NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಮಹಿಳೆ ಮೇಲೆ ಬಸ್‌ ನುಗ್ಗಿಸಲು ಯತ್ನ ಪ್ರಕರಣ- 17ನೇ ಘಟಕದ ಚಾಲಕನ ಅಮಾನತಿಗೆ ತಡೆ ನೀಡಿದ ಹೈ ಕೋರ್ಟ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಅಡ್ಡಗಟ್ಟಿದ ಮಹಿಳೆ ಮೇಲೆ ಬಸ್‌ ನುಗ್ಗಿಸಲು ಯತ್ನಿಸಿದ ಆರೋಪದಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಚಾಲಕನನ್ನು ಅಮಾನತು ಮಾಡಿದ ಆದೇಶಕ್ಕೆ ಹೈ ಕೋರ್ಟ್‌ ಇಂದು ತಡೆನೀಡಿದೆ.

ಬಿಎಂಟಿಸಿ 17ನೇ ಘಟಕದ ಚಾಲಕ ಪ್ರಶಾಂತ್‌ ಎಂಬುವರನ್ನು ಸಂಸ್ಥೆ ಜೂನ್‌ 1ರಂದು ಅಮಾನತು ಮಾಡಿತ್ತು. ಈ ಅಮಾನತು ಮಾಡಿರುವುದನ್ನು ಪ್ರಶ್ನಿಸಿ ಚಾಲಕ ಪ್ರಶಾಂತ್‌ ಹೈ ಕೋರ್ಟ್‌ ಮೆಟ್ಟಿಲೇರಿದ್ದರು, ಈ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು ಅವರು ವಕ್ಕಾಲತ್ತು ವಹಿಸಿದ್ದರು.

ಇಂದು (ಜು.7) ಪ್ರಕರಣ ಹೈಕೋರ್ಟ್ ನ್ಯಾಯಮೂರ್ತಿ ಅನಂತ್‌ ರಾಮನಾಥ್‌ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠದ ಮುಂದೆ ಬಂದಿದೆ. ಈ ವೇಳೆ ವಿಜಯವಾಡದಲ್ಲಿರುವ ವಕೀಲ ಎಚ್‌.ಬಿ.ಶಿವರಾಜು ಅವರು ಕಾನ್ಫರೆನ್ಸ್‌ ಮೂಲಕ ಚಾಲಕ ಪ್ರಶಾಂತ್‌  ಅವರ ಪರ ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿಗಳು ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಈ ಬಸ್ ಅಡ್ಡಗಟ್ಟಿದ ಮಹಿಳೆ ಮೇಲೆ ಚಾಲಕ ಬಸ್‌ ನುಗ್ಗಿಸಲು ಯತ್ನಿಸಿದ ಪ್ರರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ( ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಒಂದು ಕೇಸ್‌ ಹಾಗೂ ಸಂಚಾರ ಠಾಣೆಯಲ್ಲಿ ಒಂದು ಕೇಸ್‌ ಅಂದರೆ ಎರಡು ಕೇಸ್‌ಗಳು ಪ್ರತ್ಯೇಕವಾಗಿ ದಾಖಲಾಗಿದ್ದು, ಅದರಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ದಾಖಲಾಗಿದ್ದ ಕೇಸ್‌ಗೆ ಜೂನ್‌ 17ರಂದು ಮತ್ತು ಸಂಚಾರ ಠಾಣೆಯಲ್ಲಿ ದಾಖಲಾಗಿದ್ದ ಮತ್ತೊಂದು ಕೇಸ್‌ಗೆ ಜೂನ್‌ 18ರಂದು ಹೈ ಕೋರ್ಟ್‌ ತಡೆಯಾಜ್ಞೆ ನೀಡಿದೆ.

ಇನ್ನು ಇದರ ನಡುವೆ ಬಿಎಂಟಿಸಿ ಕೂಡ ಚಾಲಕನ ಸೇವೆಯಿಂದ ಅಮಾನತು ಮಾಡಿತ್ತು. ಆ ಅಮಾನತು ಆದೇಶಕ್ಕೆ  ಇಂದು ಹೈ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಒಟ್ಟಾರೆ, ಚಾಲಕ ಪ್ರಶಾಂತ್‌ಗೆ ಒಂದೇ ವಿಷಯಕ್ಕೆ ಸಂಬಂಧಪಟ್ಟ ಆರೋಪದಡಿ ಅಮಾನತು  ಮತ್ತು  ಎರಡು ಎಫ್‌ಐಆರ್‌ ಆಗಿರುವುದು ಸೇರಿ  ಒಟ್ಟಾರೆ ಮೂರು ಕೇಸ್‌ಗಳಿಗೂ ಹೈಕೋರ್ಟ್‌ನಲ್ಲಿ ಸ್ಟೇ ಸಿಕ್ಕಿದೆ. ಇದು ವಕೀಲರ ವೃತ್ತಿ ಜೀವನದಲ್ಲೂ ಈರೀತಿ ಒಂದೇ ವಿಷಯದ ಮೂರು ಕೇಸ್‌ಗಳಿಗೂ ಸ್ಟೇ ಸಿಕ್ಕಿರುವುದು ಇದೇ ಮೊದಲು.

ಘಟನೆ ಏನು?: ಮೇ 23ರಂದು ಸಂಜೆ 5.40ಕ್ಕೆ ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ  ಬಿಎಂಟಿಸಿ ಬಸ್ ಚಾಲಕ ಮತ್ತು ಮಹಿಳೆ ನಡುವೆ ಕಿರಿಕ್ ಆಗಿತ್ತು. ರೊಚ್ಚಿಗೆದ್ದ ಆಕೆ ಬಸ್ ಚಾಲಕನ ಪ್ರಶ್ನೆ ಮಾಡಲು ಬಸ್ ಅಡ್ಡಗಟ್ಟಿದ್ದರು. ಆದರೆ ಡ್ರೈವರ್‌ ಹೆಚ್ಚಿಗೆ ಮಾತನಾಡದೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದ್ದರು. ಆದರೆ ಚಾಲಕನ ಬಗ್ಗೆ ತಪ್ಪಾಗಿ ತಿಳಿದುಕೊಂಡ ಜನ ಅಂದು ಚಾಲಕನ ನಡೆಯನ್ನು ವಿರೋಧಿಸಿದ್ದರು.

ಬಿಎಂಟಿಸಿ ಚಾಲಕ ಪ್ರಶಾಂತ್ ಆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಇದು ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ನಡೆದಿದ್ದು. ಅದಕ್ಕೂ ಮುಂಚೆ ಹಡ್ಸನ್ ಸಿಗ್ನಲ್‌ನಲ್ಲಿ ಟ್ಯಾಂಕರ್ ಹಾಗೂ ಬಿಎಂಟಿಸಿ ಬಸ್ ಮುಂದೆ ಲೇಡಿ ಕಾರು ಓಡಿಸಿಕೊಂಡು ಬಂದರು. ಆಗ ಲೇಡಿಗೆ ಟ್ಯಾಂಕರ್ ಚಾಲಕ ಬೈದಿದ್ದರು.

ನಂತರ ಕಾರ್ಪೋರೇಷನ್ ಸಿಗ್ನಲ್‌ನಲ್ಲಿ ಜನ ಹತ್ತಿಸಿಕೊಳ್ಳುವಾಗ ನಾನು ನಿಮ್ಮ ಜಗಳದಲ್ಲಿ ನಮಗೆ ಒಂದು ಸಿಗ್ನಲ್ ಹೋಯ್ತು ಅಂತಾ ಹೇಳಿದೆ. ಅಷ್ಟಕ್ಕೆ ಆಕೆ ಕಾರನ್ನು ಬಸ್‌ ಮುಂದಕ್ಕೆ ಹೋಗದ ಹಾಗೆ ಅಡ್ಡಾದಿಡ್ಡಿ ಚಾಲನೆ ಮಾಡಿಕೊಂಡು ಹೋದರು.

ಕಬ್ಬನ್ ಪೇಟೆ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದಾಗ ನನಗೆ ಅವಾಚ್ಯ ಶಬ್ದದಿಂದ ಬೈದು ನನ್ನ ‌ಮೇಲೆ ‌ಹಲ್ಲೆ ಮಾಡಲು ಮುಂದಾದ್ರು. ಬಸ್‌ನಿಂದ ಕೆಳಗೆ ಇಳಿ ಅಂತಾ ಅವಾಜ್ ಕೂಡ ಹಾಕಿದ್ರು. ನನ್ನ ತಪ್ಪು ಇಲ್ಲದೇ ನಾನು ಯಾಕೆ ಕೆಳಗೆ ಇಳಿಯಬೇಕು ಅಂತ ನಾನು ಇಳಿದಿಲ್ಲ. ಈ ವೇಳೆ ಎಡಭಾಗಕ್ಕೆ ಬಸ್ ಚಲಾಯಿಸಿದೇ ಹೊರತು ನಾನು ಆಕೆಯ ಮೇಲೆ ನುಗ್ಗಿಸಲು ಪ್ರಯತ್ನಿಸಿಲ್ಲ ಎಂದು ಹೇಳಿದ್ದರು.

ಅಂದು ನಡೆದ ಘಟನೆ ಸಂಬಂಧ ಜೂನ್‌ 1ರಂದು ಚಾಲಕ ಪ್ರಶಾಂತ್ ಅವರನ್ನು ಸಂಸ್ಥೆ ಅಮಾನತು ಮಾಡಿತ್ತು. ಆ ಅಮಾನತಿಗೆ ಇಂದು ಹೈ ಕೋರ್ಟ್‌ ತಡೆನೀಡಿ ಆದೇಶ ಹೊರಡಿಸಿದೆ.

ಈ ಪ್ರಕರಣದಕ್ಕೆ ಸಂಬಂಧಪಟ್ಟಂತೆ ವಕೀಲ ಶಿವರಾಜು ಅವರು ಈ ಮೊದಲೇ ವಕ್ಕಾಲತ್ತು ವಹಿಸಿದ್ದರಿಂದ ಸಾರಿಗೆ ನೌಕರ ಪ್ರಶಾಂತ್‌ ಪರವಾಗಿ ವಾದ ಮಂಡಿಸಿದ್ದಾರೆ. ಇನ್ನು ಇದನ್ನು ಬಿಟ್ಟು ಸಾರಿಗೆ ನೌಕರರಿಗೆ ಸಂಬಂಧಿಸಿದ ಯಾವುದೇ ಪ್ರಕರಣ ನಮ್ಮ ಬಳಿ ಇಲ್ಲ. ಮುಂದೆ ನೌಕರರಿಗೆ ಸಂಬಂಧಿಸಿದಂತೆ ನಾವು ವಕಾಲತ್ತು ವಹಿಸುವುದಿಲ್ಲ. ಈ ಸ್ಪಷ್ಟನೆಯನ್ನು ಏಕೆ ಕೊಡುತ್ತಿದ್ದೇನೆ ಎಂದರೆ ಕೇಸ್‌ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿ ಮತ್ತೆ ಪ್ರಶಾಂತ್‌ ಕೇಸ್‌ ನಡೆಸಿದ್ದೀರಲ್ಲ ಎಂದು ಕೆಲವರು ಪ್ರಶ್ನಿಸಬಹುದು, ಹಾಗಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ ಎಂದು ವಕೀಲರು ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!