ಹುಬ್ಬಳ್ಳಿ: ಅನುಸೂಚಿ ವಾಹನಗಳ ಅನಧೀಕೃತ ಕಾರ್ಯಾಚರಣೆಯಿಂದ ಅಪಾಘಾತಗಳು ಹೆಚ್ಚಾಗುತ್ತಿರುವ ಜತೆಗೆ ಸಂಸ್ಥೆಯ ಆದಾಯದ ಮೇಲು ಪರಿಣಾಮ ಬೀರುತ್ತಿರುವುದರಿಂದ ಈ ಬಗ್ಗೆ ನಿಗಾವಹಿಸಿ ವರದಿ ಸಲ್ಲಿಸಬೇಕು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸೂಕ್ತಾಧಿಕಾರಿಗಳು 26/11/2025 ರಂದು ವಿಡಿಯೋ ಸಂವಾದದಲ್ಲಿ ಆದೇಶ ನೀಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಅನುಸೂಚಿ ವಾಹನಗಳು ವೇಳಾ ಪಟ್ಟಿ ಉಲ್ಲಂಘಿಸಿ ಕಾರ್ಯಾಚರಣೆ ಮಾಡುತ್ತಿರುವ ಪ್ರಕರಣಗಳು ವರದಿಯಾಗಿವೆ. ಇದರಿಂದ ರಸ್ತೆ ಅಪಘಾತಕ್ಕೆ ಮತ್ತು ಸಂಸ್ಥೆಗೆ ನಷ್ಟ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಗಮನಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಹಿನ್ನೆಲೆಯಲ್ಲಿ ನಾವು ಆದೇಶಿಸಿರುವ ಈ ಕೆಳಕಂಡ ವಿಷಯಗಳ ಬಗ್ಗೆ ನಿಗಾವಹಿಸಬೇಕು ಮತ್ತು ಮತ್ತು ಉಲ್ಲಂಘನೆಯ ಪ್ರಕರಣಗಳನ್ನು ವರದಿ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.
1) ಅನುಸೂಚಿ ವೇಳಾ ಪಟ್ಟಿ (ನಮೂನೆ-4) ಉಲ್ಲಂಘಿಸಿ ನಿರಂತರ ಬಸ್ ಕಾರ್ಯಾಚರಣೆ ಮಾಡುತ್ತಿರುವ ಕುರಿತು ಘಟಕದ ಕರಾಸಾ ಹವಿಲ್ದಾರ ಅವರಿಂದ ವರದಿ ಪಡೆದು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮತ್ತು ಈ ನಮ್ಮ ಕಚೇರಿಗೆ ವರದಿ ಸಲ್ಲಿಸಬೇಕು.
2) ಸಕಾರಣ ಇಲ್ಲದೇ ನಮೂನೆ-4ರ ಸಮಯಕ್ಕಿಂತ ಮುಂಚಿತವಾಗಿ ಘಟಕದಿಂದ ವಾಹನ ಹೊರಗೆ ಹೋಗಿರುವುದು (Early Departure) ಮತ್ತು ಮುಂಚಿತವಾಗಿ ಘಟಕದ ಒಳಗೆ ಬಂದಿರುವ (Early Arrival) ಪ್ರಕರಣ ಕಂಡು ಬಂದಲ್ಲಿ, ಇನ್ನು ಮುಂದೆ ಅಂತಹ ವಾಹನಗಳನ್ನು ಘಟಕದ ಭದ್ರತಾ ದ್ವಾರದಿಂದ ನಮೂನೆ-4ರ ಸಮಯಕ್ಕಿಂತ ಮುಂಚಿತವಾಗಿ ಹೊರಗೆ ಬಿಡದಂತೆ (Out) ಹಾಗೂ ಮುಂಚಿತವಾಗಿ ಒಳಗೆ (in) ತೆಗೆದುಕೊಳ್ಳದಂತೆ ಘಟಕದ ಭದ್ರತಾ ಸಿಬ್ಬಂದಿಗಳಿಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೂಲಕ ಲಿಖಿತ ಆದೇಶ ಹೊರಡಿಸಲು ಕ್ರಮವಹಿಸಬೇಕು.
ಅಲ್ಲದೇ ಈ ವಿಷಯವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಸುರಕ್ಷಿತ ಚಾಲನೆ, ಸಾರಿಗೆ ಆದಾಯ ಸಂಗ್ರಹಣೆ ಮತ್ತು ಸಾರ್ವಜನಿಕ ಸೇವೆಗೆ ವ್ಯತ್ಯಯ ಉಂಟಾಗುವ ಗಂಭೀರ ಪ್ರಕರಣಗಳ ಬಗ್ಗೆ ನಿಗಾವಹಿಸಿ ಗಂಭೀರ ಪ್ರಕರಣಗಳನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಅವರಿಗೆ ಲಿಖಿತವಾಗಿ ಗಮನಕ್ಕೆ ತರಲು ಮತ್ತು ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲು ಸೂಚಿಸಿದ್ದಾರೆ.
ಇನ್ನು ನ.29-2025ರಂದು ಹೊರಡಿಸಿರುವ ಈ ಆದೇಶವು ಮುಂದಿನ ನಿರ್ದೇಶನದವರೆಗೆ ಜಾರಿಯಲ್ಲಿರುತ್ತದೆ ಎಂದು ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ತಿಳಿಸಿದ್ದಾರೆ.

Related










