NEWSದೇಶ-ವಿದೇಶನಮ್ಮರಾಜ್ಯ

KSRTC ಸೇರಿದಂತೆ ಕರ್ನಾಟಕದ ಎಲ್ಲ ಇಪಿಎಸ್ -95 ಪಿಂಚಣಿದಾರರಿಗೆ ಶೀಘ್ರದಲ್ಲೇ ಶುಭಸುದ್ದಿ ಕೊಡುವ ಭರವಸೆ ಕೊಟ್ಟ ಕೇಂದ್ರ ಸರ್ಕಾರ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕನಿಷ್ಠ ಪಿಂಚಣಿ ಬೇಡಿಕೆ 7500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಪಿಎಸ್ ನಿವೃತ್ತ ನೌಕರರ ಪ್ರತಿಭಟನಾ ಸಮಾವೇಶ ಎನ್‌ಎಸಿ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಅವರ ನೇತೃತ್ವದಲ್ಲಿ ಡಿ.7ರಿಂದ ಹಮ್ಮಿಕೊಂಡಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ವಲ್ಪಮಟ್ಟಿಗೆ ಮಣಿದಂತೆ ಕಾಣುತ್ತಿದೆ.

ಡಿ.8ರಿಂದ ನಿರಂತರವಾಗಿ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಹಾಗೂ ನಂತರ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲು ನಿರ್ಧರಿಸಿದ್ದರು. ಅದರಂತೆ ಡಿ.13ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ 60ರ ಪ್ರಾಯ ಮೀರಿದ ನಿವೃತ್ತ ನೌಕರರನ್ನು ಪೊಲೀಸರು ಜಂತರ್ ಮಂತರ್‌ನಲ್ಲಿ ಬಂಧಿಸಿ ಕರೆದುಕೊಂಡು ಹೋಗಿದ್ದರು.

ಆದರೂ ಹಠಬಿಡದ ಮುಸಂಜೆಯಲ್ಲಿರುವ ಉತ್ಸಾಹಿಗಳಾದ 60 ವರ್ಷದಿಂದ 75 ವರ್ಷ ಪ್ರಾಯದ ನಿವೃತ್ತ ನೌಕರರು ತಮ್ಮ ಹೋರಾಟವನ್ನು ಮತ್ತೆ ಡಿ.14ರಂದು ಜಂತರ್ ಮಂತರ್‌ನಲ್ಲೇ ತೀವ್ರಗೊಳಿಸಿದರು. ಇವರ ಹೋರಾಟದ ರೂಪುರೇಷೆಗಳನ್ನು ನೋಡಿದ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದ್ದು, ಹೋರಾಟ ಮಾಡುತ್ತಿದ್ದ ಮುಂಡರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಪೊಲೀಸರು ಕೆರೆದುಕೊಂಡು ಹೋಗಿದ್ದರು.

ಈ ವೇಳೆ ಮೋದಿ ಅವರು ನಿಮ್ಮ ಸಮಸ್ಯೆ ಬಗ್ಗೆ ನಮ್ಮ ಹಣಕಾಸು ಸಚಿವರ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದರು. ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಾಯಿತು. ಈ ವೇಳೆ ಅವರು ಕಾರ್ಮಿಕ ಸಚಿವರ ಬಳಿ ಮಾತನಾಡಿ, ಅವರು ಒಪ್ಪಿದರೆ ನಾವು ಕೊಡುತ್ತೇವೆ ಎಂಬ ಭರವಸೆ ನೀಡಿದ್ದರು.

ಆ ಬಳಿಕ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ್ದು ಅವರು ಈ ಡಿಸೆಂಬರ್‌ ಕೊನೆಯವರೆಗೆ ಸಮಯಕೊಡಿ ನಿಮ್ಮ ಸಮಸ್ಯೆಯನ್ನಯ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಸಚಿವರ ಭರವಸೆ ಮೇರೆಗೆ ನಿವೃತ್ತ ನೌಕರರು ತಾತ್ಕಾಲಿಕವಾಗಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿರುವುದಾಗಿ ಘೋಷಣೆ ಮಾಡಿದರು.

ಡಿ.8ರಿಂದ ಡಿ.24ರವರೆಗೆ ಜಂತರ್ ಮಂತರ್‌ನಲ್ಲಿ  ತೀವ್ರತರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಡಿ.14ರಂದು ಸರ್ಕಾರ ಬೇಡಿಕೆಗಳ ಈಡೇರಿಸುವ ಭರವಸೆ ನೀಡುವುದಾಗಿ ಹೇಳಿದ್ದರಿಂದ ಸತ್ಯಾಗ್ರಹವನ್ನು   ಕೈ ಬಿಡಲಾಗಿದೆ ಎಂದು ರಾಷ್ಟ್ರೀಯ ಸಂಘರ್ಷ ಸಮಿತಿ ರಾಷ್ಟ್ರೀಯ ಸಂಚಾಲಕ ರಮಾಕಾಂತ ನರಗುಂದ ತಿಳಿಸಿದ್ದಾರೆ.

ಹೋರಾಟದ ನಡೆದ ಬಗೆ: ಡಿ.13ರ ಬೆಳಗ್ಗೆ ಜಂತರ್ ಮಂತರ್‌ನಲ್ಲಿ ಪ್ರಾರಂಭವಾಗಿದ್ದ ಆಮರಣ ಉಪವಾಸ ಆಂದೋಲನ ಪೊಲೀಸರ ಅಡೆತಡೆ ನಡುವೆಯೂ ಡಿ.14ರಂದು ಮುಂದುವರಿಯಿತು. ಈ ವೇಳೆ ಮೂರ್ನಾಲ್ಕು ಜನ ಸಂಸದರು ನಮ್ಮ ಹೋರಾಟದ ಸ್ಥಳಕ್ಕೆ ಬಂದು ಬೆಂಬಲ ಸೂಚಿಸಿದರು.

ನಂತರ, ಮಥುರಾ ಸಂಸದೇ ಹೇಮಾ ಮಾಲಿನಿಯವರ ಜತೆ ಕಮಾಂಡರ್. ಅಶೋಕ್ ರಾವುತ್ ಅವರು ಫೋನ್‌ನಲ್ಲಿ ಮಾತಾಡಿ, ನಿಮ್ಮಿಂದ ಈ ಕೆಲಸ ಸಾಧ್ಯವಿದೆ. ನೀವು ಪ್ರಧಾನಿ ಮೋದೀಜಿಯವರನ್ನು ಭೆಟ್ಟಿಯಾಗಿ ನಮ್ಮ ಪರವಾಗಿ ಹೇಳಿರಿ ಅಂತಾ ವಿನಂತಿಸಿಕೊಂಡಿದ್ದರು. ಅದರಂತೆ ಹೇಮಾಮಾಲಿನಿ ಅವರು ಮೋದಿಯವರನ್ನು ಭೆಟ್ಟಿಯಾಗಿ ನಮ್ಮ ಹೋರಾಟದ ಸ್ಥಿತಿಗತಿಗಳನ್ನು ವಿವರಿಸಿ ಕೆಲವು ದಾಖಲೆಗಳನ್ನು ನೀಡಿದಾಗ ಮೋದಿಯವರು ಹಸನ್ಮುಖರಾಗಿ ಒಪ್ಪಿಗೆ ಎಂಬಂತೆ ತಲೆ ಅಲ್ಲಾಡಿಸಿದ್ದಾರೆ.

ನಂತರ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಭೆಟ್ಟಿಯಾಗಿದ್ದಾರೆ. ಆಗ ಅವರು ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಏನು ಪ್ರಪೋಸಲ್ ಬರುತ್ತದೆಯೋ ಅದಕ್ಕೆ ಸಹಿ ಮಾಡುತ್ತೇನೆ ಅಂತಾ ನಗುಮುಖದಿಂದ ಹೇಳಿದ್ದಾರೆ.

ನಂತರ, ಕಮಾಂಡರ್ ಅಶೋಕ ರಾವುತ್, ವಿಜಯೇಂದ್ರಸಿಂಗ್ ಹಾಗೂ ಬಹುಗುಣ ಅವರನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಕರೆಸಿಕೊಂಡ ಹೇಮಮಾಲಿನಿಯವರು ಸಚಿವ ಭೂಪೇಂದ್ರ ಯಾದವ್ ಅವರನ್ನು ಭೆಟ್ಟಿಯಾಗಿದ್ದಾರೆ. ಅಲ್ಲಿ ಭೂಪೇಂದ್ರ ಯಾದವ್ ಅವರು ನಿಮಗೆ ಶೀಘ್ರದಲ್ಲೇ ಶುಭ ಸುದ್ದಿಕೊಡುತ್ತೇವೆ ಎಂದು ಭವರವಸೆ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಆಮರಣ ಉಪವಾಸ ಆಂದೋಲನವನ್ನು ಸ್ಥಗಿತಗೊಳಿಸಲಾಗಿದೆ. ಸರಕಾರದಿಂದ ಮುಂದೆ ವ್ಯತ್ಯಾಸವೆನಿಸಿದರೆ ಜನವರಿ 1 ರಿಂದ ಮತ್ತೆ ಹೋರಾಟ ಮುಂದುವರಿಸಲಾಗುವುದು. ಇದುವರೆಗೆ ಹೋರಾಟದಲ್ಲಿ ಭಾಗವಹಿಸಿ ಬೆಂಬಲಿಸಿದ ಎಲ್ಲ ಪಿಂಚಣಿದಾರರಿಗೆ ಅಭಿನಂದನೆಗಳು ಎಂದು ರಮಾಕಾಂತ ನರಗುಂದ ತಿಳಿಸಿದ್ದಾರೆ.

ಸತ್ಯಾಗ್ರಹದಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಸೇರಿದಂತೆ ಕರ್ನಾಟಕದರಿಂದ 286 ಮಂದಿ ಭಾಗವಹಿಸಿದ್ದರು.

Leave a Reply

error: Content is protected !!
LATEST
ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ... ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ: ಕಳ್ಳನ ಹೆಡೆಮುರಿಕಟ್ಟಿದ ಮಹಿಳಾ ಎಸ್‌ಐ ಕೃಷ್ಣರಾಜಪೇಟೆ: ಶ್ರೀ ಚೌಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಅದ್ದೂರಿ ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಗೆ ಹರಿದು ಬಂತು ಕೋಟಿ ಕೋಟಿ ಹಣ