NEWSನಮ್ಮಜಿಲ್ಲೆನಮ್ಮರಾಜ್ಯ

ಸಾರಿಗೆ ಸಂಘಟನೆಗಳ ಮುಖಂಡರಲ್ಲಿ ಸ್ವಾರ್ಥ ಪ್ರತಿಷ್ಠೆ ತುಂಬಿ ತುಳುಕುತ್ತಿರುವಾಗ ನೌಕರರ ಬೇಡಿಕೆ ಈಡೇರಲು ಸಾಧ್ಯವೆ?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಹಾಗೂ ಕಾರ್ಮಿಕರ ಸಂಘಟನೆಗಳ ಮುಖಂಡರಲ್ಲಿ ಸ್ವಾರ್ಥ ಮತ್ತು ಪ್ರತಿಷ್ಠೆ ತುಂಬಿಕೊಂಡಿದೆ. ಈ ಸಂಘಟನೆಗಳ ಕೆಲ ನಾಯಕರು ಇದನ್ನ ಬಿಟ್ಟು ಹೊರಬರುತ್ತಿಲ್ಲ. ಆದಕಾರಣ ಸಮಸ್ತ ನಾಡಿನ ಎಲ್ಲ ಸಾರಿಗೆ ನೌಕರರು ಒಂದಾಗಿ ಹೋರಾಟ ರೂಪಿಸಬೇಕಿದೆ.

ಅಲ್ಲದೇ ಈ ಒಂದು ವೇದಿಕೆಯಿಂದ ಹೋರಾಟ ರೂಪಿಸಿದರೆ ನಾವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ.

ಆದರೆ, ಈವರೆಗೂ ಒಬ್ಬ ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ನನಗಿಂತ ಮೇಲೆ ಯಾರು ಬೆಳಿಬಾರ್ದು ಅನ್ನೋ ವಿಕೃತ ಮನಸ್ಸಿನ ಕಾರಣದಿಂದ ಸಂಘ- ಸಂಘಟನೆಗಳನ್ನು ಒಗ್ಗೂಡಿಸುವುದಕ್ಕೆ ಒಂದು ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದರರ್ಥ ಇವರಿಗೆ ನೌಕರರ ಹಿತ ಚಿಂತನೆ ಅವಶ್ಯಕತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ.

ಇನ್ನು ಹೊಡೆದಾಳುವ ನೀತಿಯಲ್ಲಿ ಬಂದಿರುವಂತವರು ಈ ಒಮ್ಮತದ ಹೋರಾಟ ರೂಪಿಸಿದರೆ ನೌಕರರಿಗೆ ಒಳ್ಳೆಯದಾಗಿ ಬಿಟ್ಟದರೆ ಎಂಬ ಆತಂಕದಲ್ಲಿ ಇದೆಲ್ಲವನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರು ಯಾವುದೇ ಕಾರಣಕ್ಕೂ ನೌಕರರಿಗೆ ಒಳ್ಳೆಯದಾಗಲು ಬಿಡುವುದಿಲ್ಲ. ಕೇವಲ ಬೂಟಾಟಿಕೆ ಮತ್ತು ನೆಪ ಮಾತ್ರಕ್ಕೆ ತೋರಿಕೆಗೋಸ್ಕರ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ಇವರ ಇಂಥ ವಿಕೃತ ಮನಸ್ಸಿನಿಂದ ಅಮಾಯಕ ನೌಕರರು ಬಲಿಯಾಗುತ್ತಿದ್ದಾರೆ. ಹಲವು ದಶಕಗಳಿಂದಳು ಈ ಉದ್ದೇಶವನ್ನು ಹಾಗೇಯೇ ಉಳಿಸಿಕೊಂಡು ಬರುತ್ತಿದ್ದಾರೆ. ಇಲ್ಲ ನಮಗೆ ನೌಕರರಿಗೆ ಒಳ್ಳೇದು ಮಾಡ್ಲೇಬೇಕು ಎಂಬುವುದು ಇದ್ದಿದ್ದರೆ ಈ ರೀತಿ ನೌಕರರು ವಜಾ, ಅಮಾನತು, ವರ್ಗಾವಣೆ ಹಾಗೂ ಪೊಲೀಸ್‌ ಕೇಸ್‌ಗಳಲ್ಲಿ ಸಿಲುಕಲು ಬಿಡುತ್ತಿರಲಿಲ್ಲ.

ಇನ್ನಾದರೂ ಎಲ್ಲರನ್ನೂ ಒಗ್ಗೂಡಿಸಿ ಎಲ್ಲರನ್ನು ಒಂದೇ ವೇದಿಕೆಗೆ ಕರೆತಂದು ಬೈದು ಬುದ್ದಿ ಹೇಳಿ ಒಂದೇ ವೇದಿಕೆಯಿಂದ ಹೋರಾಟ ರೂಪಿಸಬೇಕಿದೆ. ಆದರೆ ಅದು ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಅಸಾಧ್ಯವಾಗಿ ತೋರುತ್ತಿದೆ. ಕಾರಣ ಎತ್ತು ಹೆರೆಗೆ ಕೋಣ ನೀರಿಗೆ ಎಂಬುವುದು ನಡೆಯುತ್ತಿದೆ.

ಸತ್ಯ ಕೆಲ ಒಂದಷ್ಟು ಜನ ಸ್ಮಶಾನವಾಸಿಗಳಾಗುವವರೆಗೂ ಸಾರಿಗೆ ನೌಕರರಿಗೆ ಒಳ್ಳೆಯದಾಗುವುದಿಲ್ಲ. ಒಗ್ಗಟ್ಟಿನ ಮಂತ್ರ ಸೂಚಿಸದಿದ್ದರೆ ಇದೊಂದೇ ಹೋರಾಟ ಅಲ್ಲ ಇಂತಹ ಸಾವಿರ ಹೋರಾಟಗಳು ರೂಪಿಸಿದರು ಯಶಸ್ಸು ಕಾಣೋದಿಲ್ಲ. ಅತ್ಯಂತ ದಯನೀಯವಾಗಿ ನೋವಿನಿಂದ ಈ ವಿಚಾರವನ್ನು ಹಂಚಿಕೊಳ್ಳುತ್ತಿದ್ದೇನೆ ಧನ್ಯವಾದಗಳು ಎಂದು ನೌಕರರು ಸಾಮಾಜಿ ಜಾಲತಾಣದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

Megha
the authorMegha

Leave a Reply

error: Content is protected !!