CRIMENEWSನಮ್ಮಜಿಲ್ಲೆಬೆಂಗಳೂರು

ಬೈಕ್‌ನಿಂದ ಬಿದ್ದ ಬಾಲಕನ ಮೇಲೆ ಹರಿದ ಬಿಎಂಟಿಸಿ ಬಸ್‌: ಬಾಲಕ ಸ್ಥಳದಲ್ಲೇ ಸಾವು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದ್ದು,  ಜಿ.ಎಂ.ಪಾಳ್ಯದ ನಿವಾಸಿ ಅರ್ಚಕ ದಿಲೀಪ್ ಕುಮಾರ್ ಅವರ ಅಣ್ಣನ ಮಗ ಶಬರೀಶ್ (11) ಮೃತಪಟ್ಟಿದ್ದಾನೆ.

ಶಬರೀಶ್​ ಚಿಕ್ಕಪ್ಪನ  ಜತೆ ಕೆ.ಆರ್​.ಮಾರ್ಕೆಟ್​ಗೆ ಬಂದಿದ್ದನು. ಈ ವೇಳೆ ಬೈಕ್​ಗೆ ಬಸ್ ಟಚ್ ಆಗಿದ್ದರಿಂದ ಶಬರೀಶ್ ಕೆಳಗೆಬಿದ್ದಿದ್ದಾನೆ. ಈ ವೇಳೆ ಶಬರೀಶ್ ಮೇಲೆ ಬಿಎಂಟಿಸಿ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ವಿವರ: ಸ್ಥಳೀಯ ದೇವಸ್ಥಾನದ ಅರ್ಚಕರಾಗಿರುವ ಸುನಿಲ್ ಕುಮಾರ್ ಅವರು ತನ್ನ ಅಣ್ಣ ದಿವಂಗತ ದಿಲೀಪ್ ಕುಮಾ‌ರ್ ಅವರ ಮಗನ ಜತೆ ದ್ವಿಚಕ್ರ ವಾಹನದಲ್ಲಿ ಕೆ.ಆ‌ರ್.ಮಾರ್ಕೆಟ್‌ಗೆ ಭಾನುವಾರ ಸಂಜೆ 5ರ ಸುಮಾರಿಗೆ ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನಕ್ಕೆ ಬಸ್‌ ತಾಗಿದ್ದರಿಂದ ಶಬರೀಶ್ ಕೆಳಗೆ ಬಿದ್ದಿದ್ದಾನೆ. ಆಗ ಆತನ ಮೇಲೆ ಬಸ್‌ನ ಚಕ್ರ ಹರಿದ ಪರಿಣಾಮ, ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇನ್ನು ಬಲ ಭಾಗಕ್ಕೆ ಬಿದ್ದ ಸುನಿಲ್ ಕುಮಾ‌ರ್ ಅವರಿಗೆ ಸಣ್ಣ ಗಾಯವಾಗಿದೆ. ಇತ್ತ ಮಗ ಅಸುನೀಗಿದ ವಿಷಯ ತಿಳಿದ ದಿಲೀಪ್ ಕುಮಾರ್ ದಂಪತಿ ಆಕ್ರಂದನ ಮುಗಿಲು ಮುಟ್ಟಿದೆ.

ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡ ಸಾರ್ವಜನಿಕರು, ವ್ಯಾಪಾರಿಗಳು ಬಿಎಂಟಿಸಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೃತನ ಬಾಲಕನ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಸ್ ಚಾಲಕ ಸಂತೋಷ್, ನಿರ್ವಾಹಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆ ಶವಗಾರಕ್ಕೆ ರವಾನಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Megha
the authorMegha

Leave a Reply

error: Content is protected !!