ಹೊಸಪೇಟೆ: ಕಸದ ಹೆಸರಿನಲ್ಲಿ ಗುಜರಿ ಸಾಮಗ್ರಿ ಸಾಗಣೆ ಪ್ರಕರಣ- ಡಿಎಂ ಸೇರಿ ನಾಲ್ವರ ಅಮಾನತು ಮಾಡಿ ಎಂಡಿ ಆದೇಶ


ಕೆಎಸ್‌ಆರ್‌ಟಿಸಿ ನೌಕರರಿಗೆ ಉಚಿತ ಆರೋಗ್ಯ ಯೋಜನೆ ಕುರಿತ ಸಂಪೂರ್ಣ ಮಾಹಿತಿ: https://ksrtcarogya.in/ 
ಹೊಸಪೇಟೆ: ಕಸದ ಹೆಸರಿನಲ್ಲಿ ಗುಜರಿ ಸಾಮಗ್ರಿಗಳ ಸಾಗಿಸಿದ್ದ ಸಂಬಂಧ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಘಕಟ ವ್ಯವಸ್ಥಾಪಕರು ಸೇರಿದಂತೆ ನಾಲ್ವರನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅಮಾನತುಗೊಳಿಸಿ ಅದೇಶ ಹೊರಡಿಸಿದ್ದಾರೆ.
ಹೊಸಪೇಟೆ ಸಾರಿಗೆ ಘಟಕದ ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ಸಾರಿಗೆ ನಿಗಮದ ಹವಾಲ್ದಾರ್ ಇಬ್ರಾಹಿಂ, ವಿಭಾಗೀಯ ಭದ್ರತಾ ನಿರೀಕ್ಷಕ (ಪ್ರಸ್ತುತ ರಾಯಚೂರಿನ ಅಂಕಿ ಸಂಖ್ಯೆ – ಮೇಲ್ವಿಚಾರಕ) ಜಿ.ರವಿ, ಸಹಾಯಕ ಉಗ್ರಾಣಾಧಿಕಾರಿ (ಪ್ರಸ್ತುತ ಪ್ರಾದೇಶಿಕ ಕಾರ್ಯಾಗಾರ ಯಾದಗಿರಿಗೆ ನಿಯೋಜನೆ ಯಲ್ಲಿರುವವರು) ತಂಬ್ರಹಳ್ಳಿ ಲಿಂಗರಾಜು ಅಮಾನತುಗೊಂಡವರು.
ಘಟನೆ ವಿವರ: ಘಟಕದಲ್ಲಿ ಜೂ.4 ಹಾಗೂ ಜೂ.5ರಂದು ಅರು ಲಾರಿಗಳಲ್ಲಿ ಟೆಂಡರ್ ಕರೆಯದೆ ಕಸ ವಿಲೇವಾರಿ ಮಾಡಿದ್ದು ಹಾಗೂ ಈ ಕುರಿತು ಮೇಲಧಿಕಾರಿಗಳು ಸೇರಿದಂತೆ ಯಾರಿಗೂ ಮಾಹಿತಿ ನೀಡದಿರುವುದು ಸಂಶಯಕ್ಕೆ ಆಸ್ಪದವಾಗಿತ್ತು.
ಅಲ್ಲದೆ ನಿಯಮ ಉಲ್ಲಂಘನೆ ಮಾಡಿ ಕಸ ವಿಲೇವಾರಿ ಮಾಡುವ ಸಮಯದಲ್ಲಿ ಅನುಪಯುಕ್ತ ಸಾಮಗ್ರಿಗಳನ್ನು ಸಹ ಸಾಗಣೆ ಮಾಡಿರುವುದು ದಾಖಲಾತಿಗಳಿಂದ ಧೃಡಪಟ್ಟಿದೆ.
ಹೀಗೆ ಸಂಸ್ಥೆಯ ಘನತೆಗೆ ಕುಂದುಂಟಾಗುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ. ಜತೆಗೆ ಸಂಸ್ಥೆಯ ನೌಕರರ ನಿಯಮಾವಳಿ ಪ್ರಕಾರ ಶಿಕ್ಷೆ ವಿಧಿಸಲು ಅರ್ಹವಾದಂತಹ ಗಂಭೀರ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಆದೇಶ ಹೊರಡಿಸಿದ್ದು, ಮುಂದಿನ ವಿಚಾರಣೆಗೆ ಕ್ರಮ ತೆಗೆದುಕೊಂಡಿದ್ದಾರೆ.

Related
