ಕೂಟದ ಅಧ್ಯಕ್ಷ ಚಂದ್ರು ಸೇರಿ ನಾಲ್ವರ ವಿರುದ್ಧ ತಕರಾರು ಅರ್ಜಿ ಹಾಕಿದ BMTC ನಿರ್ವಾಹಕ ಚೇತನ್‌ರಾಜ್-ಜ.5ಕ್ಕೆ ತೀರ್ಪು

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರೊಬ್ಬರ ಪತ್ನಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಹೊತ್ತಿರುವ ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್ ರಾಜ್ ಎಂಬಾತ ಚಾಲಕರೊಬ್ಬರ ಪತ್ನಿ ಸೇರಿ ಇತರರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿ ಡಿ.12ರಂದು ಆದೇಶ ಹೊರಡಿಸಿತ್ತು.

ಅದರ ಮುಂದುವರಿದ ಭಾಗವಾಗಿ ಇಂದು (ಡಿ.29) ಸೋಮವಾರ ಚೇತನ್ ರಾಜ್ ಪರ ವಕೀಲರು ವಕಾಲತ್ತು ವಹಿಸಿ ತಕಾರರು ಅರ್ಜಿ ಹಾಕಿದ್ದರು. ಈ ವೇಳೆ ರೋಪಿಗಳ ಪರ ವಕೀಲರಾದ ಶಕ್ತಿ ದೂದುಹಳ್ಳಿ ಅವರು ತಮ್ಮ ಹಿರಿಯ ವಕೀಲರು ವಾದ ಮಂಡಿಸಲಿದ್ದಾರೆ ಹಾಗಾಗಿ ಪ್ರಕರವನ್ನು ಮಧ್ಯಾಹ್ನಕ್ಕೆ ಮುಂದೂಡಲು ಮನವಿ ಮಾಡಿದರು.
ಮಧ್ಯಾಹ್ನ 3.30ಕ್ಕೆ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶರ ಮುಂದೆ ಚೇತನ್‌ರಾಜ್ ಪರ ವಕೀಲರು ವಾದ ಮಂಡಿಸಿ ಈ ಪ್ರಕರಣ ಜಾತಿನಿಂದನೆ ಪ್ರಕರಣವಾಗಿದೆ ಹೀಗಾಗಿ ಆರೋಪಿಗಳಿಗೆ ಜಾಮೀನು ಕೊಡಬಾರದು ಎಂದು ವಾದ ಮಂಡಿಸಿದರು.
ಆಗ ಆರೋಪಿಗಳ ಪರ ವಕೀಲರು ಪ್ರತಿವಾದ ಮಂಡಿಸಿದ್ದರು. ಈ ವೇಳೆ ಇವರಲ್ಲಿ ಒಬ್ಬರು ಕೂಟದ ಅಧ್ಯಕ್ಷರಾಗಿದ್ದು, ಅವರು ಯಾವುದೇ ರೀತಿಯ ಜಾತಿನಿಂದನೆ ಮಾಡಿಲ್ಲ ಬದಲಿಗೆ ಎರಡು ಕಡೆಯವರು ಗಾಲಾಟೆ ಮಾಡುತ್ತಿದ್ದಾಗ ಅವರಿಗೆ ತಿಳಿಹೇಳಲು ಹೋಗಿದ್ದರು. ಆದರೆ ಅದನ್ನು ತಪ್ಪಾಗಿ ಭಾವಿಸಿಕೊಂಡು ಪ್ರಕರಣ ದಾಖಲಸಿದ್ದಾರೆ ಎಂದು ಹಿರಿಯ ವಕೀಲರು ವಾದ ಮಂಡಿಸಿ ಈ ಪ್ರಕರಣ ಜಾತಿನಿಂದನೆಯಡಿ ಬರುವುದಿಲ್ಲ ಎಂದು ವಿವರಿಸಿದರು.
ಅಲ್ಲದೆ ಚಂದ್ರ ಅವರು ಸರ್ಕಾರಿ ನೌಕರರಿಗೆ ಕೊಡುತ್ತಿರುವಂತೆ ಸಾರಿಗೆ ನೌಕರರಿಗೂ ಸರಿ ಸಮಾನ ವೇತನ ಕೊಡಬೇಕು ಎಂಬ ಬಗ್ಗೆ ನೌಕರರ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಇದನ್ನು ಸಹಿಸದೆ ಈ ರೀತಿ ಜಾತಿ ನಿಂದನೆ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಎಳೆತಂದ್ದಿದ್ದಾರೆ ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಪ್ರತಿವಾದ ಮಂಡಿಸಿದರು.
ವಾದ – ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಪ್ರಕರಣದ ತೀರ್ಪನ್ನು ಜನವರಿ 5ಕ್ಕೆ ಕಾಯ್ದಿರಿದ್ದಾರೆ. ಇನ್ನು ಮಧ್ಯಂತರ ಜಾಮೀನು (interim bail) ಮಂಜೂರು ಮಾಡಿರುವುದು ಮುಂದುವರಿದಿದೆ.
ಪ್ರಕರಣವೇನು?: ಬಿಎಂಟಿಸಿ ಘಟಕ-9 ನಿರ್ವಾಹಕ ಚೇತನ್ ರಾಜ್ ಎಂಬಾತ ಈ ಪ್ರಕರಣ ಅರ್ಜಿದಾರರಾದ ಚಾಲಕ ಮಲ್ಲೇಶಪ್ಪ ಅವರ ಪತ್ನಿ, ಬಿಎಂಟಿಸಿ ನೌಕರ ರೇಣುಕಾನಂದ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಸಂಬಂಧ ಡಿ.12ರಂದು ಇದೇ ಕೋರ್ಟನಲ್ಲಿ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಈ ನಾಲ್ವರಿಗೂ ಷರತ್ತುಗಳೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಅಲ್ಲದೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದರು.
ಅಂದು ಡಿ.12ರಂದು ಚಂದ್ರಶೇಖರ್ ಸೇರಿದಂತೆ ನಾಲ್ವರು ಅರ್ಜಿದಾರರಿಗೆ ಮಧ್ಯಂತರ ಜಾಮೀನು ಷರತ್ತುಗಳೊಂದಿಗೆ ಅನುಮತಿಸಲಾಗಿದ್ದು, ಅದರಲ್ಲಿ 1) ನಾಲ್ವರು ಅರ್ಜಿದಾರರು ಸಭೆಯಲ್ಲಿ (Mrrting) ಯಾವುದೇ ಸಮಸ್ಯೆ ಉಂಟುಮಾಡುವುದಿಲ್ಲ ಮತ್ತು ನ್ಯಾಯಾಲದ ನೀಡಿರುವ ನಿಯಮಗಳನ್ನು ಪಾಲಿಸುವ ಜತೆಗೆ ಸಭೆಯ ನಡಾವಳಿಗಳನ್ನು ಸುಗಮವಾಗಿ ನಡೆಸಲು ಅವಕಾಶ ನೀಡಬೇಕು.
2) ತನಿಖಾಧಿಕಾರಿ ಕರೆದಾಗ ಅರ್ಜಿದಾರರು ಅವರ ಮುಂದೆ ಹಾಜರಾಗಬೇಕು. 3) ಮಧ್ಯಂತರ ಜಾಮೀನಿನಲ್ಲಿರುವ ಅರ್ಜಿದಾರರು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಬಾರದು.
4) ಅರ್ಜಿದಾರರು ಸಾಕ್ಷಿಗಳನ್ನು ತಿರುಚಬಾರದು ಅಥವಾ ಅವರಿಗೆ ಬೆದರಿಕೆ ಹಾಕಬಾರದು. 5) ಅರ್ಜಿದಾರರು ತನಿಖಾ ಪ್ರಕ್ರಿಯೆ ಸಮಯದಲ್ಲಿ ತನಿಖಾ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸುವ ಮೂಲಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇನ್ನು ಪ್ರಮುಖವಾಗಿ ಪ್ರತಿವಾದಿ ಪೊಲೀಸರು ಮಧ್ಯಂತರ ಜಾಮೀನು ಅರ್ಜಿ ಹಾಕಿರುವ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದ್ದು, ಅಲ್ಲದೆ ಈ ಮುಖ್ಯ ಅರ್ಜಿ ಇತ್ಯರ್ಥವಾಗುವವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ ಎಂದು ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಅಂದು ಇಂದು ಸಾಥ್ ನೀಡಿದ ಹಿರಿಯ ವಕೀಲರು: ಡಿ.12 ಮತ್ತು ಡಿ.29 ಈ ಎರಡು ದಿನವೂ ಕೋರ್ಟ್‌ನಲ್ಲಿ ಜಾಮೀನು ಕೋರಿ ಹಾಕ್ಕಿದ್ದ ಅರ್ಜಿಗೆ ಹಿರಿಯ ವಕೀಲರು ವಕೀಲೆ ಶಕ್ತಿ ದೂದುಹಳ್ಳಿ ಅವರಿಗೆ ಮಾರ್ಗದರ್ಶನ ನೀಡಿದ್ದರು. ಅದೇ ರೀತಿ ಇಂದು ಕೂಡ ನಿರ್ವಾಹಕ ಚೇತನ್ ರಾಜ್ ಪರ ವಕೀಲರು ಸಲ್ಲಿಸಿದ್ದ ತಕರಾರು ಅರ್ಜಿ ಬಗ್ಗೆ ಹೇಗೆ ಪ್ರತಿವಾದ ಮಂಡಿಸಬೇಕು ಎಂದು ಮಾರ್ಗದರ್ಶನ ನೀಡಿದ್ದಾರೆ.
Related









