NEWSನಮ್ಮರಾಜ್ಯರಾಜಕೀಯ

ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಪದಗ್ರಹಣ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರ ಪದಗ್ರಹಣವಾಗಿದೆ. ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ವಿಜಯೇಂದ್ರ ಅವರಿಗೆ ಬಿಜೆಪಿ ಬಾವುಟ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರ ಮಾಡಿದ್ದಾರೆ.

ಬಿ.ವೈ.ವಿಜಯೇಂದ್ರ ರಾಜ್ಯ ಬಿಜೆಪಿಯ 11ನೇ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಅಧಿಕಾರ ಹಸ್ತಾಂತರಿಸಿ ವಿಜಯೇಂದ್ರ ಅವರನ್ನು ಸನ್ಮಾನಿಸಿದ ನಳಿನ್ ಕುಮಾರ್ ಕಟೀಲ್ ಅಪ್ಪಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ವಿಜಯೇಂದ್ರ ಅವರ ಪದಗ್ರಹಣದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಗೆ ಘಟಾನುಘಟಿ ನಾಯಕರ ದಂಡೇ ಹರಿದು ಬಂದಿದೆ. ಎಲ್ಲ ನಾಯಕರು ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಶುಭಾಶಯ ಕೋರಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಬಿಜೆಪಿಯ ವಿಜಯ ಶಕೆ ಆರಂಭವಾಗಿದೆ. ಈ ಇದರ ಜತೆಗೆ ಬಿಜೆಪಿಯ ಯುವ ಅಧ್ಯಕ್ಷ ವಿಜಯೇಂದ್ರ ಮುಂದೆ ಸಾಲು ಸಾಲು ಸವಾಲುಗಳಿವೆ. ಲೋಕಸಭೆ ಚುನಾವಣಾ ಟಾಸ್ಕ್ ರೀಚ್ ಆಗಲು ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯ ತಂತ್ರಗಳನ್ನು ಹೆಣೆಯಬೇಕಿದೆ.

ವಿಜಯೇಂದ್ರ ಎದುರು ಮುಳ್ಳಿನ ಹಾದಿ ಇದ್ದು ಸದ್ಯ ಈಗ ಬಿಜೆಪಿ ಮನೆ ಸಮಸ್ಯೆಗಳ ಗೂಡಾಗಿದೆ. ಪಕ್ಷದ ಹೀನಾಯ ಸೋಲು, ಬಣ ಸಂಘರ್ಷ, ಒಗ್ಗಟ್ಟಿಲ್ಲ, ನಾಯಕತ್ವದ ಕೊರತೆ, ಸೊರಗಿದ ಪಕ್ಷ ಸಂಘಟನೆ ಇಂಥಹ ಸಂದರ್ಭದಲ್ಲಿ ಪಕ್ಷಕ್ಕೆ ನೂತನ ಸಾರಥಿಯಾಗಿ ವಿಜಯೇಂದ್ರ ಎಂಟ್ರಿಯಾಗಿದ್ದಾರೆ.

ಸಾಲು ಸಾಲು ಸವಾಲು, ಅಡಿಗಡಿಗೆ ಇರುವ ಅಡ್ಡಿ-ಆತಂಕಗಳಿಂದಲೇ ವಿಜಯೇಂದ್ರಗೆ ಸ್ವಾಗತ ಕೋರಲಾಗಿದ್ದು ತಂದೆಯವರ ಬಲ, ಕಾರ್ಯಕರ್ತರ ವಿಶ್ವಾಸ, ಸ್ವ ಸಾಮರ್ಥ್ಯ, ಸಂಘಟನಾ ಚಾತುರ್ಯ ನಂಬಿ ಇಂದಿನಿಂದ ವಿಜಯೇಂದ್ರ ಅಖಾಡಕ್ಕೆ ಇಳಿಯಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ 25ಸ್ಥಾನ ಗೆಲ್ಲುವ ಟಾಸ್ಕ್ ವಿಜಯೇಂದ್ರ ಮುಂದಿದೆ. ಈ ನಿಟ್ಟಿನಲ್ಲಿ ಹಂತಹಂತವಾಗಿ ರಣತಂತ್ರಗಳನ್ನು ಹೆಣೆಯಲು ವಿಜಯೇಂದ್ರ ಪ್ಲಾನ್ ಮಾಡಿದ್ದಾರೆ.

ಸವಾಲುಗಳೇನು?: ಹೈಕಮಾಂಡ್ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುವುದು. ವರಿಷ್ಠರು, ದೆಹಲಿ ಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು 2) ಕಿರಿಯ, ಹಿರಿಯ ನಾಯಕರ ವಿಶ್ವಾಸ ಪಡೆದು ಒಟ್ಟಿಗೆ ಕರೆದೊಯ್ಯುವುದು. ಹಿರಿಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಹಕಾರ ಕೋರುವುದು.

3) ಪಕ್ಷದಲ್ಲಿ ಬಣ ಸಂಘರ್ಷಕ್ಕೆ ತೆರೆ ಎಳೆಯುವುದು. ಸೋಲಿನಿಂದ ಕಂಗೆಟ್ಟ ಪಕ್ಷಕ್ಕೆ ಚೇತರಿಕೆ, ಟಾನಿಕ್ ಕೊಡುವುದು. 4) ಕಾರ್ಯಕರ್ತರಲ್ಲಿ ನವ ಚೈತನ್ಯ, ರಣೋತ್ಸಾಹ ಹುಟ್ಟಿಸುವುದು. ಪಕ್ಷ ಸಂಘಟನೆಗೆ ಚುರುಕು ಕೊಡುವುದು. ಜಿಲ್ಲಾ ಪ್ರವಾಸ, ಸಮರ್ಥ ಪದಾಧಿಕಾರಿಗಳ ನೇಮಕ ಮಾಡುವುದು.

ಟಾಸ್ಕ್ ರೀಚ್ ಆಗಲು ತಂತ್ರಗಳೇನು?: ಸಮರ್ಥ ಪಕ್ಷ ಸಂಘಟನೆ ಮೂಲಕ ಲೋಕಸಮರಕ್ಕೆ ತಯಾರಿ. ಸಮುದಾಯವಾರು 2ನೇ ಹಂತದ ಮುಖಂಡರೊಂದಿಗೆ ಬಾಂಧವ್ಯ ಹೆಚ್ಚಿಸಿಕೊಳ್ಳುವುದು. ಆಪರೇಷನ್ ಹಸ್ತಕ್ಕೆ ಬ್ರೇಕ್ ಹಾಕುವುದು. 2) ಪಕ್ಷ ತೊರೆದು ಹೋಗಲು ಮುಂದಾಗಿರುವವರನ್ನು ಮನವೊಲಿಸುವುದು. ಪಕ್ಷ ತೊರೆದು ಹೋದವರನ್ನೂ ವಾಪಸ್ ಕರೆತರುವುದು. 3) ದೋಸ್ತಿಯಾಗಿರುವ ಜೆಡಿಎಸ್ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು.

Review overview

Criteria 17.9
Criteria 29.1
Criteria 38
Criteria 49.5

The Pros

  • positive 1
  • positive 2
  • positive 3

The Cons

  • negative 1
  • negative 2
  • negative 3

Summary

8.6Maecenas non enim eu ante cursus blandit faucibus vitae neque. Morbi a pellentesque nunc, a pharetra sem. Maecenas ac lorem eu magna aliquam pretium egestas nec dui.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ