NEWSನಮ್ಮಜಿಲ್ಲೆಬೆಂಗಳೂರು

ಬಿಬಿಎಂಪಿ 2024-25ನೇ ಸಾಲಿನಲ್ಲಿ ₹4,930 ಕೋಟಿ ಆಸ್ತಿ ತೆರಿಗೆ ಸಂಗ್ರಹ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2023-24 ನೇ ಸಾಲಿಗಿಂತ 2024-25ನೇ ಸಾಲಿನಲ್ಲಿ ₹1,000 ಕೋಟಿಗಳಿಗಿಂತ ಹೆಚ್ಚಿನ ಮೊತ್ತದ ಆಸ್ತಿ ತೆರಿಗೆ ಸಂಗ್ರಹಣೆಯಾಗಿದೆ. 2023-24 ನೇ ಸಾಲಿನಲ್ಲಿ ₹3,918 ಕೋಟಿ ಆಸ್ತಿ ತೆರಿಗೆ ಸಂಗ್ರಹಣೆಯಾಗಿತ್ತು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನಿಶ್ ಮೌದ್ಗಿಲ್ ತಿಳಿಸಿದ್ದಾರೆ.

ಪ್ರಸಕ್ತ 2025-26ನೇ ಹಣಕಾಸು ವರ್ಷದಲ್ಲಿ ಪಾಲಿಕೆಯು ರೂ.6,000 ಕೋಟಿ ಮೊತ್ತದ ಆಸ್ತಿ ತೆರಿಗೆ ಸಂಗ್ರಹಣೆಯನ್ನು ಮೀರಲಿದೆ. 2016 ರಂತೆಯೇ ಮುಂದುವರಿದ ಆಸ್ತಿ ತೆರಿಗೆ ದರಗಳನ್ನು ಹೆಚ್ಚಿಸದೆ ಇರುವುದರಿಂದ ಇದೆಲ್ಲವೂ ಸಾಧ್ಯವಾಯಿತು ಎಂದು ವಿವರಿಸಿದ್ದಾರೆ.

2024-25 ರಲ್ಲಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸಾಧಿಸಿದ್ದು ಈ ಕೆಳಕಂಡ ಅಂಶಗಳಿಂದ: 1. ಒಂದು ಬಾರಿ ಪರಿಹಾರ ಯೋಜನೆ (OTS) 2. ಬಾಕಿ ಮತ್ತು ಪ್ರಸ್ತುತ ತೆರಿಗೆ ಬಾಕಿಗಳ ಮೇಲೆ ಬಹಳ ವ್ಯವಸ್ಥಿತ ಕೆಲಸ ನಿರ್ವಹಣೆ ಮತ್ತು ತಂತ್ರಜ್ಞಾನ ಆಧಾರಿತ ಅನುಸರಣೆ.

3. ಬಾಕಿ ಆಸ್ತಿ ತೆರಿಗೆಗಳನ್ನು ವಸೂಲಿ ಮಾಡಲು ಸಂಪೂರ್ಣವಾಗಿ ಪರಿಣಾಮಕಾರಿ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳು ಮತ್ತು ನಿಯಮಗಳನ್ನು ಹೊರಡಿಸಲಾಗಿತ್ತು. 4. ಬಾಕಿ ಹಾಗೂ ಪ್ರಸ್ತುತ ಸಾಲಿನ ಆಸ್ತಿ ತೆರಿಗೆಯ ವಸೂಲಾತಿಗೆ ಮನೆ- ಮನೆಗಳಿಗೆ ನಿರಂತರವಾಗಿ ಭೇಟಿ ನೀಡಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Deva
the authorDeva

Leave a Reply

error: Content is protected !!