ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಬೆಂಗಳೂರು: ಈಗ ವೇಗಧೂತ ಎಕ್ಸ್‌ಪ್ರೆಸ್ ಬಸ್ ಸೇವೆ ರಾಜ್ಯದಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ಸೇವೆ ಲಭ್ಯವಿದೆ. ನಗರದ ವಿವಿಧ ಮಾರ್ಗಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕಡಿಮೆ ನಿಲುಗಡೆಯ ವೇಗಧೂತ ಬಿಎಂಟಿಸಿ ಬಸ್ ಬಿಡಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿಎಂಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ಸೇವೆಗೆ ಇದೇ ಜೂನ್ 20ರಂದು ಚಾಲನೆ ನೀಡಿದ್ದು, ಇದೀಗ ಈ ಬಸ್‌ಗಳಿಗೆ ಹತ್ತುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವತಿಯಿಂದ ನಗರದ ಪ್ರಮುಖ ಮಾರ್ಗಗಳ ಸಂಚಾರಕ್ಕಾಗಿ 5 ವೇಗಧೂತ ಎಕ್ಸ್‌ಪ್ರೆಸ್ ಬಸ್‌ಗಳನ್ನು ಬಿಡುಗಡೆ ಮಾಡಸಲಾಗಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗುತ್ತಿದೆ. ಎಲ್ಲ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್‌ನಿಂದಲೇ ಹೊರಡುವುದಿಲ್ಲ. ಬದಲಾಗಿ ಬೇರೆ ಬೇರೆ ನಿಲ್ದಾಣಗಳಿಂದ ಉದ್ದೇಶಿತ ಸ್ಥಳಕ್ಕೆ ಜನರನ್ನು ತಲುಪಿಸುತ್ತಿವೆ.
ಉದಾಹರಣೆಗೆ ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ನೆಲಮಂಗಲ ವರೆಗೆ (Ex 285c) ಬಸ್ ಬಿಡಲಾಗಿದೆ. ಇದರಲ್ಲಿ ನೀವು ಈ ಬಸ್ ಏರಿದರೆ ಕೇವಲ ಐದು ಸ್ಟಾಪ್‌ಗಳನ್ನು ಮಾತ್ರವೇ ನೀಡುತ್ತದೆ. ಮಲ್ಲೇಶ್ವರಂ ಸೆಂಟ್ರಲ್, 18ನೇ ಕ್ರಾಸ್, ಗೋವರ್ಧನ್ ಟಾಕೀಸ್, ಗೊರಗುಂಟೆ ಪಾಳ್ಯ ಮತ್ತು ಅರಿಶಿಣಕುಂಟೆ ಟೋಲ್ ಹೀಗೆ ಅತೀ ಕಡಿಮೆ ನಿಲುಗಡೆ ಮೂಲಕ ವೇಗದ ಸಾರಿಗೆ ಸೇವೆ ಜನರಿಗೆ ಲಭ್ಯವಾಗಿದೆ. ಇದರಿಂದ ಜನರಿಗೆ ಸಮಯ ಉಳಿತಾಯವಾಗುತ್ತದೆ.
ಟಿಕೆಟ್, ಮಾಸಿಕ ಪಾಸ್‌ಗೆ ಎಷ್ಟು?: ನಿಗದಿತ ನಿಲುಗಡೆಯಿಂದ ಸಮಯ ಉಳಿತಾಯವಾಗುತ್ತದೆ. ಅಲ್ಲದೇ ಒಂದು ಕಡೆ ಹತ್ತಿದರೆ ಗಮ್ಯಸ್ಥಾನ ಕೆಲವೇ ನಿಮಿಷಗಳಲ್ಲಿ ಬಂದು ಬಿಡುತ್ತದೆ. ಟಿಕೆಟ್ ದರ ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ನೆಲಮಂಗಲ ವರೆಗೆ ಒಬ್ಬರಿಗೆ 46 ರೂಪಾಯಿ ಟಿಕೆಟ್ ಶುಲ್ಕ ಇದೆ. ಇದೇ ರೀತಿ ಇನ್ನುಳಿದ ಬಸ್‌ಗಳಿಗೂ ಟಿಕೆಟ್ ಶುಲ್ಕ ವಿಧಿಸಲಾಗಿದೆ. ನೀವು ಮಾಸಿಕ ಪಾಸ್ ಬೇಕಾದಲ್ಲಿ ನೀವು 1500 ರೂಪಾಯಿ ಭರಿಸಬೇಕಿದೆ. ಟೋಲ್ ಮಾರ್ಗಗಳಲ್ಲಿ ಅನ್ವಯಿಸುವ ದರವನ್ನು ಪಾವತಿಸುವುದು ಕಡ್ಡಾಯ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಬನಶಂಕರಿ-ಅತ್ತಿಬೆಲೆ ( ಬಸ್ ಸಂಖ್ಯೆ Ex 600F), ಬನಶಂಕರಿ ಟಿಟಿಎಂಸಿ-ಹೆರೋಹಳ್ಳಿ (Ex 213v), ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ಅತ್ತಿಬೆಲೆ (Ex KBS 3!), ಮೆಜೆಸ್ಟಿಕ್ ಕೆಂಪೇಗೌಡ ಬಸ್‌ನಿಲ್ದಾಣ-ದೇವನಹಳ್ಳಿವರೆಗೆ (Ex 298M) ವೇಗಧೂತ ಎಕ್ಸ್‌ಪ್ರೆಸ್ ಬಸ್‌ಗಳ ಕಾರ್ಯಾಚರಣೆ ಆರಂಭವಾಗಿದೆ.

ಈ ಮೊದಲು ಮೆಜೆಸ್ಟಿಕ್ ಅಥವಾ ಬೆಂಗಳೂರು ಹೃದಯಭಾಗದಿಂದ ದೂರದ ಗಮ್ಯ ಸ್ಥಾನಗಳಿಗೆ ಹೋಗಬೇಕಾದರೆ ಪ್ರಯಾಣಿಕರಿಗೆ ಹೆಚ್ಚಿನ ಸಮಯ ಹಿಡಿಯುತ್ತಿತ್ತು. ಅಲ್ಲದೇ ಹೆಚ್ಚಿನ ನಿಲ್ದಾಣ ನಿಲುಗಡೆಗೆ ಜನ ಹೈರಾಣಾಗುತ್ತಿದ್ದರು. ಆದರೆ ಈಗ ವಿಶೇಷ ಬಸ್ ಬಿಡುಗಡೆಯಿಂದಾಗಿ ಕಡಿಮೆ ಸಮಯದಲ್ಲಿ ಒಂದೇ ಬಸ್‌ನಲ್ಲಿ ಗಮ್ಯಸ್ಥಳ ತಲುಪುತ್ತಿದ್ದಾರೆ. ಹೀಗಾಗಿ ಈ ಬಿಎಂಟಿಸಿ ವೇಗಧೂತ ಎಕ್ಸ್‌ಪ್ರೆಸ್ ಬಸ್‌ಗಳಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ.
Related
