CRIMENEWSಬೆಂಗಳೂರು

BMTC: ಬ್ರೇಕ್ ಫೇಲಾಗಿ ಕಂದಕಕ್ಕೆ ನುಗ್ಗಿದ ಬಸ್- ಅದೃಷ್ಟವಶಾತ್‌ ಪ್ರಯಾಣಿಕರು ಸೇಫ್‌

ವಿಜಯಪಥ ಸಮಗ್ರ ಸುದ್ದಿ

ಆನೇಕಲ್: ಬ್ರೇಕ್ ಫೇಲಾಗಿ ರಸ್ತೆ ಬದಿಯ ಕಂದಕಕ್ಕೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಬಸ್ ನುಗ್ಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಹರಪ್ಪನಹಳ್ಳಿ ಬಳಿ ನಡೆದಿದೆ.

ಪ್ರಯಾಣಿಕರಿದ್ದ ಬಸ್ ಚಲಿಸುತ್ತಿರುವಾಗಲೇ ಬ್ರೇಕ್ ಫೇಲಾದ್ದು, ಈ ವೇಳೆ ಚಾಲಕನ ನಿಯಂತ್ರ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ನುಗ್ಗಿದೆ. ಅದೃಷ್ಟವಶಾತ್‌ ಘಟನೆಯಿಂದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಜಿಗಣಿ ಬಿಎಂಟಿಸಿ ಘಟದ ಬಸ್ ಇದಾಗಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡಿಪೋದಲ್ಲಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಘಟನೆ ನಡೆದಿದೆ. ಬಸ್‌ಗಳನ್ನು ಮಾರ್ಗಕ್ಕೆ ಇಳಿಸುವ ಮುನ್ನ ಅವುಗಳ ಫಿಟ್‌ನೆಸ್‌ ಚೆಕ್‌ ಮಾಡುವುದಿಲ್ಲ, ಸಾರ್ವಜನಿಕರ ಪ್ರಾಣದ ಜತೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಚಾಲಕರು ಬಸ್‌ನಲ್ಲಿ ದೋಷ ಕಂಡು ಬಂದಿದೆ ಎಂದು ಲಾಗ್‌ ಶೀಟ್‌ನಲ್ಲಿ ಬರೆದರೆ ಅವರಿಗೆ ಹೀಗೆ ಏಕೆ ದೂರು ಬರೆದಿದ್ದೀರಿ ಎಂದು ಮಾನಸಿಕ ಕಿರುಕುಳ ನೀಡುವುದರಿಂದ ಚಾಲನಾ ಸಿಬ್ಬಂದಿಗಳು ಬಸ್‌ನಲ್ಲಿ ಕಂಡುಬರುವ ದೋಷಗಳನ್ನು ತಿಳಿಸುತ್ತಿಲ್ಲ. ಇದಕ್ಕೆ ಅಧಿಕಾರಿಗಳ ಕಿರುಕುಳವೇ ಕಾರಣವಾಗಿದೆ.

ಜತೆಗೆ ಚಾಲನಾ ಸಿಬ್ಬಂದಿಗಳು ಬಸ್‌ನಲ್ಲಿ ಕಂಡು ಬರುವ ಸಮಸ್ಯೆಯನ್ನು ಲಿಖಿತವಾಗಿ ಅಥವಾ ಮೌಖಿಕವಾಗಿ ತಿಳಿಸಿದರೆ ಅಂಥ ನೌಕರರಿಗೆ ನೀವೆ ಈ ಸಮಸ್ಯೆಗೆ ಕಾರಣ ಎಂದು ಅವರ ವಿರುದ್ಧವೇ ಮೆಮೋ ಕೊಡುವುದು ಬಳಿಕ ಅವರ ವೇತನದಲ್ಲಿ ಹಣ ಕಡಿತ ಮಾಡಲಾಗುತ್ತದೆ ಹೀಗಾಗಿ ನೌಕರರು ಭಯದಿಂದ ಬಸ್‌ನಲ್ಲಿನ ದೋಷಗಳನ್ನು ತಿಳಿಸುವುದಿಲ್ಲ.

ಇತ್ತ ಬಸ್‌ನ ಬಿಡಿಭಾಗಗಳನ್ನು ಸರಿಯಾಗಿ ಪೂರೈಕೆ ಮಾಡದಿರುವುದರಿಂದ ಡಿಪೋಗಳಲ್ಲಿ ತಾಂತ್ರಿಕ ಸಿಬ್ಬಂದಿಗಳಿಗೂ ಕೂಡ ಇದು ತಲೆನೋವಾಗಿ ಪರಿಣಮಿಸಿದೆ. ಕಾರಣ ಒಂದು ಬಸ್‌ನ ಬಿಡಿಭಾಗಗಳನ್ನು ಬಿಚ್ಚಿ ಮತ್ತೊಂದು ಬಸ್‌ಗೆ ಜೋಡಿಸಬೇಕು. ಮತ್ತೆ ಅದು ಮಾರ್ಗ ಪೂರ್ಣ ಮಾಡಿ ಬಂದ ಬಳಿಕ ಅದೇ ಬಿಡಿಭಾಗವನ್ನು ಮತ್ತೆ ಇನ್ನೊಂದ ಬಸ್‌ ಹಾಕಬೇಕು ಹೀಗೆ ತಾಂತ್ರಿಕ ಸಿಬ್ಬಂದಿಗಳಿಗೂ ಕೂಡ ಬಹುತೇಕ ಎಲ್ಲ ಡಿಪೋಗಳನ್ನು ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.

ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಆಗುತ್ತಿರುವ ಸಮಸ್ಯೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಬಸ್‌ಗಳ ಬಿಡಿ ಭಾಗಗಳನ್ನು ಕಾಲಕಾಲಕ್ಕೆ ಸರಿಯಾಗಿ ಪೂರೈಸಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!