ಬಿಹಾರ: ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಇಂದು ನಿರ್ಣಾಯಕ ದಿನವಾಗಿದೆ. ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.

243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ 46 ಮತಗಟ್ಟೆಗಳಲ್ಲಿ ಪ್ರಾರಂಭವಾಗಲಿದೆ. ನಿತೀಶ್ ಕುಮಾರ್ ಒಂದೆಡೆ ವಿಜಯವನ್ನು ಘೋಷಿಸಿದ್ದರೆ, ಮತ್ತೊಂದೆಡೆ ತೇಜಸ್ವಿ ಯಾದವ್ ಕೂಡ ನವೆಂಬರ್ 18 ರಂದು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿಕೊಂಡಿದ್ದಾರೆ.
ಇನ್ನು ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎಗೆ ಮಹಿಳೆಯರು ಮತ್ತು ಒಬಿಸಿಗಳಿಂದ ಹೆಚ್ಚು ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬುದನ್ನು ಸೂಚಿಸುತ್ತವೆ. ಈ ನಡುವೆ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ, ಆರಂಭಿಕ ಟ್ರೆಂಡ್ ಬಹುಮತದ ಗಡಿ ದಾಟಿದೆ ಎನ್ಡಿಎ.
ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ನವೀನ್ ಯಾದವ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ನಡುವೆ 120 ಕ್ಷೇತ್ರಗಳಲ್ಲಿ ಎನ್ಡಿಎ ಮುನ್ನಡೆ ಸಾಧಿಸಿದ್ದು, ಚುನಾವಣೆಯ ಫಲಿತಾಂಶಕ್ಕೆ ಕ್ಷಣ ಗಣನೆ ಶುರುವಾಗಿದೆ. ಇನ್ನು ಮಹಾಘಟಬಂಧನ್ 100 ಕ್ಷೇತ್ರಗಳಲ್ಲಿ ಮುಂದಿದೆ.
ಜೆಡಿಯುನ ಅಭಿಷೇಕ್ ಆನಂದ್ ಚೆರಿಯಾ ಬಾರಿಯಾರ್‌ಪುರದಿಂದ ಮುನ್ನಡೆ, ಬಚ್ವಾರಾದಲ್ಲಿ ಬಿಜೆಪಿಯ ಸುರೇಂದ್ರ ಮೆಹ್ತಾ ಮುನ್ನಡೆಯಲ್ಲಿದ್ದಾರೆ ತೇಗ್ರಾ ಕ್ಷೇತ್ರದಲ್ಲಿ ಬಿಜೆಪಿಯ ರಜನೀಶ್ ಮುನ್ನಡೆ, ಜೆಡಿಯುನ ರಾಜ್‌ಕುಮಾರ್ ಸಿಂಗ್ ಮತಿಹಾನಿಯಿಂದ ಮುನ್ನಡೆ, ಎಲ್‌ಜೆಪಿಯ ಸುರೇಂದ್ರ ವಿವೇಕ್ ಸಾಹೇಬ್‌ಪುರ ಕಮಾಲ್‌ನಿಂದ ಮುನ್ನಡೆ.
ಎಲ್‌ಜೆಪಿಯ ಸಂಜಯ್ ಪಾಸ್ವಾನ್ ಬಕ್ರಿಯಿಂದ ಮುನ್ನಡೆ, ಮಹುವಾ ಕ್ಷೇತ್ರದಲ್ಲಿ ಜೆಜೆಡಿ ಅಭ್ಯರ್ಥಿ ತೇಜ್ ಪ್ರತಾಪ್ ಯಾದವ್ ಮುನ್ನಡೆ, ಲಖಿಸರಾಯ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಮುನ್ನಡೆ ಛಾಪ್ರಾದಿಂದ ಛೋಟಿ ಕುಮಾರಿ ಮುಂದಿದ್ದರೆ, ಖೇಸರಿ ಲಾಲ್ ಹಿಂದೆ ಇದ್ದಾರೆ.
ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನಿಕಟ ಪೈಪೋಟಿ: ಎನ್ಡಿಎ ಮತ್ತು ಮಹಾಮೈತ್ರಿಕೂಟದ ನಡುವಿನ ಅಂತರ ಹೆಚ್ಚಾಗಿದೆ. ಎನ್ಡಿಎ 70 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಮಹಾಮೈತ್ರಿಕೂಟ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಆದಾಗ್ಯೂ, ಬಿಜೆಪಿ ಮತ್ತು ಆರ್‌ಜೆಡಿ ಪರಸ್ಪರ ಪೈಪೋಟಿ ನಡೆಸುತ್ತಿದ್ದು, ತಲಾ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಅಂಚೆ ಮತ ಎಣಿಕೆಯಲ್ಲಿ ಎನ್ಡಿಎ ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಜನ್ ಸುರಾಜ್ ಪಕ್ಷ 2 ಕ್ಷೇತ್ರಗಳಲ್ಲಿ ಮುಂದಿದೆ.
ಬಿಹಾರದ 243 ವಿಧಾನಸಭಾ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಿತು. ನವೆಂಬರ್ 6 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 18 ಜಿಲ್ಲೆಗಳ 121 ಸ್ಥಾನಗಳು ಮತ್ತು ನವೆಂಬರ್ 11 ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ 20 ಜಿಲ್ಲೆಗಳ 122 ಸ್ಥಾನಗಳು ಸೇರಿವೆ. ರಾಜ್ಯದಲ್ಲಿ ಶೇ. 67.13 ರಷ್ಟು ಮತದಾನ ದಾಖಲಾಗಿದ್ದು, ಇದು 1951 ರ ನಂತರದ ಅತ್ಯಧಿಕ ಮತದಾನವಾಗಿದೆ. ಮಹಿಳಾ ಮತದಾರರ ಸಂಖ್ಯೆ ಶೇ. 71.6 ರಷ್ಟಿದ್ದು, ಇದು ರಾಜ್ಯದಲ್ಲಿ ಇದುವರೆಗಿನ ಅತ್ಯಧಿಕ ಮತದಾನವಾಗಿದೆ.
ಸಚಿವ ಪ್ರೇಮ್ ಕುಮಾರ್ ಹೇಳಿದ್ದೇನು?: ಬಿಹಾರ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗುವ ಮೊದಲು, ರಾಜ್ಯ ಸಚಿವ ಪ್ರೇಮ್ ಕುಮಾರ್ ಅವರು ಎನ್ಡಿಎ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಬಾರಿ ಬಿಹಾರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬಂದಿದ್ದರು.ಎನ್ಡಿಎ ಎಲ್ಲಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಲಿದೆ ಮತ್ತು ನಿತೀಶ್ ಕುಮಾರ್ ಮತ್ತೊಮ್ಮೆ ಬಿಹಾರದಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದರು.
ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಜನರು ನಿರ್ಧರಿಸುತ್ತಾರೆ. ಕುಟುಂಬ ಆಧಾರಿತ ಜನರು ರಾಜಕೀಯವನ್ನು ತಮ್ಮ ಆಸ್ತಿಯೆಂದು ಪರಿಗಣಿಸುತ್ತಾರೆ. ಆದರೆ ಜನರು ಇಂದು ನೀಡುವ ತೀರ್ಪು ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.
ಬಿಹಾರದಲ್ಲಿ ಮತ ಎಣಿಕೆ ಪ್ರಾರಂಭವಾಗುವ ಮೊದಲು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬೆಳಗ್ಗೆ ಒಂದು ಪೋಸ್ಟರ್ ಬಿಡುಗಡೆ ಮಾಡಿ, ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ. ಪೋಸ್ಟರ್‌ನಲ್ಲಿ ನವೆಂಬರ್ 14, ಬಿಹಾರದಲ್ಲಿ ತೇಜಸ್ವಿ ಯಾದವ್ ಸರ್ಕಾರ ಎಂಬ ಟ್ಯಾಗ್‌ಲೈನ್ ಇತ್ತು.
Related










