NEWSನಮ್ಮಜಿಲ್ಲೆನಮ್ಮರಾಜ್ಯ

BMTC: 4 ಹಗಲು 2 ರಾತ್ರಿ ಡ್ಯೂಟಿ – ಓಟಿ ಮಾಡಿ ಬಂದ ಚಾಲನಾ ಸಿಬ್ಬಂದಿಗೆ ಮೆಮೋ 200 ರೂ.ದಂಡ- ಮಾಡದ ತಪ್ಪಿಗೆ ಇದೆಂಥ ಶಿಕ್ಷೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗೆ ಒಂದಿಲ್ಲೊಂದು ತೊದರೆ ಕೊಡುವುದರಲ್ಲೇ ಅಧಿಕಾರಿಗಳು ನಿರತರಾಗಿರುತ್ತಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ.

ಆದರೆ, ನೌಕರರ ಸ್ನೇಹಿ ಅಧಿಕಾರಿಗಳು ಕೂಡ ಒಮ್ಮೊಮ್ಮೆ ಯಾರದೋ ಮಾತು ಕೇಳಿ ನೌಕರರನ್ನು ಶಿಕ್ಷಿಸುವ ಕೆಲಸ ಮಾಡುವುದು ಭಾರೀ ನೋವಿನ ಸಂಗತಿ. ಹತ್ತಾರೂ ವರ್ಷಗಳಿಂದ ನೌಕರರ ಸಮಸ್ಯೆಯನ್ನೇ ತಮ್ಮ ಸಮಸ್ಯೆ ಎಂದು ಭಾವಿಸಿ ಪರಿಹಾರ ಕೊಡುತ್ತಿದ್ದ ಅಧಿಕಾರಿಯೇ ಈಗ ಮಾಡದ ತಪ್ಪಿಗೆ ದಂಡ ರೂಪದ ಶಿಕ್ಷೆಯನ್ನು ನೌಕರರಿಗೆ ನೀಡಿದರೆ ಅದನ್ನು ಸಹಿಸಲು ಆಧ್ಯವೇ?

ಹೌದು! ನೌಕರರಿಗೆ ತೊಂದರೆಯಾದಾಗ ಅದಕ್ಕೆ ನಯವಾಗಿಯೇ ಪರಿಹಾರ ಕೊಡುತ್ತಿದ್ದ ಬಿಎಂಟಿಸಿ 15ನೇ ಘಟದ ವ್ಯವಸ್ಥಾಪಕರಾದ ಶ್ರೀನಿವಾಸ ರೆಡ್ಡಿ ಅವರು ರಾತ್ರಿ ಪಾಳಿಗೆ (Night halt) ಓಟಿ ಹತ್ತಿಸಿದ ಚಾಲಕ ಒಂದು ರಾತ್ರಿ ಎರಡು ಹಗಲು ಕೆಲಸ ಮಾಡಿ ಬಂದ ಬಳಿಕ ಮತ್ತೆ ಅದೇ ಬಸ್‌ಗೆ ಬೇರೆ ಚಾಲಕರಿಲ್ಲ ಎಂದು ಹೇಳಿ ಮತ್ತೆ ಡ್ಯೂಟಿ ಮೇಲೆ ಕಳುಹಿಸಿದ್ದಾರೆ.

ಈ ನಡುವೆ ಚಾಲಕ ಎರಡು ಹಗಲು ಒಂದು ರಾತ್ರಿ ಡ್ಯೂಟಿ ಮಾಡಿ ಬಂದಿದ್ದರಿಂದ ಸರಿಯಾಗಿ ನಿದ್ರೆಯೂ ಇಲ್ಲದೇ, ಮತ್ತೆ ಅದೇ ಬಸ್‌ಗೆ ಓಟಿ ಲೆಕ್ಕದಲ್ಲಿ ಡ್ಯೂಟಿ ಹತ್ತಿದ್ದಾರೆ. ಈ ನಡುವೆ ಮಧ್ಯಾಹ್ನ 3 ಗಂಟೆಗೆ ಬಸ್‌ ಕಾರ್ಯಚರಣೆಗೆ ಹೋಗಬೇಕಿತ್ತು. ಆದರೆ ಅಂದು ಬರಬೇಕಾದ ಚಾಲಕರು ಬರದ ಕಾರಣ ಸಂಜೆ 4.40ರ ಸುಮಾರಿಗೆ ರೂಟ್‌ ಮೇಲೆ ಬಸ್‌ ಹೊರಟ್ಟಿತ್ತು.

ಈ ನಡುವೆ 1.40 ಗಂಟೆ ತಟವಾಗಿ ಬಸ್‌ ಮಾರ್ಗಾಚರಣೆಗೆ ಇಳಿದಿದ್ದರಿಂದ ಅಂದು ಪೂರ್ಣ ಸುತ್ತುವಳಿ ಮಾಡಲಾಗಲಿಲ್ಲ. ಇದರ ಜತೆಗೆ ಚಾಲಕರು 4 ಹಗಲು 2 ರಾತ್ರಿ ನಿರಂತವಾಗಿ ಡ್ಯೂಟಿ ಮಾಡಿದ್ದರಿಂದ ನಾಲ್ಕನೇ ದಿನವೂ ಕೂಡ ಪೂರ್ತಿ ಸುತ್ತುವಳಿ ಮಾಡಲಾಗಲಿಲ್ಲ. ಚಾಲಕರು ಎರಡು ದಿನ ಸರಿಯಾಗಿ ನಿದ್ರೆ, ಊಟ ಮತ್ತು ನಿತ್ಯ ಕರ್ಮಗಳನ್ನು ಮಾಡಲಾಗದೆ ಅವರು ದೇಹವು ಸ್ಪಂದಿಸದ ಕಾರಣ ಅಂದು ಕೂಡ ಪೂರ್ಣ ಸುತ್ತುಮಾಡಲಾಗಲಿಲ್ಲ.

ಇದನ್ನು ಗಮನಿಸಿದ ಡಿಎಂ ಶ್ರೀನಿವಾಸ ರೆಡ್ಡಿ ಅವರು ನೀವು ಪೂರ್ಣ ಸುತ್ತುವಳಿ ಮಾಡದಿರುವುದರಿಂದ ಸಂಸ್ಥೆಗೆ ಆರ್ಥಿಕ ನಷ್ಟವುಂಟುಮಾಡಿದ್ದೀರಿ ಎಂದು ಚಾಲಕರೂ ಸೇರಿದಂತೆ ನಿರ್ವಾಹಕರಿಗೂ ಮೆಮೋ ಕೊಟ್ಟು ತಲಾ 200 ರೂ. ದಂಡಕೂಡ ವಿಧಿಸಿದ್ದಾರೆ. ಆದರೆ, ಈ ರೀತಿ ಓಟಿ ಹತ್ತಿಸಿದಾಗ ಅದನ್ನು ಓವರ್‌ ಟೀಂ ಡ್ಯೂಟಿ ಲೆಕ್ಕದಲ್ಲಿ ತೆಗೆದುಕೊಂಡು ಅವರು ಎಷ್ಟು ಗಂಟೆ ಡ್ಯೂಟಿ ಮಾಡಿದ್ದಾರೋ ಅದಕ್ಕೆ ಡಬಲ್‌ ಪೇಮೆಂಟ್‌ ಮಾಡಬೇಕು.

ಆದರೆ, ಇಲ್ಲಿ ಡಬಲ್‌ ಪೇಮೆಂಟ್‌ ಇರಲಿ ಓವರ್‌ ಟೈಂ ಡ್ಯೂಟಿ ಮಾಡಿದ ತಪ್ಪಿಗೆ ಸರಿಯಾದ ವೇತನವು ಇಲ್ಲ, ಇತ್ತ ದಂಡವನ್ನು ಕಟ್ಟುವ ಜತೆಗೆ ಮೆಮೋ ಕೂಡ ಪಡೆದು ಅದಕ್ಕೆ ಉತ್ತರವನ್ನು ಕೊಡಬೇಕು. ಇದು ಯಾವ ನ್ಯಾಯ? ಏಕೆ ನೌಕರರ ಸ್ನೇಹಿಯಾದ ಈ ಡಿಎಂ ಶ್ರೀನಿವಾಸ ರೆಡ್ಡಿ ಅವರು ಈ ರೀತಿ ನಡೆದುಕೊಂಡರು ಎಂಬುವುದು ಗೊತ್ತಾಗುತ್ತಿಲ್ಲ.

ಇನ್ನು ನಿಗಮದಲ್ಲಿ ಈ ರೀತಿ ಓಟಿ ಮಾಡಿದ ನೌಕರರಿಗೆ ದಂಡ ಹಾಕುವುದಾಗಲಿ ಅಥವಾ ಮೆಮೋ ಕೊಡುವಂಥ ನಿಯಮವೇ ಇಲ್ಲ. ಬಸ್‌ ಮಾರ್ಗಾಚರಿಸದೆ ಹೋದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂಬ ಕಾರಣ ನೌಕರರನ್ನು ಈ ರೀತಿ ಓಟಿ ಡ್ಯೂಟಿ ಕೊಟ್ಟು ಬಳಿಕ ಅವರನ್ನೇ ಬಲೀಕಾ ಬಕ್ರ ಮಾಡುವುದು ಎಷ್ಟು ಸರಿ?

ಇತ್ತ ತಾವು ಮಾಡದ ತಪ್ಪಿಗೆ ನಿರ್ವಾಹಕರು ಕೂಡ 200 ರೂ. ದಂಡ ಕಟ್ಟಬೇಕಾದ ಪರಿಸ್ಥಿತಿಗೆ ದೂಡಿದ್ದು ಎಷ್ಟು ಸರಿ? ಈ ಬಗ್ಗೆ ಇದೇ ಡಿಎಂ ಶ್ರೀನಿವಾಸ್‌ ರೆಡ್ಡಿ ಅವರನ್ನು ಸಂಬಂಧಪಟ್ಟ ಚಾಲಕ ಮತ್ತು ನಿರ್ವಾಹಕರು ಕೇಳಿದರೆ ಇದರಲ್ಲಿ ನನ್ನದೇನು ತಪ್ಪಿಲ್ಲ ಮೇಲಧಿಕಾರಿಗಳು ಹೇಳಿದಂತೆ ಮಾಡಿದ್ದೇನೆ ಅಷ್ಟೆ ಎಂದು ಜಾರಿಕೊಂಡಿದ್ದಾರಂತೆ.

ಒಟ್ಟಾರೆ ಓಟಿ ಮಾಡಿದರೆ ಗಂಟೆ ಲೆಕ್ಕದಲ್ಲಿ ಮಾಡಿದಷ್ಟು ಸಮಯದಕ್ಕೆ ಡಬಲ್‌ ವೇತನ ಕೊಡಬೇಕು. ಆದರೆ, ಡಬಲ್‌ ಕೊಡುವುದಿರಲಿ ಮಾಡಿದ ಓಟಿಯಲ್ಲೂ ಹಲವಾರು ಗಂಟೆಗಳು ಕಡಿತ ಮಾಡಿಕೊಂಡು ಅಲ್ಪ ವೇತನ ಕೊಡುತ್ತಾರೆ. ಇದು ಕೂಡ ಬದಲಾಗಬೇಕು. ಅದೇನೆ ಇರಲಿ 15ನೇ ಘಟಕದ ಡಿಎಂ ಅವರು ಓಟಿ ಕೊಟ್ಟು ಬಳಿಕ ಪೂರ್ಣ ಸುತ್ತುವಳಿ ಮಾಡಿಲ್ಲ ಎಂದು ಮೆಮೋ ಜತೆಗೆ ದಂಡ ಹಾಕಿರುವುದನ್ನು ವಾಪಸ್‌ ಪಡೆದು ನೌಕರರ ಬಳಿ ಕ್ಷೆಮೆ ಕೇಳಬೇಕು ಎಂದು ಸಮಸ್ತ ಬಿಎಂಟಿಸಿಯ ಚಾಲನಾ ಸಿಬ್ಬಂದಿ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ