Friday, November 1, 2024
NEWSನಮ್ಮಜಿಲ್ಲೆನಮ್ಮರಾಜ್ಯ

ಬೀಡನಹಳ್ಳಿ ಗ್ರಾಪಂ ಅಧ್ಯಕ್ಷರ ಚುನಾವಣೆ: ಹೈಡ್ರಾಮ- ಜೆಡಿಎಸ್‌ ಬೆಂಬಲಿತರಾದ ಮಂಜುಳಾ ಅಧ್ಯಕ್ಷರಾಗಿ ಆಯ್ಕೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ತಾಲೂಕಿನ ಬೀಡನಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್‌ಬೆಂಬಲಿತ ಗ್ರಾಪಂ ಸದಸ್ಯರಾದ ಮಂಜುಳಾ ಅಧ್ಯಕ್ಷರಾಗಿ ಮತ್ತು ತಿಮ್ಮಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಚುನಾವಣಾ ಆಯೋಗದ ನೂತನ ಮೀಸಲಾತಿ ಅನ್ವಯ ಬೀಡನಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಶುಕ್ರವಾರ ಚುನಾವಣೆ ನಡೆಯಿತು.

ಈ ವೇಳೆ ಒಟ್ಟು 9 ಮಂದಿ ಸದಸ್ಯರಿರುವ ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್‌ಬೆಂಬಲಿತರು 4 ಮತ್ತು ಕಾಂಗ್ರೆಸ್‌ಬೆಂಬಲಿತ ಸದಸ್ಯರು 5 ಮಂದಿ ಇದ್ದಾರೆ. ಆದರೆ ಚುನಾವಣೆಯ ವೇಳೆ ನಡೆದ ಹೈಡ್ರಾಮದಲ್ಲಿ ಜೆಡಿಎಸ್‌ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಂಜುಳಾ ಅವರಿಗೆ ಕಾಂಗ್ರೆಸ್‌ಬೆಂಬಲಿತ ಸದಸ್ಯರೊಬ್ಬರು ಮತ ಚಲಾಯಿಸಿದ್ದರಿಂದ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಬೇಕಿದ್ದ ಕಾಂಗ್ರೆಸ್‌ನೆಲಕಚ್ಚಿದೆ.

ಇದರಿಂದ ಕಾಂಗ್ರೆಸ್‌ಬೆಂಬಲಿತ ಅಭ್ಯರ್ಥಿ ಯಶೋದಮ್ಮ 4 ಮತಗಳನ್ನು ಪಡೆದು ಪರಾಭವಗೊಂಡರೆ 5 ಮತಗಳನ್ನು ಪಡೆದ ಮಂಜುಳಾ ಅವರು ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಇನ್ನು ಎಸ್‌ಟಿ ಮೀಸಲಾತಿಯಡಿ ತಿಮ್ಮಮ್ಮ ಅವಿರೋಧ ಆಯ್ಕೆಯಾಗಿದ್ದಾರೆ.

ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್‌ಬೆಂಬಲಿತ ಅಭ್ಯರ್ಥಿ ಪರಾಭವಗೊಂಡಿದ್ದರಿಂದ ಅಸಮಾಧಾನಗೊಂಡ ಕಾಂಗ್ರೆಸ್‌ಬೆಂಬಲಿತ ಸದಸ್ಯರು ನಮ್ಮ ಅಭ್ಯರ್ಥಿ ಸೋಲಿಗೆ ಕಾರಣ ಯಾರು ಎಂದು ತಮ್ಮತಮ್ಮಲ್ಲೇ ಆಣೆ ಪ್ರಮಾಣ ಮಾಡಿಕೊಂಡಿದ್ದಾರೆ.

ಜೆಡಿಎಸ್‌ಬೆಂಬಲಿತ ಅಭ್ಯರ್ಥಿ ಮಂಜುಳಾ ಆಯ್ಕೆಗೆ ಸಹಕರಿಸಿದವರು ಯಾರು ಎಂದು ನಮಗೆ ಗೊತ್ತಾಗಬೇಕು ಎಂದು ಬೀಡನಹಳ್ಳಿ ಗ್ರಾಮದ ಶ್ರೀನಂದಿ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ತೀರ್ಥ ತೆಗೆದುಕೊಂಡು ಆಣೆ ಮಾಡಿಸಿದ್ದಾರೆ, ಆದರೆ, ಎಲ್ಲರೂ ನಾವು ಕಾಂಗ್ರೆಸ್‌ಬೆಂಬಲಿತೆ ಯಶೋದಮ್ಮ ಅವರಿಗೆ ಮತ ಚಲಾಯಿಸಿದ್ದೇವೆ ಎಂದು ಆಣೆ ಮಾಡಿದ್ದಾರೆ.

ಆದರೆ, ದೇವಸ್ಥಾನದಲ್ಲಿ ಆಣೆ ಮಾಡಿದಷ್ಟಕ್ಕೇ ಸುಮ್ಮನಾಗದ ಕಾಂಗ್ರೆಸ್‌ಸದಸ್ಯರು ಹಿಟ್ಟನಹಳ್ಳಿ ಕೊಪ್ಪಲು ಸಮೀಪವಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಆಣೆ, ಉಪ್ಪಿನ ಮೇಲೆಯೂ ಪ್ರಮಾಣ ಮಾಡಿಸಿದ್ದಾರೆ. ಆದರೆ, ಅಲ್ಲಿಯೂ ಕೂಡ ನಾವು ಯಶೋದಮ್ಮ ಅವರಿಗೆ ಮತ ಹಾಕಿದ್ದೇವೆ ಎಂದು ಆಣೆ ಮಾಡಿದ್ದಾರೆ.

ಹೀಗಾಗಿ ಜೆಡಿಎಸ್‌ಬೆಂಬಲಿತ ಅಭ್ಯರ್ಥಿಗೆ ಯಾರು ಮತ ಚಲಾಯಿಸಿದರು ಎಂಬುವುದು ಇನ್ನು ಸ್ಪಷ್ಟವಾಗಿಲ್ಲ. ಆದರೆ, ಕೆಲವರ ಮೇಲೆ ಕಾಂಗ್ರೆಸ್‌ಮುಖಂಡರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಚುನಾವಣೆ ಅಧಿಕಾರಿಯೊಂದಿಗೂ ಮಾತಿನ ಚಕಮಕಿ ನಡೆಯಿತು. ಮತ್ತೆ ಚುನಾವಣೆ ಮಾಡಿ ಎಂದು ಕಾಂಗ್ರೆಸ್‌ಸದಸ್ಯರು ಪಟ್ಟು ಹಿಡಿದಿದ್ದರು. ಆದರೆ ಒಮ್ಮೆ ಚುನಾವಣೆ ನಡೆದಿದ್ದು, ಮತ್ತೊಮ್ಮೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಾರೆ, ಕಾಂಗ್ರೆಸ್‌ಸ್ಪಷ್ಟ ಬಹುಮತವಿದ್ದರು, ರಾಜಕೀಯ ದೊಂಬರಾಟದಿಂದ ಜೆಡಿಎಸ್‌ಬೆಂಬಲಿತ ಸದಸ್ಯೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಎಸ್‌ಟಿ ಮೀಸಲಾತಿಯಡಿ ಬೇರಾರು ಇಲ್ಲದ ಕಾರಣ ಜೆಡಿಎಸ್‌ಬೆಂಬಲಿತ ಸದಸ್ಯೆ ತಿಮ್ಮಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

Leave a Reply

error: Content is protected !!
LATEST
KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ: ಈಗಲೇ ಅರ್ಜಿ ಹಾಕಿ ಬಿಬಿಎಂಪಿ: ಅನಧಿಕೃತ ಹೆಚ್ಚುವರಿ ಮಹಡಿಗಳು, ಪಾದಚಾರಿ ಮಾರ್ಗ ಒತ್ತುವರಿ ತೆರವು KSRTC ಸಮಸ್ತ 4ನಿಗಮಗಳ ಅಧಿಕಾರಿಗಳು ನೌಕರರು ಒಗ್ಗಟ್ಟಾಗಿ: ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವತ್ತ ಚಿಂತಿಸಿದರೆ ಅಸಾ...