NEWSನಮ್ಮಜಿಲ್ಲೆನಮ್ಮರಾಜ್ಯ

BMTC: ನಾರಿಯರ ಮೀಸಲು ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿದ ಪುರುಷರು- 7 ಲಕ್ಷ ರೂ. ದಂಡ ವಸೂಲಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಕ್ತಿ ಯೋಜನೆ ಜಾರಿಗೆ ಬಂದ ನಂತರದಲ್ಲಿ ಬಸ್​ ತುಂಬಿ ತುಳುಕುತ್ತಿದ್ದು, ಮಹಿಳೆಯರ ಮಧ್ಯೆ ಪುರುಷರ ಪಾರುಪತ್ಯ ನಡೆಯುತ್ತಿಲ್ಲ ಎನ್ನುವಂತಾಗಿದೆ. ಆದ್ರೆ, ಬಿಎಂಟಿಸಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕರಣ ಪುರಷರು ಆ ಒಂದು ವಿಚಾರಕ್ಕೆ ಮಹಿಳೆಯರನ್ನೂ ಹಿಂದಿಕ್ಕಿದ್ದಾರೆ.

ಕಾಂಗ್ರೆಸ್​​ ಸರ್ಕಾರದ ಪ್ರಮುಖ ಗ್ಯಾರಂಟಿ ಶಕ್ತಿ ಯೋಜನೆ. ನಾರಿಯರು ಶಕ್ತಿಯನ್ನ ನೆಚ್ಚಿಕೊಂಡು ಊರು ಸುತ್ತಿದ್ದೇ ಸುತ್ತಿದ್ದು, ಬಸ್​ಗಳು ತುಂಬಿ ತುಳುಕಿದ್ದೇ ತುಳುಕಿದ್ದು. ಈ ನಡುವೆ ನಾವೂ ಫ್ರೀಯಾಗಿ ಹೋಗ್ತೀವಿ, ಹೆಣ್ಮಕ್ಕಳ ಸೀಟ್‌ನಲ್ಲೂ ಕೂರ್ತೀವಿ ಅಂತ ಸಂಚಾರ ಮಾಡಿದ ಪುರುಷರಿಗೆ ಬಿಎಂಟಿಸಿ ಭರ್ಜರಿ ದಂಡಾಸ್ತ್ರ ಪ್ರಯೋಗಿಸಿದೆ.

ಹೌದು! ಬಿಎಂಟಿಸಿ ನವೆಂಬರ್‌ನಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ವಿಧಿಸಿದ ದಂಡದಿಂದ ಬೊಕ್ಕಸಕ್ಕೆ 6,68,610 ರೂ. ಬಂದಿದೆ. ಮಹಿಳಾ ಪ್ರಯಾಣಿಕರಲ್ಲಿ ಮೀಸಲಿರಿಸಿದ್ದ ಸೀಟ್‌ನಲ್ಲಿ ಪ್ರಯಾಣಿಸಿದ್ದ 438 ಪುರುಷರಿಗೂ ದಂಡ ಹಾಕಲಾಗಿದೆ. 16,421ಟ್ರಿಪ್‌ಗಳಲ್ಲಿ ತನಿಖಾಸಿಬ್ಬಂದಿಗಳು ತಪಾಸಣೆ ಮಾಡಿದ್ದು, ಈ ವೇಳೆ 3,767ಮಂದಿ ಟಿಕೆಟ್ ರಹಿತ ಪ್ರಯಾಣ ಮಾಡಿರುವುದು ಪತ್ತೆಯಾಗಿದೆ.

ಇದೇ ವೇಳೆ ಬೇಜವಾಬ್ದಾರಿ ತೋರಿದ ಆರೋಪದಡಿ 1,062 ನಿರ್ವಾಹಕರ ವಿರುದ್ಧವೂ ನಿಗಮ ಮೆಮೋ ನೀಡುವ ಜತೆಗೆ ದಂಡಾಸ್ತ್ರ ಪ್ರಯೋಗ ಮಾಡಿದೆ. ಮಹಿಳಾ‌ ಸೀಟ್‌ನಲ್ಲಿ ಕುಳಿತ ಪ್ರಯಾಣಿಕರಿಂದ 43,800ರೂ ದಂಡ ವಸೂಲಿ ಮಾಡಲಾಗಿದೆ. ಈ ಮೂಲಕ ನವೆಂಬರ್ ತಿಂಗಳಲ್ಲಿ ಬಿಎಂಟಿಸಿ ಬೊಕ್ಕಸಕ್ಕೆ ಒಟ್ಟು 7,12,410 ರೂ ದಂಡ ಸಂಗ್ರಹವಾಗಿದೆ.

ಶಕ್ತಿ ಯೋಜನೆ ಜಾರಿ ನಂತರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಪ್ರತಿದಿನದ ಟ್ರಿಪ್‌ಗಳ (ಸುತ್ತುವಳಿ) ಸಂಖ್ಯೆಯಲ್ಲಿ ಹೆಚ್ಚಳ ಮಾಡಲಾಗಿದೆ. ನಾಲ್ಕೂ ನಿಗಮಗಳಲ್ಲಿ ಒಟ್ಟಾರೆ ಕಳೆದ ಆರೇಳು ತಿಂಗಳಿನಿಂದೀಚೆಗೆ ನಿತ್ಯ 6,349 ಟ್ರಿಪ್‌ಗಳನ್ನು ಹೆಚ್ಚುವರಿಯಾಗಿ ಸೃಜಿಸಲಾಗಿದೆ.

ಶಕ್ತಿ ಯೋಜನೆ ಜಾರಿ ನಂತರ ಪ್ರತಿನಿತ್ಯ ಪ್ರಯಾಣಿಕರ ಸಂಖ್ಯೆಯಲ್ಲಿ ಬರೋಬ್ಬರಿ 20ರಿಂದ 25 ಲಕ್ಷ ಹೆಚ್ಚಳವಾಗುತ್ತಿದೆ. ಈ ಹಿಂದೆ ನಿತ್ಯ 80ರಿಂದ 85 ಲಕ್ಷವಿದ್ದ ಪ್ರಯಾಣಿಕರ ಸಂಖ್ಯೆ ಸದ್ಯ 1.10 ಕೋಟಿಗೆ ತಲುಪಿದೆ. ಹೀಗಾಗಿ ಎಲ್ಲ ನಾಲ್ಕೂ ನಿಗಮಗಳ ಟ್ರಿಪ್‌ಗಳ ಸಂಖ್ಯೆಯಲ್ಲಿ ಏರಿಕೆ ಮಾಡಿಕೊಂಡಿವೆ. ಅದರಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಮಾರ್ಗಗಳಿಗೆ ಬಸ್‌ಗಳು ಹೆಚ್ಚು ಬಾರಿ ಕಾರ್ಯಾಚರಿಸುತ್ತಿವೆ.

ಒಟ್ಟಿನಲ್ಲಿ ಪುರುಷ ಪ್ರಯಾಣಿಕರ ನಿಯಮ ಉಲ್ಲಂಘನೆಯಿಂದ ಬಿಎಂಟಿಸಿ ಬೊಕ್ಕಸಕ್ಕೆ ಲಕ್ಷ ಲಕ್ಷ ರೂಪಾಯಿ ಆದಾಯ ಸಂಗ್ರಹವಾಗಿದ್ದು, ಇನ್ನಾದ್ರೂ ಪುರುಷ ಪ್ರಯಾಣಿಕರು ಜೇಬಿಗೆ ಕತ್ತರಿ ಬೀಳೋದ್ರಿಂದ ತಪ್ಪಿಸಿಕೊಳ್ಳುವತ್ತ ಅರಿವು ಮೂಡಿಸಿಕೊಳ್ಳಬೇಕಿದೆ.

Leave a Reply

error: Content is protected !!
LATEST
ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿಸಿ ನಾಳೆ ರಾಜ್ಯಾದ್ಯಂತ ಎಎಪಿ ಪ್ರತಿಭಟನೆ ನಟ ದರ್ಶನ್‌ ಸ್ಥಿತಿಗೆ ಮರುಗಿ ಅಭಿಮಾನಿ ಅನ್ನನೀರು ಬಿಟ್ಟು ಆತ್ಮಹತ್ಯೆಗೆ ಶರಣು? KSRTC ‘ಅಶ್ವಮೇಧ’ಗಳಿಂದ ಸಂಸ್ಥೆಗೆ ಶೇ.10ಕ್ಕೂ ಹೆಚ್ಚು ಲಾಭ : ಸಚಿವ ರಾಮಲಿಂಗಾರೆಡ್ಡಿ ಅತೀ ಶೀಘ್ರದಲ್ಲೇ NWKRTC ಒಡಲು ಸೇರಲಿವೆ 350 ಹೊಸ ಎಲೆಕ್ಟ್ರಿಕ್​ ಬಸ್‌ಗಳು 15 ದಿನದ ಹಸುಳೆಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ - ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯರ ಸಾಧನೆ ಬಾಲ ಕಾರ್ಮಿಕ ಪದ್ದತಿಯ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಸ್ತ್ರ: ಅಪರ ಸಿವಿಲ್ ನ್ಯಾಯಾಧೀಶೆ ಶಕುಂತಲಾ ಯೋಗ ಮಾಡಿ ಸಮೃದ್ಧ ಆರೋಗ್ಯವಂತ ಜೀವನ ನಡೆಸಿ: ಡಾ. ದಿವ್ಯಾ ಸಲಹೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ ಹಾಕಿದ ಸರ್ಕಾರ: ಎಎಪಿ ಆಕ್ರೋಶ KSRTC ಬಸ್‌ನಲ್ಲಿ ಪ್ರಯಾಣಿಸುವಾಗ ಟಿಕೆಟ್‌ ಕಳೆದುಕೊಂಡ ಮಹಿಳೆ: ತನಿಖಾಧಿಕಾರಿಗಳಿಗೆ ಹೆದರಿ ಬಸ್‌ನಿಂದ ಕೆಳಗಿಳಿಸಿದ ಕಂಡ... ಜುಲೈ 7ರಂದು KSRTC ನೌಕರರ ಕ್ರೆಡಿಟ್‌ ಸಹಕಾರ ಸಂಘದ ಚುನಾವಣೆ- ಜೂ.27ರಿಂದ ನಾಮಪತ್ರ ಸಲ್ಲಿಕೆ