NEWSನಮ್ಮಜಿಲ್ಲೆನಮ್ಮರಾಜ್ಯ

BMTC ದೀಪಾಂಜಲಿನಗರ ಘಟಕ-16: ಬೋನಸ್‌, ಸರಿಯಾಗಿ ವೇತನ ಕೊಡುತ್ತಿಲ್ಲ ಅಂತ ದಿಢೀರ್‌ ಪ್ರತಿಭಟನೆಗಿಳಿದ ಚಾಲಕರು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮೊನ್ನೆತಾನೆ ದೀಪಾವಳಿ ಹಬ್ಬಕ್ಕೆ ಬೋನಸ್‌ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲೆಕ್ಟ್ರಿಕ್‌ ಬಸ್‌ ಚಾಲಕರು ಯಲಹಂಕ ಮತ್ತು ಜಯನಗರ ಡಿಪೋಗಳಲ್ಲಿ ಪ್ರತಿಭಟನೆ ನಡೆಸಿದ್ದರು.

ಈ ಪ್ರತಿಭಟನೆ ಕಾವು ಇಳಿಯುವ ಮುನ್ನವೇ ಇಂದು ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ ಘಟಕ 16ರ ಎಲೆಕ್ಟ್ರಿಕ್‌ ಬಸ್‌ ಚಾಲನಾ ಸಿಬ್ಬಂದಿ ಪ್ರತಿಭಟನೆ ಮಾಡುತ್ತಿದ್ದಾರೆ.

ನಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಪ್ರಮುಖವಾಗಿ ಟ್ರಾಫಿಕ್ ಜಾಮ್ ಹೆಚ್ಚಾಗಿರೂ ಕೂಡ ಎಲ್ಲ ಟ್ರಿಪ್‌ಗಳನ್ನು ಪೂರ್ಣಗೊಳಿಸಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ. ಈ ಟ್ರಾಫಿಕ್‌ ಜಾಮ್‌ನಲ್ಲಿ ನಾವು ಹೇಗೆ ಎಲ್ಲ ಟ್ರಿಪ್‌ಗಳನ್ನು ಮಾಡಲಾಗುತ್ತದೆ. ಇದು ಸಾಧ್ಯವಿಲ್ಲ ಎಂದು ಬಸ್‌ಗಳನ್ನು ಡಿಪೋದಲ್ಲೇ ನಿಲ್ಲಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಇನ್ನು ದೀಪಾವಳಿ ಹಬ್ಬಕ್ಕೆ ಬೋನಸ್ ಕೊಟ್ಟಿಲ್ಲ ನಮಗೆ ಕೊಡಬೇಕಿರುವ ಬೋನಸ್‌ ಕೊಡುವವರೆಗೂ ನಾವು ಡ್ಯೂಟಿಗೆ ಹೋಗುವುದಿಲ್ಲ ಎಂದು ಪಟ್ಟುಹಿಡಿದು ಕುಳಿತ್ತಿದ್ದಾರೆ.

ಈ ವೇಳೆ ಗುತ್ತಿಗೆದಾರರ ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪ್ರತಿಭಟನೆ ನಿರತ ಚಾಲಕರಲ್ಲಿ ಬೋನಸ್‌ ಕೊಡುವುದಕ್ಕೆ ಸಮಯಕೊಡಿ, ಇನ್ನು ಟ್ರಿಪ್‌ ಮಾಡುತ್ತಿರುವುದಕ್ಕೆ ಆಗುತ್ತಿರುವ ಸಮಸ್ಯೆ ಬಗ್ಗೆ ನಾವು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಮ್ಮವರೊಂದಿಗೆ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಮೊನ್ನೆ ಇದೇರೀತಿ ಬೋನಸ್ ಮತ್ತು ಸರಿಯಾಗಿ ವೇತನ ಕೊಡುತ್ತಿಲ್ಲ ಎಂದು ಯಲಹಂಕ ಮತ್ತು ಜಯನಗರ  ಡಿಪೋಗಳಲ್ಲೂ ಎಲೆಕ್ಟ್ರಿಕ್‌  ಬಸ್‌ ಚಾಲಕರು ಡಿಪೋದಿಂದ ಹೊರಗೆ ಬಸ್‌ ತೆಗೆಯದೆ ತಮ್ಮ ಆಕ್ರೋಶ ಹೊರಹಾಕಿದ್ದರು.

ಬೋನಸ್ ಕೊಡೋವರೆಗೂ ನಾವು ಬಸ್ ತೆಗೆಯಲ್ಲ ಎಂದು ಪಟ್ಟು ಹಿಡಿದಿದ್ದರ ಪರಿಣಾಮ, ಬಸ್‌ಗಳು ಡಿಪೋದಲ್ಲಿ ನಿಂತಿತ್ತವು. ಎಲೆಕ್ಟ್ರಿಕ್‌ ಬಸ್ ಚಾಲಕರು ಗುತ್ತಿಗೆದಾರರ ಸಂಸ್ಥೆ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.

ಯಲಹಂಕ ಮತ್ತು ಜಯನಗರದಲ್ಲೂ ಗುತ್ತಿಗೆದಾರರ ವ್ಯವಸ್ಥಾಪಕರು ಬೋನಸ್‌ ಕೊಡುವುದಕ್ಕೆ ಕಾಲವಕಾಶ ಕೇಳಿ ಮನವಿ ಮಾಡಿದ ಬಳಿಕ ಪ್ರತಿಭಟನಾ ನಿರತರು ಡ್ಯೂಟಿಗೆ ಮರಳಿದ್ದರು.

ಇನ್ನು ಇಂದು ಬಿಎಂಟಿಸಿ ಘಟಕ 16ರಲ್ಲಿ ಚಾಲಕರು ಬೋನಸ್‌ ಕೊಟ್ಟಿಲ್ಲ, ವೇತನ ಸರಿಯಾಗಿ ಕೊಡುತ್ತಿಲ್ಲ ಎಂದು ಪ್ರತಿಭಟನೆಗಿಳಿದ ಪರಣಾಮ ಕೆಲ ಭಾಗದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

Megha
the authorMegha

Leave a Reply

error: Content is protected !!