NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ 38 ತಿಂಗಳ ಹಿಂಬಾಕಿ, 2024ರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಎಸ್‌ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೀದರ್: ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ 38ತಿಂಗಳ ವೇತನ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳ ಸೇರಿದಂತೆ ವಿವಿಧ ಇಲಾಖೆಗಳ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೀದರ್ ವಿಭಾಗದ ಭಾರತೀಯ ಮಜ್ದೂರ್ ಸಂಘ ಪ್ರತಿಭಟನೆ ನಡೆಸಿತು.

ಬುಧವಾರ ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದ ಬಿಎಂಎಸ್‌ ಪದಾಧಿಕಾರಿಗಳು ಬಳಿಕ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸುವ ಮೂಲಕ ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ವೇಳೆ ಮಾತನಾಡಿದ ಬಿಎಂಎಸ್‌ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರೆಪ್ಪನೊರ್‌, ಕಾರ್ಮಿಕರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಭಾರತೀಯ ಮಜೂರ್ ಸಂಘದಿಂದ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳಿಗೆ ಜಿಲ್ಲಾಡಳಿತದ ಮೂಲಕ ಮನವಿ ಪತ್ರ ಸಲ್ಲಿಸಲಾಗಿದೆ.

ಕಾರ್ಮಿಕರ ಸಮಸ್ಯೆಗಳ ಕುರಿತು ಅನೇಕ ಬಾರಿ ಮನವಿ ಹಾಗೂ ಪ್ರತಿಭಟನೆ ಮಾಡಿದರೂ ಕೂಡ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರನ್ನು ಹಲವು ದಶಕಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರೂ ಕಾಯಂಗೊಳಿಸಿಲ್ಲ, ಜತೆಗೆ ಅವರ ಗೌರವಧನ ಹೆಚ್ಚಿಸಿಲ್ಲ ಹಾಗೂ ಹೆಚ್ಚುವರಿ ಕೆಲಸಗಳನ್ನು ವಹಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಇನ್ನು ಇಪಿಎಸ್‌-95 ಪಿಂಚಣಿಯನ್ನು ಒಂದು ಸಾವಿರ ರೂ.ಗಳಿಂದ 7500 ರೂ.ಗೆ ಹೆಚ್ಚಿಸಬೇಕು. ಬೀದರ್‌ ಜಿಲ್ಲೆಯಲ್ಲಿ ವಿಶೇಷ ಆರ್ಥಿಕ ವಲಯ (SEZ) ಸ್ಥಾಪನೆ ಮಾಡಬೇಕು. ಇನ್ನು ಮುಚ್ಚಲ್ಪಟ್ಟ ಹಾಗೂ ಬಂದ್ ಆಗಿರುವ ಕೈಗಾರಿಕೆಗಳ ಪುನಶ್ಚೇತನಗೊಳಿಸಬೇಕು.

ಮಹಿಳಾ ಉದ್ಯಮಿದಾರರ ಪಾರ್ಕ್ ನಿವೇಶಗಳನ್ನು ಪಾರದರ್ಶಕವಾಗಿ ಅರ್ಹರಿಗೆ ಹಂಚಿಕೆ. ಸ್ಥಳೀಯ ಯುವಕರಿಗೆ ಕೈಗಾರಿಕೆಗಳಲ್ಲಿ ಆದ್ಯತೆಯ ಉದ್ಯೋಗ ಅವಕಾಶ. ಇಪಿಎಫ್ ಕನಿಷ್ಠ ಪಿಂಚಣಿಯನ್ನು ರೂ.1000 ರಿಂದ ರೂ.7500ಕ್ಕೆ ಹೆಚ್ಚಿಸುವುದು. ಹೈಯರ್ ಪಿಂಚನ್ ಸೌಲಭ್ಯ ಜಾರಿ. ಇಎಸ್ಐ ಆಸ್ಪತ್ರೆಗಳ ಮೂಲಸೌಕರ್ಯ ಬಲಪಡಿಸಬೇಕು.

ಇನ್ನು ಗುತ್ತಿಗೆ ಕಾರ್ಮಿಕರಿಗೆ ಸಮಾನ ವೇತನ ಹಾಗೂ ಶಾಶ್ವತೀಕರಣ. ಸರ್ಕಾರಿ ಖಾಲಿ ಹುದ್ದೆಗಳ ತಕ್ಷಣ ಭರ್ತಿ. 01.04.2024 ನಂತರ ನಿವೃತ್ತರಾದ ಕಾರ್ಮಿಕರಿಗೂ ಪರಿಷ್ಕೃತ ಸೌಲಭ್ಯ ಅನ್ವಯ. NTC, HEC, ITI, HMT ಮುಂತಾದ ಕಾರ್ಖಾನೆಗಳ ಪುನಶ್ಚೇತನ. ಕನಿಷ್ಠ ವೇತನ ಪರಿಷ್ಕರಣೆ ಮತ್ತು ಜೀವನೋಪಾಯ ಭತ್ಯೆ ಹೆಚ್ಚಿಸಬೇಕು.

ಪ್ರಮುಖವಾಘಿ KSRTC ನೌಕರರಿಗೆ 38 ತಿಂಗಳ ಹಿಂಬಾಕಿ ವೇತನವನ್ನು ತಕ್ಷಣ ನೀಡುವುದು. 01-01-2024 ರಿಂದ KSRTC ನೌಕರರ ವೇತನ ಪರಿಷ್ಕರಣೆ ಜಾರಿಗೊಳಿಸುವುದು. ಅಂಗನವಾಡಿ, ಆಶಾ ಹಾಗೂ ಕಟ್ಟಡ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಿಸಬೇಕು ಎಂದು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸತ್ಯಕುಮಾರ, ಜಾನ್ಸನ್, ಕವಿರಾಜ, ಗಂಗಶೆಟ್ಟಿ, ಮಲ್ಲಿಕಾರ್ಜುನ, ಗುಂಡಪ್ಪ, ನಯೀಮ್, ಮಹಾದೇವ, ಮಲ್ಲಪ್ಪ, ದಾಸ, ಗಣಪತಿ ಮುಧೋಳ, ಸೂರ್ಯಕಾಂತ, ವಿ.ಬೆಲ್ಲಾಳೆ, ನೀಲಕಂಠ ಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.

“ಸರ್ಕಾರಿ ನೌಕರರು, ವಿಶೇಷವಾಗಿ KSRTC ನೌಕರರು, ಸಾರ್ವಜನಿಕ ಸೇವೆಯ backbone. 38 ತಿಂಗಳ ಹಿಂಬಾಕಿ ಬಾಕಿ ಇರುವುದು ನ್ಯಾಯವಲ್ಲ. 2024ರಿಂದಲೇ ವೇತನ ಪರಿಷ್ಕರಣೆ ಜಾರಿಯಾಗಬೇಕು. ಕಾರ್ಮಿಕರ ಗೌರವ ಉಳಿಯಬೇಕು ಅಂದರೆ ಅವರ ವೇತನದಲ್ಲಿ ನ್ಯಾಯ ಇರಬೇಕು.” ಸರ್ಕಾರವು ಈ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಹಂತ ಹಂತವಾಗಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಸುತ್ತಿದೆ.
lಗಣಪತಿ ಸಕ್ರಪ್ಪನೋರ್, ಬೀದರ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಎಂಎಸ್‌

Megha
the authorMegha

Leave a Reply

error: Content is protected !!