NEWSಆರೋಗ್ಯಕ್ರೀಡೆದೇಶ-ವಿದೇಶಸಿನಿಪಥ

ನಟ ಶಾರುಖ್ ಖಾನ್ ಆರೋಗ್ಯದಲ್ಲಿ ದಿಢೀರ್ ಏರುಪೇರು​ ಆಸ್ಪತ್ರೆಗೆ ದಾಖಲು

ವಿಜಯಪಥ ಸಮಗ್ರ ಸುದ್ದಿ

ಅಹ್ಮದಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ದಿಢೀರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮಧ್ಯಾಹ್ನ ಅಹಮದಾಬಾದ್​ನ ಕೆ.ಡಿ. ಆಸ್ಪತ್ರೆಗೆ​ ದಾಖಲಾಗಿದ್ದಾರೆ.

ಕೆಕೆಆರ್​ ತಂಡದ ಮಾಲೀಕ ಶಾರೂಖ್​ ಖಾನ್​ ಮಂಗಳವಾರ ಕೋಲ್ಕತ್ತಾ ನೈಟ್ ರೈಡರ್ಸ್ (KKR ) ಮತ್ತು ಸನ್​ರೈಸರ್ಸ್​​ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ನಟ ಬಿಸಿಲಿನ ತಾಪಕ್ಕೆ (Sun Stroke) ಒಳಗಾದ ನಂತರ ಅನಾರೋಗ್ಯಕ್ಕೆ ತುತ್ತಾದರು ಎಂದು ಹೇಳಲಾಗಿದೆ.

ಐಪಿಎಲ್ 2024ರ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಎಸ್ಆರ್​ಎಚ್​​​ ವಿರುದ್ಧ ತಮ್ಮ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಶಾರುಖ್ ಖಾನ್ ಅಹಮದಾಬಾದ್​ಗೆ ಬಂದಿದ್ದರು. ಪಂದ್ಯದ ಮುಕ್ತಾಯದ ತನಕ ಅವರು ಮೈದಾನದಲ್ಲಿಯೇ ಇದ್ದರು. ಬಳಿಕ ಅವರು ಮೈದಾನಕ್ಕೆ ಇಳಿದು ಕ್ಯಾಮೆರಾಗಳಿಗೆ ಫೋಸ್​ ಕೊಟ್ಟಿದ್ದರು.

ಅಭಿಮಾನಿಗಳಿಗೆ ಕೈ ಬೀಸಿ ಶುಭಾಶಯ ಹೇಳಿದ್ದರು. ಆದರೆ, ಅಲ್ಲಿಂದ ನಿರ್ಗಮಿಸಿದ ಬಳಿಕ ಅವರಿಗೆ ಅನಾರೋಗ್ಯ ಉಂಟಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಆರೋಗ್ಯದ ನಿಗಾ ವಹಿಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.

ಫೈನಲ್ ತಲುಪಿದ ಕೆಕೆಆರ್: ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ರೋಚಕ ಪಂದ್ಯದ ನಂತರ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಐಪಿಎಲ್ 2024ರ ಫೈನಲ್​ಗೆ ಪ್ರವೇಶಿಸಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಶಾರುಖ್ ಖಾನ್ ಮತ್ತು ಅವರ ಮಕ್ಕಳಾದ ಅಬ್ರಾಮ್, ಸುಹಾನಾ ಇದ್ದರು. ಜತೆಗೆ ನಟಿ ಅನನ್ಯಾ ಮತ್ತು ಶನಾಯಾ ಕೂಡ ಕಾಣಿಸಿಕೊಂಡಿದ್ದರು.

ಯಶಸ್ಸಿನ ಸಂಭ್ರಮದಲ್ಲಿ ಶಾರುಖ್​: ಶಾರುಖ್ ಖಾನ್ ಇತ್ತೀಚೆಗೆ ಮೂರು ಬ್ಲಾಕ್ಬಸ್ಟರ್ ಚಿತ್ರಗಳನ್ನು ನೀಡಿದ್ದಾರೆ. “ಪಠಾಣ್”, “ಜವಾನ್” ಮತ್ತು “ಡಂಕಿ”. ಆ ಬಳಿಕ ಅವರು ತಮ್ಮ ಐಪಿಎಲ್ ತಂಡ ಕೋಲ್ಕತಾ ನೈಟ್ ರೈಡರ್​ ಜತೆಗೆ ಇದ್ದಾರೆ. ಈ ಬಾರಿ ಅವರ ತಂಡುವ ಫೈನಲ್​ಗೆ ಪ್ರವೇಶ ಪಡೆದಿದೆ. ಇದರ ಜತೆಗೆ ಕಿಂಗ್ ಖಾನ್ ತಮ್ಮ ಮುಂಬರುವ ಚಿತ್ರ “ಕಿಂಗ್” ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು: ಶಾರುಖ್ ಖಾನ್ ಅವರ ಆರೋಗ್ಯದ ಕುರಿತ ಮಾಹಿತಿಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಶಾರುಖ್ ಅವರ ಅನಾರೋಗ್ಯ ಎತ್ತಿ ತೋರಿಸುತ್ತಿದೆ.

ಹೀಟ್ ಸ್ಟ್ರೋಕ್ ಎಂದರೆ ನಿರ್ಜಲೀಕರಣ. ಅತಿಯಾದ ನೀರಿನ ಕೊರತೆಯಿಂದ ದೇಹದಲ್ಲಿನ ದ್ರವಾಂಶ ಕಡಿಮೆ ಆಗುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದ ತಲೆನೋವು, ತಲೆತಿರುಗುವಿಕೆ ಕಾರಣವಾಗುತ್ತದೆ. ಬೆವರುವಿಕೆಯು ಸಾಮಾನ್ಯವಾಗಿ ಹೀಗೆ ಆಗುತ್ತದೆ. ಸದ್ಯ ಈ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಅಹಮದಾಬಾದ್​ನ ಕೆ.ಡಿ.ಆಸ್ಪತ್ರೆಗೆ ದಾಖಲಾದ ನಟನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ