CRIMENEWSದೇಶ-ವಿದೇಶ

ಕಾರು ನಿಲ್ಲಿಸಿ ಹೆದ್ದಾರಿಯಲ್ಲೇ ಮಹಿಳೆ ಜತೆ ಬಿಜೆಪಿ ನಾಯಕನ ರಾಸಲೀಲೆ- ವಿಡಿಯೋ

ವಿಜಯಪಥ ಸಮಗ್ರ ಸುದ್ದಿ

ಮಂಡ್ಸೌರ್‌: ರಾಷ್ಟೀಯ ಹೆದ್ದಾರಿಯಲ್ಲೇ ಕಾರು ನಿಲ್ಲಿಸಿ ಬಿಜೆಪಿ ನಾಯಕನೊಬ್ಬ ಮಹಿಳೆಯೊಂದಿಗೆ ಅನಪೇಕ್ಷಿತ ಕ್ರಿಯೆ (sex) ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ಮಂಡ್ಸೌರ್‌ನ ಜಿಲ್ಲಾ ಪಂಚಾಯಿತಿ ಸದಸ್ಯ, ಬಿಜೆಪಿ ನಾಯಕ ಮನೋಹರ್ ಲಾಲ್ ಧಾಕರ್ ಎಂಬುವರೆ ನಡು ರಸ್ತೆಯಲ್ಲೇ ಈ ಕೃತ್ಯವೆಸಗಿದವನಾಗಿದ್ದಾನೆ.

ಮಹಿಳೆಯೊಂದಿಗೆ ರಸ್ತೆಯಲ್ಲೇ ರಾಸಲೀಲೆ ನಡೆಸುತ್ತಿರುವ ಸುಮಾರು ಮೂರೂವರೆ ನಿಮಿಷಗಳ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

ಮಂಡ್ಸೌರ್ ಜಿಲ್ಲೆಯ ಬನಿ ಗ್ರಾಮದ ನಿವಾಸಿ ಜಿಲ್ಲಾ ಪಂಚಾಯಿತಿ ಸದಸ್ಯ ಧಾಕರ್, ಬಿಜೆಪಿಯ ಸಕ್ರಿಯ ಸದಸ್ಯ ಎಂದು ವರದಿಯಿಂದ ತಿಳಿದು ಬಂದಿದೆ. ಇನ್ನು ಆ ವಿಡಿಯೋ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಾರಿನಿಂದ ಇಳಿದು ಮಹಿಳೆಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ವಿಡಿಯೋ ವೈರಲಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಮಂಡ್ಸೌರ್‌ನ ಬಿಜೆಪಿ ಜಿಲ್ಲಾಧ್ಯಕ್ಷ ರಾಜೇಶ್ ದೀಕ್ಷಿತ್ ಧಾಕರ್‌ ಅವರು ಬಿಜೆಪಿ ಪದಾಧಿಕಾರಿಯಲ್ಲ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ತನಿಖೆ ನಡೆಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ರಾಜ್ಯ ಬಿಜೆಪಿ ವಕ್ತಾರ ಯಶ್ಪಾಲ್ ಸಿಂಗ್ ಸಿಸೋಡಿಯಾ ಅವರು ಪಕ್ಷವು ಆರೋಪವನ್ನು ಗಣನೆಗೆ ತೆಗೆದುಕೊಂಡಿದ್ದು, ಈ ಬಗ್ಗೆ ಪರಿಶೀಲಿಸಿ ಕಟ್ಟುನಿಟ್ಟಿನ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Advertisement

ಅಲ್ಲದೇ ಧಾಕರ್‌ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯರಲ್ಲ ಎಂದು ಬಿಜೆಪಿಯ ಮಧ್ಯಪ್ರದೇಶದ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ ಕೂಡ ಸ್ಪಷ್ಟಪಡಿಸಿದ್ದಾರೆ. ಅದು ಯಾರೆ ಇರಲಿ ಈರೀತಿ ಬೀದಿ ನಾಯಿಗಳಂತೆ ವರ್ತಿಸುವುದು ಮನುಷ್ಯ ಜೀವಿಗೆ ತಕ್ಕುದಲ್ಲ ಎಂದು ಜನರು ಛೀಮಾರಿ ಹಾಕುತ್ತಿದ್ದಾರೆ.

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!