BMTC ಸಂಸ್ಥೆಯಿಂದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಿ: ವ್ಯವಸ್ಥಾಪಕ ನಿರ್ದೇಶಕರಿಗೆ ಟಿಸಿ ಶ್ರೀನಿವಾಸ್ ಮನವಿ
BMTC MD ರಾಮಚಂದ್ರನ್ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಈ ಹಿಂದಿನಿಂದಲೂ ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವದಂದು ಕೊಡಲಾಗುತ್ತಿತ್ತು ಆದರೆ, ಇತ್ತೀಚೆಗೆ ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ ಆದ್ದರಿಂದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ತಾವು ಪ್ರತಿಭಾ ಪುರಸ್ಕಾರ ನೀಡುವುದಕ್ಕೆ ಮರು ಚಾಲನೆ ನೀಡಬೇಕು ಎಂದು ರಾಮಚಂದ್ರನ್ ಅವರಲ್ಲಿ ನೌಕರ ಶ್ರೀನಿವಾಸ್ ಮನವಿ ಮಾಡಿದ್ದಾರೆ.
ಈ ಸಂಬಂಧ BMTC ವಾಯುವ್ಯ ವಲಯ ಘಟಕ-22ರ ಸಂಚಾರ ನಿಯಂತ್ರಕ ಎನ್.ಶ್ರೀನಿವಾಸ ಎಂಡಿಗಳಿಗೆ ಪತ್ರ ಬರೆದಿದ್ದು ಅದರಲ್ಲಿ ವಿವರಿಸಿರುವಂತೆ ಈ ಹಿಂದಿನಿಂದಲೂ ಸ್ವಾತಂತ್ರ್ಯೋತ್ಸವ / ಕನ್ನಡ ರಾಜ್ಯೋತ್ಸವ ದಿನದಂದು ಸಂಸ್ಥೆಯ ಸಿಬ್ಬಂದಿಗಳ/ ನೌಕರರ ಮಕ್ಕಳಿಗೆ 10ನೇ ತರಗತಿಯಿಂದ ಪದವೀದರ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಸಂಸ್ಥೆಯು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಸಂಸ್ಥೆಯು ನೌಕರರ ಮಕ್ಕಳಿಗೆ ಈ ಪ್ರತಿಭಾ ಪುರಸ್ಕಾರ ನೀಡುವುದನ್ನು ನಿಲ್ಲಿಸಿದೆ.
ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಉಪೇಂದ್ರ ತ್ರಿಪಾಠಿಯವರ ಕಾಲದಿಂದ ಸಿಬ್ಬಂದಿಗಳ/ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ಹಾಗೂ ಕನ್ನಡದ ಸಾಹಿತಿಗಳಿಗೆ ಸಂಸ್ಥೆಯ ವತಿಯಿಂದ “ನೃಪತುಂತ” ಪ್ರಶಸ್ತಿ ನೀಡುವ ಸಲುವಾಗಿ 2 ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಈ ಹಣವನ್ನು ಬ್ಯಾಂಕ್‍ನಲ್ಲಿ ಕಾಯಂ ಠೇವಣಿಯಾಗಿ ಇಟ್ಟು ಅದರಿಂದ ಬರುತ್ತಿರುವ ಬಡ್ಡಿಯ ಹಣದಿಂದ ನೃಪತುಂಗ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿ ಗೌರವಿಸಲಾಗುತ್ತಿತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳ/ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದನ್ನು ನಿಲ್ಲಿಸಲಾಗಿದೆ. ಸಂಸ್ಥೆಯು ತನ್ನ ಸಿಬ್ಬಂದಿಗಳ/ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ನೀಡದಷ್ಟು ಬಡವಾಗಿಲ್ಲ. ಸಂಸ್ಥೆಯು ಬೆಂಗಳೂರು ನಗರದ ಸುತ್ತಮುತ್ತ ಸಾವಿರಾರು ಎಕರೆ ಭೂಮಿ, ಕಟ್ಟಡಗಳು, ಡಿಪೋಗಳು, ಕಚೇರಿಗಳನ್ನು ಹೊಂದಿದೆ, ಸಂಸ್ಥೆಗೆ ಮಾಹೆಯಾನ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ.
ಆದುದರಿಂದ ಸಂಸ್ಥೆಯ ಅತ್ಯುನ್ನತ ಹುದ್ದೆಯಲ್ಲಿರುವ ತಾವು ಸಿಬ್ಬಂದಿಗಳ/ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದನ್ನು ಮತ್ತೆ ನವೆಂಬರ್-2025ರಿಂದ ಪುನಾರಂರಭಿ ಸಂಸ್ಥೆಯ ಸಿಬ್ಬಂದಿಗಳ/ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಶ್ರಮವಹಿಸಿ ದುಡಿಯುತ್ತಿರುವ ಸಂಸ್ಥೆಯ ನೌಕರರ ಕುಟುಂಬಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಗೌರವಿಸಬೇಕೆಂದು ತಮ್ಮಲ್ಲಿ ವಿನಮ್ರತೆಯಿಂದ ಕೋರುತ್ತೇನೆ ಎಂದು ಶ್ರೀನಿವಾಸ ಪತ್ರ ಬರೆದು ವಿನಂತಿಸಿದ್ದಾರೆ.
ಮಾರ್ಗ ಮಧ್ಯೆ ಕೆಟ್ಟು ಹೋಗುತ್ತಿರುವ ಇಟಿಎಂಗಳು: ಬಹುತೇಕ ಘಟಕಗಳಲ್ಲಿ ಸಂಸ್ಥೆಯ ಇಟಿಎಂ ಯಂತ್ರಗಳು ಸರಿಯಾಗಿ ಕೆಲಸ ಮಾಡದೆ ಮಾರ್ಗ ಮಧ್ಯೆ ಕೆಟ್ಟು ಹೋಗುತ್ತಿವೆ ಇದರಿಂದಾಗಿ ಸಾರ್ವಜನಿಕ ಪ್ರಯಾಣಿಕರಿಗೆ ನಿರೀಕ್ಷೆಯ ಮಟ್ಟದಲ್ಲಿ ಸೇವೆ ದೊರೆಯುತ್ತಿಲ್ಲ ಹಾಗೂ ಸಂಸ್ಥೆಯ ದೈನಂದಿನ ಸಾರಿಗೆ ಆದಾಯ ಗಣನೀಯವಾಗಿ ಇಳಿಕೆಯಾಗಲು ಕಾರಣವಾಗಿದೆ.

ಇಟಿಎಂ ಯಂತ್ರಗಳನ್ನು ಬದಲಾಯಿಸಿಕೊಳ್ಳಲು / ಬ್ಯಾಟರಿ ಬದಲಾಯಿಸಿಕೊಳ್ಳಲು ನಿರ್ವಾಹಕರು ಸುತ್ತುಗಳನ್ನು ಮೊಟಕುಗೊಳಿಸಿ ಘಟಕಕ್ಕೆ ಬರುತ್ತಿರುವುದರಿಂದ ಸುತ್ತುಗಳು ರದ್ದಾಗುವುದಲ್ಲದೆ ಸಾರಿಗೆ ಆದಾಯ ಸಹ ಕುಂಠಿತವಾಗುತ್ತಿದೆ. ಹೀಗಾಗಿ ತಾವು ಗುಣ ಮಟ್ಟದ ಇಟಿಎಂ ಯಂತ್ರಗಳನ್ನು ಸಂಸ್ಥೆಗೆ ಖರೀದಿ ಮಾಡಿ ನಿರ್ವಾಹಕರಿಗೆ ಆಗುತ್ತಿರುವ ತೊಂದರೆ, ಪ್ರಯಾಣಿಕರಿಗೆ ಸೇವೆಯಲ್ಲಿ ವ್ಯತ್ಯಯ ಸಂಸ್ಥೆಯ ಸಾರಿಗೆ ಆದಾಯಕ್ಕೆ ಧಕ್ಕೆ ಉಂಟಾಗುತ್ತಿದೆ ಆದ್ದರಿಂದ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. Letter to Managing Director, BMTC-Prathibha Puraskara
Related








