NEWSನಮ್ಮಜಿಲ್ಲೆನಮ್ಮರಾಜ್ಯಬೆಂಗಳೂರು

BMTC: 7ತಿಂಗಳಾದರೂ ಇನ್ನೂ ಜಾರಿಗೆ ಬರದ ಎಂಡಿ ಹೊರಡಿಸಿದ 1ರಂದೇ ವೇತನ ಪಾವತಿ ಆದೇಶ- ರಬ್ಬರ್‌ ಸ್ಟ್ಯಾಂಪಾದ ರಾಮಚಂದ್ರನ್‌!

BMTC MD ರಾಮಚಂದ್ರನ್‌
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಅಧಿಕಾರಿ/ನೌಕರರಿಗೆ ಪ್ರತಿ ತಿಂಗಳು 1ನೇ ತಾರೀಖಿನಂದು ವೇತನ ಪಾತಿಸಬೇಕು ಎಂದು ಫೆಬ್ರವರಿ ತಿಂಗಳ ವೇತನ ಮಾರ್ಚ್1ರಂದೆ ಜಮಾ ಮಾಡುವುದಾಗಿ ಹೇಳಿದ ನಿಗಮದ ವ್ಯವಸ್ಥಾಪಕ ನಿರ್ದೇಕರು ಕಳೆದ 7ತಿಂಗಳ ಹಿಂದೆ ಹೊರಡಿಸಿದ ಆದೇಶ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಹೌದು! ಆ ಆದೇಶ ಮಾಡಿ 7 ತಿಂಗಳು ಕಳೆದರೂ ಅದನ್ನು ಜಾರಿಗೆ ತರುವಲ್ಲಿ ಎಂಡಿ ರಾಮಚಂದ್ರನ್‌ ವಿಫಲರಾಗಿದ್ದಾರೆ. ಹೀಗಾಗಿ ಬಿಎಂಟಿಸಿಯ ಸಮಸ್ತ ಅಧಿಕಾರಿಗಳು/ನೌಕರರು ರಾಮಚಂದ್ರನ್‌ ಅವರ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎನ್ನುತ್ತಿದ್ದಾರೆ. ಅಂದರೆ ಇವರು ಸಂಸ್ಥೆಯ ಎಂಡಿಯಾಗಿ ಬರಿ ರಬ್ಬರ್‌ಸ್ಟಾಂಪ್‌ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಂದರೆ 2025ರ ಫೆಬ್ರವರಿ ತಿಂಗಳ ವೇತನ ಮಾರ್ಚ್ 1ರಂದೆ ಎಲ್ಲ ನೌಕರರ ಬ್ಯಾಂಕ್‌ ಖಾತೆಗೆ ಜಮಾ ಆಗಲಿದೆ ಎಂದು ಎಂಡಿ ಆದೇಶ ಹೊರಡಿಸಿದ್ದರು. ಆದರೆ ಅದು ಸೆ.1ರಂದಾದರೂ ವೇತನ ಬರುತ್ತದೆ ಎಂದು ನೌಕರರು ಅಂದುಕೊಂಡಿದ್ದರು ಆದರೆ ಸೆ.2ಕ್ಕೂ ವೇತನ ಹಾಕಿಲ್ಲ.

ಇನ್ನು ಕಳೆದ 2025ರ ಮಾರ್ಚ್‌ 1ರಂದು ವೇತನ ಬ್ಯಾಂಕ್‌ ಖಾತೆಗೆ ಬರಲಿಲ್ಲ ಆ ಬಳಿಕ ಅಂದರೆ ಮಾರ್ಚ್‌ ತಿಂಗಳ ವೇತನವಾದರೂ ಏ.1ರಂದು ಬರುತ್ತದೆ ಎಂದು ನೌಕರರು ಅಂದುಕೊಂಡಿದ್ದರು, ಆದರೆ, ಯುಗಾದಿ ಹಬ್ಬ, ಆರ್ಥಿಕ ಹೊಸವರ್ಷದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ, ಹೀಗಾಗಿ ಏಪ್ರಿಲ್‌ 2ರಂದು ವೇತನ ಪಾವತಿಯಾಗುತ್ತದೆ ಎಂದು ನೌಕರರು ಚಾತಕಪಕ್ಷಯಂತೆ ಕಾಯುತ್ತಿದ್ದರು, ಸಂಬಳ ಆಗಲಿಲ್ಲ. ಏ.4ರಂದಾದರೂ ಆಗುತ್ತದೆ ಎಂದುಕೊಂಡಿದ್ದ ನೌಕರರಿಗೆ ಅಂದೂ ಕೂಡ ನಿರಾಸೆಯಾಗಿತ್ತು.

ಹೀಗೆ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿ ಬರೋಬರಿ 7ತಿಂಗಳು ಕಳೆದರೂ ಈವರೆಗೂ 1ನೇ ತಾರೀಖಿಗೆ ವೇತನ ಪಾವತಿ ಆಗುತ್ತಿಲ್ಲ. ಹೀಗಾಗಿ ನಿಮ್ಮ ಸಂಸ್ಥೆಯಲ್ಲಿ ನಿಮ್ಮ ಆದೇಶಲ್ಲೇ ಕಿಮ್ಮತ್ತಿಲ್ಲ ಎಂದರೆ ನಿಮ್ಮ ಆಡಳಿತ ಎಷ್ಟರ ಮಟ್ಟಿಗೆ ಬಿಗಿಯಿದೆ ಎಂಬುವುದು ಗೊತ್ತಾಗುತ್ತಿದೆ. ಇದನ್ನು ಮಾತ್ರ ಜಾರಿ ಮಾಡಲು ಆಗದ ಎಂಡಿ ನೌಕರರ ವಿರುದ್ಧ ನಿಯಮಗಳನ್ನು ಜಾರಿ ಮಾಡುವುದಕ್ಕೆ ಕ್ಷಣವೂ ಬೇಕಿಲ್ಲ. ಇದು ನಮ್ಮ ದುರ್ದೈವ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ನೀವು ಈ ರೀತಿ ಹಿಡಿತ ತಪ್ಪಿದ ಆಡಳಿತ ಮಾಡುತ್ತಿರುವುದರಿಂದ ಸಂಸ್ಥೆಯ ಕೆಲ ಅಧಿಕಾರಿಗಳು ನೌಕರರ ಸುಲಿಗೆ ಮಾಡುತ್ತಿದ್ದಾರೆ. ಸಂಸ್ಥೆಯ ಒಬ್ಬ ಎಂಡಿಯಾಗಿ ಹೊರಡಿಸಿರುವ ಆದೇಶದ ಬಗ್ಗೆ ಅಧಿಕಾರಿಗಳು ಕಾಳಜಿವಹಿಸುತ್ತಿಲ್ಲ ಎಂದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಲ್ಲವೇ? ಅದನ್ನು ಬಿಟ್ಟು ಎಲ್ಲಿ ಕುಳಿತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

Advertisement

ಎಂಡಿ ಆದೇಶದಲ್ಲೇನಿದೆ?: ಸಾರಿಗೆ ಸಚಿವರು ಹಾಗೂ ನಿಗಮದ ಅಧ್ಯಕ್ಷರ ಆದೇಶದಂತೆ ತಾವು ಎಲ್ಲ ನೌಕರರಿಗೂ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾತಿಸಲಿದ್ದು ಹೀಗಾಗಿ ಸರಿಯಾದ ಸಮಯಕ್ಕೆ ನೌಕರರ ಹಾಜರಾತಿ ನಿರ್ವಹಣೆ ಮಾಡಬೇಕು ಎಂದು ಫೆಬ್ರವರಿ ತಿಂಗಳಿನಲ್ಲಿ ಆದೇಶ ಹೊರಡಿಸಿದ್ದಾರೆ. ಆ ಆದೇಶ ಏನಾಯತು ಕಸದ ಬುಟ್ಟಿ ಸೇರಿತೆ? ಗೊತ್ತಿಲ್ಲ.

ಈವರೆಗೂ ಬಿಎಂಟಿಸಿಯಲ್ಲಿ ಎಲ್ಲ ವರ್ಗದ ನೌಕರರ/ಅಧಿಕಾರಿಗಳ ವೇತನವನ್ನು ನಿರ್ದೇಶನಗಳನ್ವಯ ನಿರ್ವಹಣೆ ಮಾಡಿ ಪ್ರತಿ ತಿಂಗಳ 7ನೇ ತಾರೀಖಿನೊಳಗೆ ಪಾವತಿ ಮಾಡುವ ಪದ್ಧತಿ ಚಾಲ್ತಿಯಲ್ಲಿತ್ತು. ಈಗಲೂ ಅದನ್ನೆ ಮುಂದುವರಿಸಿದ್ದಾರೆ.

ಇನ್ನು ಈ ಹಿಂದೆ ಇದ್ದ ಸತ್ಯವತಿ ಮೇಡಂ ಅವರು ಹೋದ ಮೇಲೆ ತಾವು ಬಂದಿದ್ದೀರಿ ಅವರಂತೆ ಹಿಡಿತ ನಿಮ್ಮಲ್ಲಿ ಇಲ್ಲವೇ? ನೀವು ಐಎಎಸ್‌ ಅಧಿಕಾರಿಯಾಗಿ ಈ ರೀತಿ ಆರೋಗ್ಯ ತಪ್ಪಿದವರಂತೆ ನಡೆದುಕೊಂಡರೆ ನೌಕರರ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ತಾವೇ ಹೊರಡಿಸಿದ ಆದೇಶ  ಒಮ್ಮೆ ನೋಡಿ: 1. ಪ್ರತಿ ತಿಂಗಳು 26ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ಹಾಜರಾತಿಯನ್ನು ವಾಸ್ತವಿಕ ಹಾಜರಾತಿಗಳಿಗನುಗುಣವಾಗಿ ಮುಕ್ತಾಯಗೊಳಿಸಿ 1ನೇ ತಾರೀಖಿನಂದು ವೇತನ ಪಾವತಿಗೆ ಕ್ರಮ ವಹಿಸಬೇಕು.

ಫೆಬ್ರವರಿ-2025 ನೇ ಮಾಹೆಯ 26.02.2025 27.02.2025 ಹಾಗೂ 28.02.2025 ಈ 3 ದಿನಗಳಿಗೆ ಹಾಜರಾತಿ ನೀಡಿ ಪೂರ್ಣ ವೇತನ ಪಾವತಿ ಮಾಡಲು ಕ್ರಮ ವಹಿಸುವುದು. ಈ ರೀತಿ ಪಾವತಿಸಿರುವ 03 ದಿನದ ವೇತನವನ್ನು ಕ್ರಮವಾಗಿ ಮಾರ್ಚ್-2025, ಏಪ್ರಿಲ್-2025 ಹಾಗೂ ಮೇ-2025 ನೇ ಮಾಹೆಯ ವೇತನದಲ್ಲಿ ಒಂದೊಂದು ದಿನದ ವೇತನವನ್ನು ಕಡಿತ ಮಾಡಿ ಸರಿದೂಗಿಸಿಕೊಳ್ಳುವುದು.

ನೌಕರರು/ಅಧಿಕಾರಿಗಳು ಸೇವಾ ವಿಮುಕ್ತಿಗೊಳ್ಳುವ ಮಾಹೆಯಲ್ಲಿ ಮಾಸಾಂತ್ಯದವರೆಗೆ ವೇತನ ಪಾವತಿಸುವುದು. ಹೀಗೆ ಪ್ರತಿ ತಿಂಗಳು 26ನೇ ತಾರೀಖಿನಿಂದ ಮುಂದಿನ ಮಾಹೆಯ 25ನೇ ತಾರೀಖಿನವರೆಗೆ ಹಾಜರಾತಿಯನ್ನು ವಾಸ್ತವಿಕವಾಗಿ ಮುಕ್ತಾಯಗೊಳಿಸುವುದು ಹಾಗೂ 1ನೇ ತಾರೀಖಿನಂದು ವೇತನ ಪಾವತಿ ಮಾಡುವ ನಿರ್ದೇಶನಗಳನ್ನು ಹೊರತುಪಡಿಸಿ ಉಳಿದ ವೇತನ ಬಿಲ್ಲಿನ ನಿರ್ವಹಣೆ ಹಾಗೂ ಸಂಬಂಧಪಟ್ಟವರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ನಿರ್ದೇಶನಗಳು ಯಥಾವತ್ತಾಗಿರುತ್ತವೆ ಎಂದು ತಿಳಿಸಿದ್ದೀರಿ.

ಇನ್ನು ಯಾವುದೇ ಹಂತಗಳಲ್ಲಿ ಲೋಪದೋಷ ಹಾಗೂ ವಿಳಂಬಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯನ್ನು ವಹಿಸಿ ಸಂಬಂಧಪಟ್ಟವರು ಈ ಆದೇಶದಲ್ಲಿ ತಿಳಿಸಿರುವ ನಿರ್ದೇಶನಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಧಿಕಾರಿ/ಅಧೀಕ್ಷಕರು/ಮೇಲ್ವಿಚಾರಕರು/ಸಿಬ್ಬಂದಿಗಳ ಗಮನಕ್ಕೆ ತರಬೇಕು ಮತ್ತು ಈ ಸಂಬಂಧ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಲ್ಲ ಹಂತಗಳಲ್ಲಿ ಪರಿಪೂರ್ಣವಾಗಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದೀರಿ.

ಈ ಆದೇಶವು ಫೆಬ್ರವರಿ-2025 ನೇ ಮಾಹೆಯಿಂದ ಜಾರಿಗೆ ಬರುತ್ತದೆ ಹಾಗೂ ಈ ಆದೇಶದ ಪ್ರತಿಯನ್ನು ಸ್ವೀಕರಿಸಿರುವುದಕ್ಕೆ ಮತ್ತು ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಆದೇಶಿಸಿ ತಾವು ಅಂದರೆ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್‌ ಅವರೆ ನೀವು ತಿಳಿಸಿದ್ದೀರಿ. ಆದರೆ ಎಲ್ಲಿಗೋಯಿತು ನಿಮ್ಮ ಈ ಆದೇಶ ಪ್ರತಿ?

ವಿಜಯಪಥ - vijayapatha.in
Megha
the authorMegha

Leave a Reply

error: Content is protected !!