ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ 270 ಬಾರಿ ಮಹಿಳೆಯೊಬ್ಬರು ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಬೈಕ್‌ನಲ್ಲಿ ಸಂಚರಿಸುವ ಮೂಲಕ 1.36 ಲಕ್ಷ ರೂ. ದಂಡಕ್ಕೆ ಒಳಗಾಗಿದ್ದಾರೆ.
ಬೆಂಗಳೂರಿನ ಸುಧಾಮನಗರದಲ್ಲಿ ಸಂಚಾರ ನಿಮಯ ಬ್ರೇಕ್ ಮಾಡಿದ್ದು, ಮಹಿಳೆ ಹೆಲ್ಮೆಟ್ ಹಾಕದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಓಡಾಡಿದ್ದಾರೆ. ಹೀಗೆ ಸುತ್ತಾಡುವಾಗ ಸಂಚಾರಿ
ಪೊಲೀಸ್ ಇಲಾಖೆಯ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ.
ಬೆಂಗಳೂರು ನಗರ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಎಂದು ಎಷ್ಟೇ ಅರಿವು ಮೂಡಿಸುತ್ತಿದ್ದಾರೆ. ಆದರು ಕೂಡ ಕೆಲವು ಜನಮಾತ್ರ ಟ್ರಾಫಿಕ್ ಪೊಲೀಸರ ಮಾತಿಗೆ ಕಿವಿಗೊಡದೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸುತ್ತಾಡುತ್ತಿರುತ್ತಾರೆ.
ಹೀಗೆಯೇ ಬೆಂಗಳೂರಿನ ಈ ಮಹಿಳೆ ಹೆಲ್ಮೆಟ್ ಹಾಕದೆ, ಮೊಬೈಲ್‌ನಲ್ಲಿ ಮಾತನಾಡುತ್ತಾ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ನಗರದಲ್ಲಿ ಬೈಕ್ ಮೇಲೆ ಸುತ್ತಾಡಿದ್ದಾರೆ. ಹೀಗೆ ಸುತ್ತಾಡುವಾಗ ಸಿಗ್ನಲ್ ಜಂಪ್, ಒನ್ ವೇನಲ್ಲೂ ಹೋಗಿರುವುದು ಸೇರಿ ಒಟ್ಟು 270 ಬಾರಿ ಸಂಚಾರಿ ನಿಯಮ ಬ್ರೇಕ್ ಮಾಡಡಿದ್ದಕ್ಕೆ ಆಕೆಗೆ 1,36,000 ರೂಪಾಯಿ ದಂಡ ಬಿದ್ದಿದೆ.
ಇನ್ನು ಆಕೆ ಬೆಂಗಳೂರಿನ ಸುಧಾಮನಗರದಲ್ಲಿ ಸಂಚಾರ ನಿಮಯ ಮೀರಿದ್ದು ಸಾರ್ವಜನಿಕರು ಫೋಟೋ ತೆಗೆದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿ, ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಡಿದ್ದಾರೆ. ದಂಡ ವಸೂಲಿಮಾಡುವಂತೆ ಒತ್ತಾಯಿಸಿದ್ದಾರೆ.