ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಕಾಯುತ್ತಿದ್ದ ಅಂತರ ನಿಗಮಗಳ ವರ್ಗಾವಣೆಗೆ ಕೊನೆಯೂ ಚಾಲನೆ ಸಿಕ್ಕಿದ್ದು, ವರ್ಗಾವಣೆಗೆ ಕೋರಿ ಈಗಾಗಲೇ ಅರ್ಜಿ ಹಾಕಿರುವವರಲ್ಲಿ 151ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಅವರು ಕೋರಿದ ನಿಗಮಗಳ ವಿಭಾಗ, ಘಟಕಗಳಿಗೆ ವರ್ಗಾವಾಣೆ ಮಾಡಿ ಬಿಎಂಟಿಸಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು (ಸಿಪಿಎಂ) ಶನಿವಾರ ಆದೇಶ ಹೊರಡಿಸಿದ್ದಾರೆ.
ಹೀಗಾಗಿ 2023ರಿಂದ ನನೆಗುದಿಗೆ ಬಿದ್ದಿದ್ದ ಗರ್ವಾವಣೆ ಪ್ರಕ್ರಿಗೆಗೆ ನಿನ್ನೆ ಚಾಲನೆ ಸಿಕ್ಕಂತಾಗಿದ್ದು ಈ ಹಿನ್ನೆಲೆಯಲ್ಲಿ 2023ನೇ ಸಾಲಿನಲ್ಲಿ ಅಂತರ ನಿಗಮಗಳಿಗೆ ವರ್ಗಾವಣೆಗೊಂಡಿರುವ ಚಾಲನಾ, ತಾಂತ್ರಿಕ ಮತ್ತು ಆಡಳಿತ ಸಿಬ್ಬಂದಿಗಳನ್ನು ತುರ್ತಾಗಿ ಬಿಡುಗಡೆಗೊಳಿಸಬೇಕು ಎಂದು ಸಂಸ್ಥೆಯ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರಿಗೆ ಸಿಪಿಎಂ ಆದೇಶ ಮಾಡಿದ್ದಾರೆ.
ಈ ಸಂಬಂಧ ಮೇ 17ರಂದು ಅಂದರೆ ಶನಿವಾರ ಆದೇಶ ಹೊರಡಿಸಿರುವ ಅವರು, 06.02.2025 ರನ್ವಯ ಅಂತರ ನಿಗಮ ವರ್ಗಾವಣೆಗೊಂಡಿರುವ ದರ್ಜೆ ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರನ್ನು ಕಚೇರಿ ಅಥವಾ ಘಟಕಗಳಿಗೆ ನಿಯೋಜಿಸಿ ಹೊರಡಿಸಿರುವ ಆದೇಶದಂತೆ ಸೂಕ್ತಾಧಿಕಾರಿಗಳ 16.05.2025ರಂದು ಆದೇಶ ಹೊರಡಿಸಿದ್ದು, 2023ನೇ ಸಾಲಿನಲ್ಲಿ ಅಂತರ ನಿಗಮಗಳಿಗೆ ವರ್ಗಾವಣೆ ಕೋರಿರುವ ಸಿಬ್ಬಂದಿಗಳನ್ನು ಅವರ ಕೋರಿಕೆಯ ನಿಗಮ ಅಥವಾ ಸಂಸ್ಥೆಗಳಿಗೆ ಶಾಶ್ವತವಾಗಿ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶದಲ್ಲಿ ಬಿಎಂಟಿಸಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 145 ಚಾಲನಾ ಸಿಬ್ಬಂದಿಗಳು, 152 ಚಾಲಕ ಕಂ ನಿರ್ವಾಹಕರು, 15 ಮಂದಿ ನಿರ್ವಾಹಕರು, 46 ಮಂದಿ ತಾಂತ್ರಿಕ ಸಿಬ್ಬಂದಿ ಹಾಗೂ 24 ಮಂದಿ ಆಡಳಿತ ವಿಭಾಗದ ಸಿಬ್ಬಂದಿ ಸೇರಿ ಒಟ್ಟು 385 ಮಂದಿ ವರ್ಗಾವಣೆ ಮಾಡಲಾಗಿದೆ.
ಇನ್ನು ಈ ಆದೇಶದನ್ವಯ, ಈ ಪಟ್ಟಿಯಲ್ಲಿರುವ ಚಾಲಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿಗಳನ್ನು ಸೂಕ್ತಾಧಿಕಾರಿಗಳ ಆದೇಶದ ಮೇರೆಗೆ ಸಂಸ್ಥೆಯ ಸೇವೆಯಿಂದ ಬಿಡುಗಡೆಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಿಬ್ಬಂದಿಗಳಲ್ಲಿ ಅಂತರ ನಿಗಮ ವರ್ಗಾವಣೆಯನ್ವಯ ಬಿಡುಗಡೆಗೊಳ್ಳದೇ ಬಿಎಂಟಿಸಿಯಲ್ಲಿಯೇ ಮುಂದುವರಿಯಲು ಇಚ್ಛಿಸಿದಲ್ಲಿ, ಅಂತಹ ಸಿಬ್ಬಂದಿಗಳಿಂದ ಈ ಕುರಿತು ಲಿಖಿತ ಮನವಿಯನ್ನು ಪಡೆದು, ಮೇ 21ರೊಳಗಾಗಿ ಕಚೇರಿಗೆ ಖಡ್ಡಾಯವಾಗಿ ಕಳುಹಿಸಬೇಕು ಎಂದು ಸೂಚಿಸಿದ್ದಾರೆ.
ಒಂದು ವೇಳೆ ನಿಗದಿತ ಸಮಯದೊಳಗಾಗಿ ಈ ಸಿಬ್ಬಂದಿಗಳಿಂದ ಸಂಸ್ಥೆಯಲ್ಲಿಯೇ ಮುಂದುವರಿಸುವಂತೆ ಕೋರಿ ಯಾವುದೇ ಲಿಖಿತ ಮನವಿಯು ಸ್ವೀಕರಿಸದೇ ಇದ್ದಲ್ಲಿ. ಆ ಎಲ್ಲ ಸಿಬ್ಬಂದಿಗಳನ್ನು ಈ ಸಂಸ್ಥೆಯಿಂದ ಬಿಡುಗಡೆಗೊಳಿಸಲು ಕ್ರಮವಹಿಸಬೇಕು. ಆದ್ದರಿಂದ ಈ ವಿಷಯವನ್ನು ಸಂಬಂಧಿಸಿದ ಎಲ್ಲ ಸಿಬ್ಬಂದಿಗಳ ಗಮನಕ್ಕೆ ತಪ್ಪದೇ ತರುವಂತೆ ಹಾಗೂ ಈ ಕುರಿತು ಈ ಕಚೇರಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸಿಪಿಎಂ ಸೂಚಿಸಿದ್ದಾರೆ.

ವರ್ಗಾವಣೆ ಆದವರ ಪಟ್ಟಿ ಇಲ್ಲಿದೆ ನೋಡಿ….
Related

 










