ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಿಳಿಯಲಿವೆ 10 ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳು. ಈ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‌ಗಳ ಖರೀದಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹೀಗಾಗಿ ಈ ಬಸ್‌ಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಟೆಂಡರ್ ಪೂರ್ಣಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಡಬಲ್ ಡೆಕ್ಕರ್ ಬಸ್‌ಗಳಿಗೆ ಅಂಡರ್‌ಪಾಸ್ ಮತ್ತು ಇತರ ಅಡೆತಡೆಗಳಲ್ಲಿ ಸಂಚರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದಕ್ಕಾಗಿ ಈಗಾಗಲೇ ಐದುಮಾರ್ಗ ರೂಪಿಸಲಾಗಿದೆ. ಈ ಡಬಲ್ ಡೆಕ್ಕರ್ ಬಸ್‌ಗಳಿಗೆ ಬಿಎಂಟಿಸಿ ಬಸ್ನ ಬಣ್ಣವನ್ನೇ ಅಂತಿಮಗೊಳಿಸಲಾಗಿದೆ. ಆದರೆ ಡಬಲ್ ಡೆಕ್ಕರ್ ಬಸ್ ವಿನ್ಯಾಸದ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.
ಇನ್ನು ಜಪಾನ್ ಡಬಲ್ ಡೆಕ್ಕರ್ ಬಸ್ ಮಾದರಿಯನ್ನು ನಮ್ಮ ಆಪ್ತರು ಕಳಿಸಿದ್ದು, ಅದನ್ನು ಸಹ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಕಳಿಸಿದ್ದೇನೆ ಎಂದು ಸಚಿವರು ವಿವರಿಸಿದ್ದಾರೆ.
ಇದಲ್ಲದೆ 120 ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಬಸ್‌ಗಳಲ್ಲಿ ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್, ಪ್ಯಾಸೆಂಜರ್ ಡಿಸ್‌ಪ್ಲೇ ಬೋರ್ಡ್‌ಗಳು, ಸಿಸಿಟಿವಿ ವ್ಯವಸ್ಥೆಗಳು ಮತ್ತು ಪ್ಯಾನಿಕ್ ಬಟನ್‌ಗಳು ಇತ್ಯಾದಿಗಳನ್ನು ಅಳವಡಿಸಲಾಗಿದೆ. ಫೆಬ್ರವರಿ 13 ರಂದು ಟೆಂಡರ್ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
2001ರ ವೇಳಗೆ ಬೆಂಗಳೂರಿನಲ್ಲಿ ಬಿಎಂಟಿಸಿಯ ಜಂಟಿ ವಾಹನಗಳು ಕಾರ್ಯಾಚರಿಸುತ್ತಿದ್ದವು. ಆದರೆ, ಅವುಗಳು ತುಂಬ ಉದ್ದವಾಗಿದ್ದರಿಂದ ರಾಜದಧಾನಿ ರಸ್ತೆಗೆ ಹೊಂದಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ದಶಕದ ಹಿಂದೆಯೇ ನಿಲ್ಲಿಸಲಾಗಿದೆ.
ಇನ್ನು 2001ರ ಹಿಂದೆಯೇ ಡೆಕ್ಕರ್ ಬಸ್ಗಳನ್ನು ಬಿಎಂಟಿಸಿ ಹೊಂದಿತ್ತು. ಆದರೆ, ಅವುಗಳಲ್ಲಿ ಹೆಚ್ಚಿನ ಜನ ಪ್ರಯಾಣ ಮಾಡಲಿಲ್ಲ ಮತ್ತು ಈ ಬಸ್‌ಗಳು ಅಂಡರ್‌ಪಾಸ್ ಮತ್ತು ಇತರ ಅಡೆತಡೆಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣದಿಂದ ನಿಲ್ಲಿಸಲಾಗಿತ್ತು. ಆದರೆ, ಮತ್ತೆ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಸಂಬಂಧ ಸಚಿವರು ಉತ್ಸುಕರಾಗಿದ್ದಾರೆ.