NEWSನಮ್ಮಜಿಲ್ಲೆನಮ್ಮರಾಜ್ಯ

BMTC: ನೌಕರರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳುವ ಅಧಿಕಾರಿಗಳು ಇರಿತಕ್ಕೊಳಗಾದ ನಿರ್ವಾಹಕರ ನೋಡಲು ಬಂದಿಲ್ಲ- ಕರವೇ ಆಕ್ರೋಶ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನಿರ್ವಾಹಕನಿಗೆ ಎಲ್ಲಿಂದಲೋ ಬಂದ ವ್ಯಕ್ತಿ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದರೂ ಈವರೆಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಹೇಳಿಕೆ ನೀಡದಿರುವುದಕ್ಕೆ ಕರವೇ ಸಂಘಟನೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಒಬ್ಬ ಸಂಸ್ಥೆಯ ನೌಕರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಬಸ್‌ ಕೂಡ ಜಖಂಗೊಳಿಸಿದ್ದರೂ, ಈವರೆಗೂ ಯಾವುದೇ ನೌಕರರ ಪರ ಸಂಘಟನೆಗಳ ಮುಖಂಡರೂ ತುಟಿ ಬಿಚ್ಚದಿರುವುದು ನೌಕರರ ಕೋಪಕ್ಕೂ ಎಡೆ ಮಾಡಿಕೊಡುತ್ತಿದೆ.

ಇನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್‌. ರಾಮಚಂದ್ರನ್‌ ಮತ್ತು ಮುಖ್ಯ ಸಿಬ್ಬಂದಿ ವ್ಯವಸ್ಥಾಕರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಜತೆಗೆ ಡಿಪೋ ಮಟ್ಟದ ಕೆಳ ಹಂತದ ಅಧಿಕಾರಿಗಳು ಈ ಬಗ್ಗೆ ಮಾತನಾಡದಿರುವುದು ನೌಕರರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂಬುವುದನ್ನು ಸಾಕ್ಷೀಕರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅದೇ ಒಬ್ಬ ಪ್ರಯಾಣಿಕನನ್ನು ಚಾಲನಾ ಸಿಬ್ಬಂದಿ ಪ್ರಶ್ನೆ ಮಾಡಿದರೆ ಸಾಕು ಕೂಡಲೇ ಅಂದರೆ ಕ್ಷಣದಲ್ಲೇ ಅಂಥ ನೌಕರರನ್ನು ಅಮಾನತು ಮಾಡಿ ತಪ್ಪು ಮಾಡಿದ ಪ್ರಯಾಣಿನ ಪರವಾಗಿ ನಿಲ್ಲುವ ಸಂಸ್ಥೆಯ ಇಂಥ ಅಧಿಕಾರಿಗಳ ನಡುವೆ ನೌಕರರು ಯಾವ ರೀತಿ ಕೆಲಸ ಮಾಡಬೇಕು ಎಂದು ಕನ್ನಡ ರಕ್ಷಣ ವೇದಿಕೆಯ ಪದಾಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.

ಇನ್ನು ಹೊರ ರಾಜ್ಯದ ಪ್ರಯಾಣಿಕನ ಯಾವುದೋ ಕೋಪಕ್ಕೆ ನಿರ್ವಾಹಕ ಈಗ ಸಾವು ಬದುಕಿನ ನಡುವೆ ಹೋರಾಡುವ ಸ್ಥಿತಿ ತಲುಪ್ಪಿದ್ದಾರೆ ಎಂದರೆ ಅದಕ್ಕೆ ನಿಗಮಗಳಲ್ಲಿ ಇರುವ ಅಧಿಕಾರಿಗಳ ನೌಕರರ ಮೇಲಿನ ಈ ತಾತ್ಸಾರವೇ ಕಾರಣೆ ಎಂದು ಕಿಡಿಕಾರಿದ್ದಾರೆ.

ನೌಕರರು ಯಾವುದೇ ತಪ್ಪು ಮಾಡದಿದ್ದರೂ ಅಧಿಕಾರಿಗಳು ಅವರ ಹೇಳಿಕೆ ಪಡೆಯದೆಯೇ ಏಕಪಕ್ಷೀಯವಾಗಿ ಕೂಡಲೇ ಅಮಾನತಿನ ಶಿಕ್ಷೆಗೆ ಗುರಿಪಡಿಸಿ ಬಿಡುತ್ತಾರೆ. ಈಗ ಆಗಿರುವ ಹಲ್ಲೆಗೆ ಪರೋಕ್ಷವಾಗಿ ಈ ಅಧಿಕಾರಿಗಳೇ ಕಾರಣರಾಗಿದ್ದಾರೆ. ಏಕೆಂದರೆ ತಪ್ಪು ಮಾಡಿದ ಪ್ರಯಾಣಿಕರಿಗೆ ಈವರೆಗೂ ಈ ಅಧಿಕಾರಿಗಳು ಕಾನೂನು ರೀತಿ ಶಿಕ್ಷೆ ಕೊಡಿಸುವ ಕ್ರಮವನ್ನು ಸಮರ್ಪಕವಾಗಿ ಜರುಗಿಸಿಲ್ಲ. ಇದೇ ನೌಕರರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ.

ಇನ್ನು ಒಂದು ಬಸ್‌ ಅಪಘಾತಕ್ಕೆ ಒಳಗಾದರೆ ಆ ಬಸ್‌ ಚಾಲಕನ ರಕ್ಷಣೆಗೆ ಬರುವ ಬದಲಿಗೆ ಬೇರೆ ರೀತಿಯಲ್ಲೇ ಚಾಲನಾ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ಇನ್ನು ಅಪಘಾತಕ್ಕೀಡಾದ ಬಸ್ಸನ್ನು ನ್ಯಾಯಾಲಯದಿಂದ ಬಿಡಿಸಿಕೊಳ್ಳುವುದಕ್ಕಷ್ಟೆ ಸಾರಿಗೆಯ ಕಾನೂನು ವಿಭಾಗ ಕೆಲಸ ಮಾಡುತ್ತದೆಯೇ ಹೊರತು ಅಪಘಾತದಿಂದ ಗಾಯಗೊಂಡು ಆಸ್ಪತ್ರಗೆ ಸೇರಿದರೂ ಅಂಥ ಚಾಲಕರ ಬಗ್ಗೆ ಈವರೆಗೂ ಯಾವುದೇ ವಕಾಲತ್ತು ವಹಿಸಿಲ್ಲ.

ಕರ್ತವ್ಯದ ಮೇಲಿದ್ದಾಗ ಆಗುವ ಅಪಘಾತದ ನಂತರ ಚಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಆ ಚಾಲಕನ ಕುಟುಂಬದವರು ಖಾಸಗಿ ವಕೀಲರ ಮೂಲಕ ಪ್ರಕರಣ ನಡೆಸುವ ಸ್ಥಿತಿ ಇದೆ. ಇದು ನಿಜವಾಗಲೂ ದುರಂತ. ಏಕೆ ಆ ಚಾಲಕ ತನ್ನ ಕುಟುಂಬದವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಆಗಿರುವ ಅಪಘಾತವೇ? ಈ ರೀತಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದರೂ ಯಾವುದೇ ಸಂಘಟನೆಗಳ ಮುಖಂಡರು ಪ್ರಶ್ನಿಸದಿರುವುದು ಇನ್ನಷ್ಟು ಅದ್ವಾನಕ್ಕೆ ಕಾರಣವಾಗಿದೆ.

ಇನ್ನು ಸಾರಿಗೆ ನಿಗಮಗಳಲ್ಲಿ ಅಧಿಕಾರಿಗಳು ಈ ರೀತಿ ಮೌಖಿಕವಾಗಿ ನಿಯಮಬಾಹಿರವಾಗಿ ನಡೆದುಕೊಳ್ಳುವುದು ಮತ್ತು ಚಾಲನಾ ಸಿಬ್ಬಂದಿಗಳ ಮೇಲೆ ವಿನಾಕಾರಣ ಕ್ರಮ ತೆಗೆದುಕೊಳ್ಳುವುದರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಅಧಿಕಾರಿಗಳ ನಡೆಯನ್ನು ಖಂಡಿಸಬೇಕು ಎಂದು ಪ್ರಜ್ಞಾವಂತ ಕರವೇ ಕಾರ್ಯಕರ್ತರು ಧ್ವನಿ ಎತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಇದೇ ರೀತಿ ನೌಕರರ ಪರ ಸಂಘಟನೆಗಳು ಎನ್ನುವ ಮುಖಂಡರು ಕೂಡ ಧ್ವನಿಯಾದರೆ ನೌಕರರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ಸ್ವಲ್ಪವಾದರೂ ಕಡಿಮೆಯಾದೀತು.

Leave a Reply

error: Content is protected !!
LATEST
KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ ದೀಪಾವಳಿ ಹಬ್ಬ ಹಿನ್ನೆಲೆ KKRTC ನೌಕರರಿಗೆ ಅ.29ರಂದೇ ವೇತನ ಕೊಡಲು ಎಂಡಿ ರಾಚಪ್ಪ ನಿರ್ದೇಶನ