CrimeNEWSನಮ್ಮರಾಜ್ಯಬೆಂಗಳೂರು

ಹೊಸ ವರ್ಷದಂದೆ ಬಿಬಿಎ ವಿದ್ಯಾರ್ಥಿನಿ ನೇಣಿಗೆ ಶರಣು- BEO ಕಚೇರಿ ವ್ಯವಸ್ಥಾಪಕ ಆತ್ಮಹತ್ಯೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಹೊಸ ವರ್ಷ ಎಂದರೆ ಎಲ್ಲರೂ ಹೊಸ ಹೊಸ ಕನಸುಗಳನ್ನು ಹೊತ್ತು ಹೊಸ ಬದುಕಿಗೆ ಅಡಿ ಇಡುವ ದಿನ. ಆದರೆ‌ ಇಲ್ಲೊಬ್ಬಳು ಬಿಬಿಎ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ವಿದ್ಯಾರ್ಥಿನಿ ನೇಣಿಗೆ ಶರಣಾಗುವ ಮೂಲಕ ತನ್ನ ಎಲ್ಲ ಕನಸುಗಳನ್ನು ಕೊಂದು ಹಾಕಿದ್ದಾಳೆ.

ಬೆಂಗಳೂರಿನ ಸುಧಾಮ ನಗರದ ನಿವಾಸಿ ವರ್ಷಿಣಿ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಈಕೆ ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರ್ಷಿಣಿ ಜಯನಗರದ ಕಮ್ಯೂನಿಟಿ ಕಾಲೇಜಿನಲ್ಲಿ ಓದುತ್ತಿದ್ದಳು.

ಸದ್ಯ ವಿದ್ಯಾರ್ಥಿನಿಯ ಸಾವಿಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಯುವತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಮನೆಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆಯಾ ಎನ್ನುವುದು ತಿಳಿದುಬಂದಿಲ್ಲ.

ಚಿಕ್ಕಮಗಳೂರು ಬಿಇಒ ಕಚೇರಿ ವ್ಯವಸ್ಥಾಪಕ ನೇಣಿಗೆ ಶರಣು: ಚಿಕ್ಕಮಗಳೂರಿನ ಬಿಇಒ ಕಚೇರಿಯಲ್ಲೇ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಮೂಡಿಗೆರೆ ತಾಲೂಕಿನ ಬಿಇಒ ಕಚೇರಿಯಲ್ಲಿ ಕಚೇರಿ ವ್ಯವಸ್ಥಾಪಕರಾಗಿದ್ದ ನಿಂಗಾನಾಯಕ್ ಆತ್ಮಹತ್ಯೆಗೆ ಶರಣಾದವರು. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
LATEST
ರೈಲ್ವೆ ನೌಕರರಿಗೆ ದಸರಾ ಹಬ್ಬದ ಬಂಪರ್: 78 ದಿನಗಳ ಸಂಬಳಕ್ಕೆ ಸಮನಾದ ಬೋನಸ್ ಘೋಷಣೆ ಅ.6ರಂದು ನಿವೃತ್ತ ನೌಕರರ ಸಭೆ: BMTC & KSRTC ನಿವೃತ್ತ ನೌಕರರ ಸಂಘದ ಕಾರ್ಯಧ್ಯಕ್ಷ ನಂಜುಂಡೇಗೌಡ KSRTC ತುಮಕೂರು: ಖಾಸಗಿ ಚಾಲಕರಿಗೆ ಮಣೆ ಹಾಕುವ ಡಿಸಿ, ಡಿಎಂಇ 20-30ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಚಾಲಕರ ಕಡೆಗಣನೆ... ಕರ್ನಾಟಕ - ಆಂಧ್ರ ಗಡಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಹೆಚ್ಚಿಸಿ: ಎರಡೂ ನಿಗಮಗಳ ಎಂಡಿಗಳಿಗೆ ಪ್ರಯಾಣಿಕರ ಒತ್ತಾಯ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ KSRTC ನಿವೃತ್ತ ನೌಕರರಿಗೆ ಹೆಚ್ಚಿನ ಪಿಂಚಣಿ ಅನುಷ್ಠಾನ ಶೀಘ್ರ ಜಾರಿಗೊಳಿಸಿ: ಕೇಂದ್ರದ ರಾಜ್ಯ ಕಾರ್ಮಿಕ ಸಚಿವರಿಗೆ ಸಂಸದ... ಬಿಸ್ಮಿಲ್ಲ ನಗರದ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಎಎಪಿ ಆಗ್ರಹ KSRTC ಹೊಳೆನರಸೀಪುರ ಘಟಕದ ನೌಕರರಿಗೆ ಕಿರುಕುಳ ಕೊಡುತ್ತಿರುವ DME- ದೂರು ನೀಡಿ 5 ತಿಂಗಳಾದರೂ ಸ್ಪಂದಿಸದ ಎಂಡಿ! BMTC ಚಾಲನಾ ಸಿಬ್ಬಂದಿಗಳಿಗೆ ಗನ್ ಲೈಸನ್ಸ್ ಪಡೆಯಲು ಅನುಮತಿ ನೀಡಬೇಕು: ಲಿಖಿತವಾಗಿ ಎಂಡಿಗೆ ಮನವಿ ಸಲ್ಲಿಸಿದ ನೌಕರ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಕುರಿತ ಕೆಂಪಣ್ಣ ಆಯೋಗದ ವರದಿ ತಕ್ಷಣ ಬಹಿರಂಗ ಪಡಿಸಿ, ಸದನದಲ್ಲಿ ಮಂಡಿಸಿ: ಎಎಪಿ ಒತ್...