NEWSನಮ್ಮಜಿಲ್ಲೆ

ಬೀದರ್‌: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಹಕಾರ ಸಂಘದ ವಾರ್ಷಿಕೋತ್ಸವ

ವಿಜಯಪಥ ಸಮಗ್ರ ಸುದ್ದಿ

ಬೀದರ್‌: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಹಕಾರ ಸಂಘವು ತನ್ನ 30ನೇ ಸಾಮಾನ್ಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಂಗಮಂದಿರದಲ್ಲಿ ಭವ್ಯವಾಗಿ ಆಚರಿಸಿತು. ಸಂಸ್ಥೆಯ ದೀರ್ಘಕಾಲದ ಸಾಧನೆ, ಸದಸ್ಯರ ಆರ್ಥಿಕ ಪ್ರಗತಿ ಹಾಗೂ ಸಹಕಾರಿ ಚಟುವಟಿಕೆಗಳ ಬಲವರ್ಧನೆ ಕುರಿತು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಸ್ತಾಪಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಭಾಗೀಯ ನಿಯಂತ್ರಣ ಅಧಿಕಾರಿ ರಾಜೇಂದ್ರ ಜಾಧವ, ಸಹಕಾರ ಚಳವಳಿಯ ಮಹತ್ವವನ್ನು ಸ್ಮರಿಸಿದರು. ನೌಕರರ ಸಹಕಾರಿ ಸಂಘಗಳು ಕೇವಲ ಆರ್ಥಿಕ ನೆರವು ನೀಡುವುದಲ್ಲದೆ, ನೌಕರರ ಕಲ್ಯಾಣ, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ಶ್ರೇಯೋಭಿವೃದ್ಧಿಗೆ ದಾರಿ ತೋರಿಸುತ್ತವೆ ಎಂದು ಹೇಳಿದರು.

ಅಧ್ಯಕ್ಷರು ತಮ್ಮ ಮಾತಿನಲ್ಲಿ, ಕಳೆದ ಮೂರು ದಶಕಗಳಲ್ಲಿ ಸಂಘದ ಬೆಳವಣಿಗೆ, ಬ್ಯಾಂಕ್ ಚಟುವಟಿಕೆಗಳು ಹಾಗೂ ಸದಸ್ಯರ ನಂಬಿಕೆಯನ್ನು ಗಳಿಸಿರುವ ಸಾಧನೆಯನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ನೌಕರರ ಮಕ್ಕಳಿಗೆ ಹತ್ತನೇ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ಅವರಿಗೆ 4ಸಾವಿರ ರೂ. ನಗದು ಪ್ರೋತ್ಸಾಹಧನ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷ ಶಾಂತು ದೇಸೋಳೆ, ವಿಭಾಗೀಯ ಸಂಚಾರ ಅಧಿಕಾರಿಗಳು ಐ.ಎಂ.ಬಿರಾದಾರ, ಬಸವಕಲ್ಯಾಣ ಘಟಕ ವ್ಯವಸ್ಥಾಪಕ ನಾಗೇಂದ್ರ, ಔರಾದ್ ಘಟಕ ವ್ಯವಸ್ಥಾಪಕ ರಾಜಶೇಖರ ತಳಘಟಕರ, ಬೀದರ 2 ಪ್ರಭಾರಿ ಘಟಕ ವ್ಯವಸ್ಥಾಪಕ ಶೇರ್ ಅಲಿ, ಸಂಘದ ನಿರ್ದೇಶಕರಾದ ಅಶೋಕ ರೆಡ್ಡಿ, ಶಬ್ಬೀರ ಸಾಬ್, ಪ್ರಿಯಾಂಕಾ ಪಾಟೀಲ, ಉಜಾಲಾ ಭಂಡಾರಿ, ಅವಿನಾಶ್ ಜೋಶಿ, ಪರಮೇಶ್ವರ, ಸಂಜು ಚಿದ್ರೆ, ಓಂಕಾರ್ ಸ್ವಾಮಿ, ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಚಟನಳ್ಳಿ ಇದ್ದರು ಸಹಕಾರ ಸಂಘದ ಸಿಬ್ಬಂದಿ, ಹಲವಾರು ನೌಕರ ಸದಸ್ಯರು ಭಾಗವಹಿಸಿದ್ದರು.

ಮಕ್ಕಳಿಗೆ ಗೌರವ, ನಾಡಗೀತೆ ಇತರೆ ಅನುಭವ ಹಂಚಿಕೆಗಳು ವಾರ್ಷಿಕೋತ್ಸವಕ್ಕೆ ವಿಶೇಷ ಕಳೆ ಸೇರಿಸಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಬಸವರಾಜ ಚಾಮರೆಡ್ಡಿ ಸ್ವಾಗತಿಸಿದರೆ, ಜಗನ್ನಾಥ ಶಿವಯೋಗಿ ನಿರ್ವಹಿಸಿದರು. ಸೂರ್ಯಕಾಂತ ಟೈಗರ್ ಪ್ರಸ್ತವಿಕ ಮಾತನಾಡಿದ್ದು, ಪರಮೇಶ್ವರ ವಾಘಮಾರೆ ವಂದಿಸಿದರು.

 

Advertisement
ವಿಜಯಪಥ - vijayapatha.in
Megha
the authorMegha

Leave a Reply

error: Content is protected !!