NEWSನಮ್ಮಜಿಲ್ಲೆನಮ್ಮರಾಜ್ಯ

BMTC: ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶಿವಕುಮಾರ್‌ ನೇಮಕ- ಸರ್ಕಾರದ ಆದೇಶ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್‌ ಅಧಿಕಾರಿ ಕೆ.ಬಿ.ಶಿವಕುಮಾರ್‌ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

2024 ಜನವರಿ 10ರಂದು ಬಿಬಿಎಂಪಿಯಲ್ಲಿ ವಿಶೇಷ ಆರ್ಥಿಕ ಆಯುಕ್ತರಾಗಿದ್ದ ಆರ್.ರಾಮಚಂದ್ರನ್‌ ಎಂಡಿ ಆಗಿ ಅಧಿಕಾರಿ ವಹಿಸಿಕೊಂಡಿದ್ದರು.

ಅಂದು ನಿಗಮದ ನಿಕಟಪೂರ್ವ ಎಂಡಿ, ಹಿರಿಯ ಐಎಎಸ್‌ ಅಧಿಕಾರಿ ಜಿ.ಸತ್ಯವತಿ ಅವರು ಗೂಗುಚ್ಛ ನೀಡುವ ಮೂಲಕ ರಾಮಚಂದ್ರನ್‌ ಅವರನ್ನು ಸ್ವಾಗತಿಸಿ ತಮ್ಮ ಅಧಿಕಾರಿರನ್ನು ಹಸ್ತಾಂತರಿಸಿದರು.

ಅಂದು ಕೂಡ ಒಂದೂವರೆ ವರ್ಷದಿಂದ ನಿಗಮದ ಎಂಡಿಯಾಗಿದ್ದ ಸತ್ಯವತಿ ಅವರಿಗೆ ಸದ್ಯ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿತ್ತು. ಇಂದು ಕೂಡ ನಿಗಮದ ಎಂಡಿ ರಾಮಚಂದ್ರನ್‌ ಅವರಿಗೂ ಕೂಡ ಯಾವುದೇ ಹುದ್ದೆ ತೋರಿಸದೇ ವರ್ಗ ಮಾಡಲಾಗಿದೆ.

ಆದರೆ, ನಿಗಮದಲ್ಲಿ ಕಳಹಂತತ ನೌಕರರ ಬಗ್ಗೆ ಸತ್ಯವತಿ ಅವರು ಅಪಾರ ಕಾಳಜಿ ಹೊಂದಿದ್ದರು. ಹೀಗಾಗಿ ಅವರ ವಿರುದ್ಧ ಕೆಲ ಸಂಘಟನೆಗಳ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಪ್ರಸ್ತುತ ನಿಗಮದ ಎಂಡಿ ರಾಮಚಂದ್ರನ್‌ ಅವರು ನೌಕರರಿಗೆ ಒಳ್ಳೆಯದಾಗುವಂತ ಯಾವುದೆ ಹೇಳಿಕೊಳ್ಳುವಂತಹ ಕೆಲಸ ಮಾಡದ ಪರಿಣಾಮ ಯಾವುದೇ ಹುದ್ದೆ ಇಲ್ಲದೆ ವರ್ಗಾವಣೆ ಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ಒಬ್ಬ ನೌಕರರ ಪರವಾಗಿ ನಿಲ್ಲುವ ಅಧಿಕಾರಿಯನ್ನು ನೌಕರರ ಪರವಾದ ಸಂಘಟನೆಗಳೇ ವರ್ಗಾವಣೆ ಮಾಡಿಸುವ ಕುತಂತ್ರ ಬುದ್ಧಿ ತೋರಿಸಿದ್ದವು ಅಂದು. ಆದರೆ ಇಂದು ನೌಕರರ ಸಮಸ್ಯೆಗೆ ಸ್ಪಂದಿಸದೆ ವರ್ಗಾವಣೆಯಾಗಿದ್ದಾರೆ ಎಂದರೆ ಏಣು ಹೇಳಬೇಕೋ ಗೊತ್ತಾಗುತ್ತಿಲ್ಲ.

ಒಟ್ಟಾರೆ ನೂತನ ಎಂಡಿಯಾಗಿ ಬರುತ್ತಿರುವ ಐಎಎಸ್‌ ಅಧಿಕಾರಿ ಕೆ.ಬಿ.ಶಿವಕುಮಾರ್‌ ಅವರ ಮೇಲೆ ಬಿಎಂಟಿಸಿ ನೌಕರರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಪ್ರತಿ ತಿಂಗಳ ಮೊದಲನೇ ದಿನವೇ ವೇತನ ಆಗಬೇಕು. ಡಿಪೋಗಳಲ್ಲಿ ಆಗುತ್ತಿರುವ ಕಿರುಕುಳ ಮತ್ತು ಲಂಚಾವತಾರವನ್ನು ನಿಲ್ಲಿಸಬೇಕು ಎಂಬುವುದು ಸೇರಿದಂತೆ ಹಲವು ನಿರೀಕ್ಷೆಗಳನ್ನು ಪಟ್ಟಿಯನ್ನೇ ಇಟ್ಟುಕೊಂಡಿದ್ದಾರೆ.

ಇವರ ಜತೆಗೆ ನಿನ್ನೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಡಾ. ಕೆ.ವಿ. ತ್ರಿಲೋಕಚಂದ್ರ ಅವರನ್ನು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದ್ದು, ಇದೇ ಸ್ಥಾನದಲ್ಲಿದ್ದ ಸಲ್ಮಾ ಕೆ. ಫಾಹಿಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆಯಾದರೂ ಸ್ಥಳ ನಿಯುಕ್ತಿಗೊಳಿಸಿಲ್ಲ.

ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆಯ ಆಯುಕ್ತ ಶಿವಕುಮಾರ್ ಕೆ. ಬಿ.ಅವರನ್ನು ಬೆಂಗಳೂರು ಮಹಾನಗರ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ವರ್ಗಾಯಿಸಲಾಗಿದೆ. ಇವರು ಆರೋಗ್ಯ ಇಲಾಖೆಯೊಂದಿಗೆ ಬಿಎಂಆರ್‌ಸಿಎಲ್ ಎಂಡಿ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುತ್ತಿದ್ದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆರೋಗ್ಯ ಮತ್ತು ಶಿಕ್ಷಣ) ಸುರಲ್ಕ‌ರ್ ವಿಕಾಸ್‌ ಕಿಶೋ‌ರ್ ಅವರನ್ನು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿ ನೇಮಿಸಲಾಗಿದ್ದು, ಅವರಿಗೆ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. ಇದೇ ಹುದ್ದೆಯಲ್ಲಿ ಈ ಹಿಂದೆ ಡಾ. ಕೆ.ವಿ. ತ್ರಿಲೋಕಚಂದ್ರ ಅವರಿದ್ದರು.

ಬೆಂಗಳೂರು ಮಹಾನಗರ ಸಾರಿಗೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಮಚಂದ್ರನ್ ಆರ್. ಅವರನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಸ್ಥಳ ನಿಯುಕ್ತಿಗೊಳಿಸಿಲ್ಲ.

Deva
the authorDeva

Leave a Reply

error: Content is protected !!