ಮೊದಲಾದ ಸಾಮಗ್ರಿಗಳನ್ನು ಕೊಂಡು ತಂದರು.

ಮನೆಯಲ್ಲಿನ ಹೆಣ್ಣುಮಕ್ಕಳು ಹೊಸ ಬಟ್ಟೆ ತೊಟ್ಟು, ಅಕ್ಕಪಕ್ಕದ ಮನೆಮಂದಿಗೆಲ್ಲ ಎಳ್ಳು–ಬೆಲ್ಲ ಹಂಚುತ್ತ ಶುಭಾಶಯ ಕೋರಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬೆಳಗ್ಗೆಯಿಂದಲೇ ದೇಗುಲಗಳಲ್ಲಿ ಜನರ ಸಾಲು ನೆರೆದಿತ್ತು.

ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ರಾಸುಗಳ ಮೈ ತೊಳೆದು, ವಿವಿಧ ಸಾಮಗ್ರಿಗಳಿಂದ ಅಲಂಕರಿಸಿ, ಸಂಜೆ ಕಿಚ್ಚು ಹಾಯಿಸಲಾಯಿತು. ಊರಿನ ರಸ್ತೆಗಳಲ್ಲಿ ಕಿಚ್ಚು ಹಾಯಿಸುವ ದೃಶ್ಯ ಸಾಮಾನ್ಯವಾಗಿತ್ತು.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ