
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮ ಅಧಿಕಾರಿಗಳು/ನೌಕರರಿಗೆ ಫೆಬ್ರವರಿ ತಿಂಗಳ ವೇತನ ಮಾ.1ನೇ ತಾರೀಖಿಗೆ ಕೊಡಬೇಕು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್.ರಾಮಚಂದ್ರನ್ ಫೆ.19ರಂದು ಆದೇಶ ಹೊರಡಿಸಿದ್ದರು.
ಆದರೆ, ಇಂದು ಸಂಜೆವರೆಗೂ ಕಾದು ನೋಡಿದ ನೌಕರರಿಗೆ ವೇತನ ಆಗಿಲ್ಲ. ಇದಕ್ಕೆ ಬಿಎಂಟಿಸಿ ಸಂಸ್ಥೆಯ ನೌಕರರಿಗೆ ವೇತನ ಹಾಕುತ್ತೇವೆ ಎಂದು ಕಲ್ಲರ್ ಕಲರ್ ಕಾಗೆ ಹಾರಿಸಿದ್ದಾರೆ… ಇಲ್ಲಿಯವರೆಗೆ ವೇತನ ಹಾಕಿಲ್ಲ… ಚಾತಕ ಪಕ್ಷಿಯಂತೆ ವೇತನಕ್ಕಾಗಿ ಕಾಯುತ್ತಿರುವ ಸಂಸ್ಥೆಯ ನೌಕರರು…
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ನೌಕರರು ಹೇಳಿಕೆ ನೀಡುತ್ತಿದ್ದು, ಅಲ್ಲದೆ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮಾಡಿದ ಆದೇಶವನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ ನೋಡಿ. ಅದೇ ನಾವು ಇಂಥ ತಪ್ಪು ಮಾಡಿದರೆ ಕೂಡಲೇ ಅಮಾನತು ಮಾಡಿ ಬಳಿಕ ಕಾರಣ ಎಂದು ನಮ್ಮನ್ನು ಅಮಾನತು ಮಾಡಿ ಬಿಡುತ್ತಿದ್ದರು ಕಿಡಿಕಾರಿದ್ದಾರೆ.
ಇನ್ನು ವ್ಯವಸ್ಥಾಪಕ ನಿರ್ದೇಶಕರು ಅಷ್ಟೇ ಅಲ್ಲ ಸಂಸ್ಥೆಯ ಆರ್ಥಿಕ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಕೂಡ ಫೆ.24ರಂದು ಕೂಡಲೇ ರಜೆ ಮಂಜೂರು ಮಾಡಿಸಿಕೊಂಡು ವೇತನ ಬಿಲ್ ಸಿದ್ಧಪಡಿಸುವಂತೆ ಸೂಚನೆ ನೀಡಿದ್ದರು. ಆದರೆ ಎಂಡಿ ಆದೇಶ ಹಾಗೂ ಮುಖ್ಯ ಲೆಕ್ಕಾಧಿಕಾರಿಯ ಸೂಚನೆಯನ್ನು ಬದಿಗೆ ಸರಿಸಿದ ಅಧಿಕಾರಿಗಳು ವೇತನ ಬಿಲ್ ಸಿದ್ಧಪಡಿಸುವುದಕ್ಕೆ ವಿಳಂಬ ಮಾಡಿದ್ದಾರೆ.
ಈ ಪರಿಣಾಮ ಸಂಸ್ಥೆಯ ನೌಕರರಿಗೆ ಮಾ.1ರಂದು ಆಗಬೇಕಿದ್ದ ವೇತನ ಮೂರು ದಿನಗಳ ಕಾಲ ಮುಂದಕ್ಕೆ ಹೋಗಿದೆ. ಅಲ್ಲದೆ ಸಂಸ್ಥೆಯಲ್ಲಿ ಮೇಲಧಿಕಾರಿಗಳ ಆದೇಶಕ್ಕೂ ಕಿಮ್ಮತ್ತಿಲ್ಲ ಎಂಬುವುದಕ್ಕೆ ಇದೇ ಸಾಕ್ಷಿ ಎಂದು ನೌಕರರು ಆರೋಪಿಸಿದ್ದಾರೆ.
ಇನ್ನು ಎಂಡಿ ಅವರು ಫೆ.19ರಂದು ಆದೇಶ ಹೊರಡಿಸಿದ್ದರೂ ವೇತನ ಬಿಲ್ ಸಿದ್ಧ ಮಾಡಿಕೊಳ್ಳದೆ ವಿಳಂಬ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇವರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದರೆ ಸಂಸ್ಥೆಯ ಮಾನ ಇಂದು ಹರಾಜಾಗುತ್ತಿರಲಿಲ್ಲ. ಜತೆಗೆ ಎಂಡಿ ಅವರಿಗೆ ಅವಮಾನವಾಗುತ್ತಿರಲಿಲ್ಲ ಎಂದು ನೌಕರರು ಹೇಳಿದ್ದಾರೆ.
ಅಲ್ಲದೆ ಸಂಸ್ಥೆಯಲ್ಲಿ ಈ ರೀತಿ ನಡೆದುಕೊಳ್ಳುವುದು ಅಧಿಕಾರಿ ವರ್ಗದವರಿಗೆ ಮಾಮೂಲಿಯಾಗಿದ್ದು ಹೇಳುವವರು ಇಲ್ಲ ಕೇಳುವವರು ಇಲ್ಲ ಎಂಬುದಕ್ಕೆ ಇದೇ ನಿದರ್ಶನ. ಆದರೆ ನೌಕರರಾದ ನಾವು ಮಾಡಿದಿರುವ ತಪ್ಪಿಗೂ ಕೂಡಲೇ ಶಿಕ್ಷೆ ಕೊಡುತ್ತಾರೆ. ಇದು ಸಂಸ್ಥೆಯಲ್ಲಿ ಇರುವ ಅವ್ಯವಸ್ಥೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ರೀತಿ ವೇತನ ಪಾವತಿಗೆ ವಿಳಂಬ ಮಾಡಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಕ್ರಮ ಕೈಗೊಂಡು ಮುಂದೆ ಈ ರೀತಿ ಅಸಡ್ಡೆ ತೋರಿದವರಿಗೆ ಏನಾಗುತ್ತದೆ ಎಂದುವುದನ್ನು ತೋರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲ ಘಟಕಗಳಲ್ಲಿ ಲೆಕ್ಕ ಪತ್ರ ಅಧಿಕಾರಿಗಳು ಫೆ. 28ರ ಒಳಗೆ ನೌಕರರ ಹಾಜರಾತಿಗಳನ್ನು ಮತ್ತು ಹಣಕಾಸುಗಳ ವಿವರಗಳನ್ನು ನಮೂದಿಸಲು ಆಗದ ಕಾರಣ ಇಂದು ಆಗಬೇಕಿದ್ದ ಸಂಬಳವು ಮಾ.4ಕ್ಕೆ ಹೋಗಿದೆ. ಇನ್ನು ಈ ರೀತಿ ವಿಳಂಬ ಮಾಡಿರುವವರ ವಿರುದ್ಧ ಕ್ರಮಕ್ಕೆ ನಾವು ಸಚಿವರ ಗಮನಕ್ಕೆ ತರುತ್ತೇವೆ ಎಮದು ಕೇಂದ್ರ ಕಚೇರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಂಟಿಸಿ MD ಯವರು ತನ್ನ ಆದೇಶವನ್ನು ಜಾರಿಗೆ ತರಲು ಅಸಡ್ಡೆ ಮಾಡಿದ ಅಧಿಕಾರಿಗಳನ್ನು ಕೂಡಲೇ ಶಿಕ್ಷೆಗೆ ಒಳಪಡಿಸುವ ತಾಕತ್ತು ತೋರಿಸಬೇಕು