NEWSಬೆಂಗಳೂರುರಾಜಕೀಯ

ಬೆಂ.ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ-ಜೆಡಿಎಸ್​ ಮೈತ್ರಿಕೂಟ ನಿರ್ಧಾರ ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಈನಡುವೆ ಬಿಜೆಪಿ-ಜೆಡಿಎಸ್​ ಮಿತ್ರಕೂಟ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿಹಾಕುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದು, ಅದರ ಮೊದಲ ಸ್ಟೆಪ್‌ ಎನ್ನುವಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ತೆರೆಮರೆಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಹಾಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಎದುರು ಅವರಿಗಿಂತ ಎಲ್ಲ ವಿಧದಲ್ಲೂ ಸಮರ್ಥರನ್ನು ಕಣಕಿಳಿಸಿದರೆ ಮೈತ್ರಿಕೂಟ ಗೆಲುವು ಸಾಧಿಸಬಹುದು ಎಂಬ ವಿಶ್ವಾಸದೊಂದಿಗೆ ಲೆಕ್ಕಾಚಾರ ಹಾಕಿಕೊಂಡು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಅಳಿಯನನ್ನು ಕಣಕ್ಕಿಳಿಸೋಕೆ ಮುಂದಾಗಿದೆ ಎನ್ನಲಾಗಿದೆ.

ಹೌದು! ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯತ್ತಮ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿರುವ ಹೃದಯ ತಜ್ಞರಾದ ಡಾ.ಸಿ.ಎನ್.ಮಂಜುನಾಥ್ ಅವರನ್ನು ಡಿ.ಕೆ.ಸುರೇಶ್ ಎದುರು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರಲು ಬಿಜೆಪಿ ಹಾಗೂ ಜೆಡಿಎಸ್​ ಪ್ಲಾನ್ ಮಾಡಿವೆ. ಅದರಲ್ಲೂ ಜೆಡಿಎಸ್ ಬದಲಾಗಿ ಬಿಜೆಪಿಯಿಂದಲೇ ಕಣಕ್ಕಿಳಿಸಲು ನಿರ್ಧಾರವಾಗಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಏನಿದು ಲೆಕ್ಕಾಚಾರ?: ಒಕ್ಕಲಿಗ ಸಮುದಾಯದ ಡಾ.ಸಿ.ಎನ್.ಮಂಜುನಾಥ್ ದೇವೇಗೌಡರ ಅಳಿಯರಾಗಿದ್ದು, ಇನ್ನು ವೈದ್ಯಕೀಯ ಲೋಕದಲ್ಲಿ ಒಳ್ಳೇ ಹೆಸರು ಮಾಡಿದ್ದಾರೆ, ಅಲ್ಲದೆ ಈ ಮೂಲಕ ಜನರಿಗೂ ಹೆಚ್ಚು ಹೆಚ್ಚು ಚಿರಪರಿಚಿತರಾಗಿದ್ದಾರೆ.

ಇನ್ನು ಈ ಬಾರಿಯೂ ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ. ಸುರೇಶ್ ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಸೋಲಿಸಲು ಒಕ್ಕಲಿಗ ಅಭ್ಯರ್ಥಿಯೇ ಕಣಕ್ಕಿಳಿದರಷ್ಟೇ ಹೆಚ್ಚು ಅವಕಾಶ ಸಿಗಲಿದೆ.

ಹೀಗಾಗಿ ಸಯ ಡಾ.ಸಿ.ಎನ್. ಮಂಜುನಾಥ್ ಅವರು ಈವರಗೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿಲ್ಲ. ಆದರೆ ಇತ್ತೀಚೆಗಷ್ಟೇ ತಮ್ಮ ವೈದ್ಯ ವೃತ್ತಿಯಿಂದ ಅಂದರೆ ಸರ್ಕಾರಿ ವೈದ್ಯ ವೃತ್ತಿಯಿಂದ ಬಿಡುಗಡೆಗೊಂಡಿದ್ದು, ಅವರನ್ನೇ ಕಣಕ್ಕಿಳಿಸಿದರೆ ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಮೈತ್ರಿ ಕೂಟ ತೊಡಗಿದೆ.

ಎಚ್.ಡಿ. ದೇವೇಗೌಡ ಅವರಿಗೆ ಹಲವು ಹುದ್ದೆಗಳ ನಿರ್ವಹಿಸಿದ ಅನುಭವವಿದೆ. ಹೀಗಾಗಿ ಅವರ ಅಳಿಯನಾಗಿ ರಾಜಕೀಯಕ್ಕೆ ಎಂಟ್ರಿ ಕೊಡಲು ಡಾ.ಮಂಜುನಾಥ್‌ ಅವರು ಎಚ್ಚರಿಕೆ ಹೆಜ್ಜೆ ಕೂಡ ಇಡಬೇಕು. ಇನ್ನು ಜೆಡಿಎಸ್​ನಿಂದಲೇ ಸ್ಪರ್ಧಿಸಿದರೆ ಕುಟುಂಬ ರಾಜಕಾರಣದ ಹಣೆಪಟ್ಟಿ ಅಂಟುತ್ತೆ. ಇದರಲ್ಲಿ ಬೇರೆ ಮಾತಿಲ್ಲ.

ಈ ಎಲ್ಲವನ್ನು ಲೆಕ್ಕಹಾಕಿರುವ ಮೈತ್ರಿ ಬಿಜೆಪಿಯಿಂದ ಅವರನ್ನು ಕಣಕ್ಕಿಳಿಸಿದ್ದೇ ಆದರೆ ಕುಟುಂಬ ರಾಜಕಾರಣ ಹಣೆಪಟ್ಟಿಯಿಂದ ಹೊರಗುಳಿಯಬಹುದು. ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಕ್ಕೂ ಮತಗಳಿವೆ. ಡಾ.ಸಿ.ಎನ್. ಮಂಜುನಾಥ್ ಅಭ್ಯರ್ಥಿ ಆದಲ್ಲಿ ಆ ಮತಗಳನ್ನು ಸೆಳೆಯುವುದು ಕಷ್ಟವೇನು ಆಗುವುದಿಲ್ಲ.

ಈಗಾಗಲೇ ಕಳ 10 ವರ್ಷಗಳಿಂ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಅಯೋಧ್ಯೆ ರಾಮ ಮಂದಿರ ಈಗ ಇನ್ನಷ್ಟರು ಬೂಸ್ಟರ್ ನೀಡಿ. ಜತೆಗೆ ದೇವೇಗೌಡ ಅವರ ಆಶೀರ್ವಾದ, ಎಚ್.​ಡಿ.ಕುಮಾರಸ್ವಾಮಿ ಬೆಂಬಲ, ಸಿ.ಪಿ. ಯೋಗೇಶ್ವರ್ ಅವ​ರ ಸಹಕಾರದಿಂದ ಈ ಕೇತ್ರವನ್ನು ತಮ್ಮ ವಶಕ್ಕೆ ಪಡೆಯುವುದಕ್ಕೆ ಕಷ್ಟವೇನು ಆಗುವುದಿಲ್ಲ ಎಂಬುವುದು ಮೈತ್ರಿಯ ಲೆಕ್ಕವಾಗಿದೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ