
ವನಿತೆಯರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಆ ಟೀಮ್ಗೆ ದೊಡ್ಡ ಮಟ್ಟದಲ್ಲೇ ಹಣದ ಹೊಳೆ ಹರಿಯಲಿದೆ. ಕಾರಣ ಪುರುಷ ಆಟಗಾರರಿಗೆ ಕೊಟ್ಟಂತೆಯೇ ಮಹಿಳಾ ಆಟಗಾರರಿಗೂ ಬಹುಮಾನ ಸಿಗಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಭಾರತದ ವನಿತೆಯರ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದೆ. ಇಲ್ಲಿ ಪುರುಷ ಆಟಗಾರರಿಗೆ ಕೊಟ್ಟಂತೆ ಮಹಿಳಾ ಆಟಗಾರರಿಗೂ ಬಹುಮಾನವನ್ನು ಸಮಾನವಾಗಿ ಕೊಡಲಾಗುವುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಹರ್ಮನ್ಪ್ರೀತ್ ಪಡೆ ವಿಶ್ವಕಪ್ ಗೆದ್ದರೇ ಎಷ್ಟು ಕೋಟಿ ರೂ.ಸಿಗಲಿದೆ ಗೊತ್ತೆ?
ಈಗಾಗಲೇ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎರಡು ಬಾರಿ ಕೈಸುಟ್ಟುಕೊಂಡಿರುವ ಟೀಮ್ ಇಂಡಿಯಾ ಮೂರನೇ ಬಾರಿಗೆ ಬಹುದೊಡ್ಡ ನಿರೀಕ್ಷೆ ಇಟ್ಟುಕೊಂಡು ಅಖಾಡಕ್ಕೆ ಇಳಿಯುತ್ತಿದೆ. ಇನ್ನು ಸೌತ್ ಆಫ್ರಿಕಾ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಟೀಮ್ ಆಗಿದೆ. ಈ ಮೊದಲೇ ವಿಜಯ ಸಾಧಿಸಿದ ತಂಡಕ್ಕೆ ಪ್ರಶಸ್ತಿ ಜತೆಗೆ ಭಾರೀ ಮೊತ್ತದ ಹಣ ನೀಡಲಾಗುವುದು ಎಂದು ಐಸಿಸಿ (International Cricket Council) ಹೇಳಿದೆ.
2025ರ ಸೆಪ್ಟೆಂಬರ್ 30 ರಂದು ಆರಂಭವಾದ ಈ ವಿಶ್ವಕಪ್ ಪಂದ್ಯಾವಳಿಗೆ ಈ ಹಿಂದೆ ಎಂದೂ ಘೋಷಿಸಿದಷ್ಟು ದಾಖಲೆ ಮಟ್ಟದಲ್ಲಿ ಹಣವನ್ನು ಐಸಿಸಿ ಘೋಷಿಸಿದೆ. ವಿಜೇತ ತಂಡವೂ ಯುಎಸ್ಡಿ 4.48 ಮಿಲಿಯನ್ ಅಂದರೆ 40 ಕೋಟಿ ರೂ.ಗಳನ್ನು ಪಡೆಯಲಿದೆ. ಈ ಬಾರಿಯ ಒಟ್ಟು ಟೂರ್ನಿಯೂ ಬಹುಮಾನ ನಿಧಿ ಯುಎಸ್ಡಿ $13.88 ಮಿಲಿಯನ್ ಅಂದರೆ 123 ಕೋಟಿ ರೂಪಾಯಿ ಆಗಿದೆ.
2022ರ ವಿಶ್ವಕಪ್ಗಿಂತ ಶೇ.297 ರಷ್ಟು ಈ ಸಲ ಹಣ ಏರಿಕೆ ಮಾಡಲಾಗಿದೆ. ಅಲ್ಲದೇ ಪುರುಷರ ವಿಶ್ವಕಪ್ ಪಂದ್ಯಾವಳಿಗಿಂತ ಶೇ.4 ಮಿಲಿಯನ್ ಅಷ್ಟು ಹೆಚ್ಚಳವಾಗಿದೆ. ಇನ್ನು ಗೆದ್ದವರಿಗೆ ಅಷ್ಟೇ ಖುಷಿ ಅಲ್ಲ, ರನ್ನರ್ ಅಪ್ ಬರುವ ತಂಡವೂ ದೊಡ್ಡ ಮೊತ್ತದಲ್ಲೇ ಹಣ ಪಡೆಯಲಿದೆ. ಅಂದರೆ ಗೆಲುವು ಪಡೆದ ತಂಡಕ್ಕಿಂತ ಅರ್ಧದಷ್ಟು ಹಣ ಪಡೆಯಲಿದೆ. 2.24 ಮಿಲಿಯನ್ ಅಂದರೆ ಅಂದಾಜು 20 ಕೋಟಿ ರೂ. ರನ್ನರ್ ಅಪ್ ಟೀಮ್ ಪಾಲಾಗಲಿದೆ.
Related









