NEWSನಮ್ಮಜಿಲ್ಲೆನಮ್ಮರಾಜ್ಯ

BMTC: ಕರ್ತವ್ಯ ನಿರತ ಚಾಲಕರು ಮೊಬೈಲ್ ಬಳಸಿದರೆ ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಿ- ತನಿಖಾ ಸಿಬ್ಬಂದಿಗೆ ಎಂಡಿ ಆದೇಶ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ  ಸಂಪೂರ್ಣ ಮಾಹಿತಿ: https://ksrtcarogya.in/

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಚಾಲನಾ ಸಿಬ್ಬಂದಿಗಳು ಮಾರ್ಗದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸಿದರೆ ಅವರ ವಿರುದ್ಧ ತನಿಖಾ ಸಿಬ್ಬಂದಿಗಳು ಗಂಭೀರ ಕೆಂಪು ಗುರುತಿನ ಪ್ರಕರಣ ದಾಖಲಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಆರ್‌.ರಾಮಚಂದ್ರನ್‌ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ನಿನ್ನೆ (ಆ.26) ಮಂಗಳವಾರ ಆದೇಶ ಹೊರಡಿಸಿರುವ ಎಂಡಿ ಮೊಬೈಲ್ ಪ್ರಕರಣಗಳ ವರ್ಗೀಕರಣವನ್ನು ಪರಿಷ್ಕರಿಸಿ ಭದ್ರತಾ ಮತ್ತು ಜಾಗೃತಾ ಶಾಖೆಯಿಂದ ಜಾರಿ ಮಾಡಲಾಗಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾಕೀತು ಮಾಡಿದ್ದಾರೆ.

ಸಂಸ್ಥೆಯಲ್ಲಿ ತನಿಖಾ ಸಿಬ್ಬಂದಿಗಳು ದಾಖಲಿಸುವ ಸಾಮಾನ್ಯ, ಕೆಂಪು ಗುರುತಿನ ಪ್ರಕರಣ ಮತ್ತು ಗಂಭೀರ ಕೆಂಪು ಗುರುತಿನ ಪ್ರಕರಣಗಳನ್ನು ಮಾರ್ಪಡಿಸಿ ವರ್ಗೀಕರಿಸಲಾಗಿತ್ತು.

ಕರ್ತವ್ಯ ನಿರ್ವಹಿಸುವ ಚಾಲನಾ ಸಿಬ್ಬಂದಿಗಳು ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone ಇತ್ಯಾದಿಗಳನ್ನು ಬಳಸುವುದನ್ನು ಹಾಗೂ ಮೊಬೈಲ್‌ನಲ್ಲಿ ಮಾತನಾಡುವುದು, ಸಂಗೀತ, ಆಡಿಯೋ ಆಲಿಸುವುದು, ಚಾಟಿಂಗ್ (Chatting) ಮಾಡುತ್ತಿರುವುದನ್ನು ನಿಷೇಧಿಸಿ ಅವುಗಳನ್ನು ಬಳಸಿದ್ದಲ್ಲಿ, ಕೆಂಪು ಗುರುತಿನ ಪ್ರಕರಣದ (RMC) ಅಡಿಯಲ್ಲಿ ಪ್ರಕರಣ ದಾಖಲಿಸಿ, ಕ್ರಮ ವಹಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಂಸ್ಥೆಯ ವಾಹನಗಳಿಂದ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಿ, ಪ್ರಾಣ ಹಾನಿ ಉಂಟಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅಪಘಾತಗಳು ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಈ ಅಪಘಾತಗಳ ಕಾರಣಗಳನ್ನು ಆಳವಾಗಿ ವಿಶ್ಲೇಷಿಸಿದಾಗ, ಕರ್ತವ್ಯ ವೇಳೆಯಲ್ಲಿ ಚಾಲಕರು ಮೊಬೈಲ್ ಬಳಕೆ ಮಾಡುತ್ತಿರುವುದು ಸಹ ಒಂದು ಕಾರಣವಾಗಿರುವ ಸಾಧ್ಯತೆ ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ, ಚಾಲನಾ ಸಿಬ್ಬಂದಿಗಳು ಕರ್ತವ್ಯದ ಮೇಲೆ ಮೊಬೈಲ್ ಮತ್ತು ಡಿಜಿಟಲ್ ಗ್ಯಾಜೆಟ್ಸ್ (Bluetooth, Earphone), ಇತ್ಯಾದಿಗಳನ್ನು ಬಳಸುವುದನ್ನು ಹಾಗೂ ಮೊಬೈಲ್‌ನಲ್ಲಿ ಮಾತನಾಡುವುದು ಇತ್ಯಾದಿಯಾಗಿ ಮೊಬೈಲ್‌ ಬಳಕೆ ಮಾಡುತ್ತಿರುವ ಪ್ರಕರಣಗಳು ದಾಖಲಾದಲ್ಲಿ ಅವುಗಳನ್ನು ಗಂಭೀರವಾಗಿ ಪರಿಗಣಿಸಿ, ಈ ಪ್ರಕರಣಗಳನ್ನು ಗಂಭೀರ ಕೆಂಪು ಗುರುತಿನ ಪ್ರಕರಣಗಳಾಗಿ (ORMC) ಪರಿಗಣಿಸಬೇಕು ಎಂದು ಆದೇಶಿಸಿದ್ದಾರೆ.

Advertisement

ಚಾಲಕರ ಮೊಬೈಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖಾ ಸಿಬ್ಬಂದಿಗಳು, ಡಿಎಂಗಳು, ಡಿಸಿಗಳು ಕೂಡ ಗಂಭೀರ ಕೆಂಪು ಗುರುತಿನ ಪ್ರಕರಣ ಎಂದು ಪರಿಗಣಿಸಿ ಅದನ್ನು ತಪ್ಪದೆ ಪಾಲಿಸಬೇಕು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ಪಿಡಿಎಫ್‌ ನೋಡಿ : BMTC ORMC 26 Aug 2025

Megha
the authorMegha

Leave a Reply

error: Content is protected !!